ಇಂಡಿಯಾ ಮೈತ್ರಿಕೂಟ ಅನ್ಯಾಯದ ವಿರುದ್ಧ ಒಗ್ಗಟ್ಟಾಗಿ ಹೋರಾಡುತ್ತದೆ: ಬಂಗಾಳದಲ್ಲಿ ರಾಹುಲ್ ಗಾಂಧಿ
ಟಿಎಂಸಿಯೊಂದಿಗಿನ ಜಟಾಪಟಿಯ ನಡುವೆಯೇ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಇಂದು ಪಶ್ಚಿಮ ಬಂಗಾಳವನ್ನು ಪ್ರವೇಶಿಸಿದ್ದು, ಪಶ್ಚಿಮ ಬಂಗಾಳಕ್ಕೆ ಬಂದಿದ್ದಕ್ಕೆ ಖುಷಿಯಾಗಿದೆ. ನಿಮ್ಮ ಮಾತನ್ನು ಕೇಳಲು ಮತ್ತು ನಿಮ್ಮೊಂದಿಗೆ ನಿಲ್ಲಲು ನಾವು ಇಲ್ಲಿಗೆ ಬಂದಿದ್ದೇವೆ ಎಂದು ಕಾಂಗ್ರೆಸ್ ಸಂಸದ ಹೇಳಿದ್ದಾರೆ.
ದೆಹಲಿ ಜನವರಿ 25: ಮುಂಬರುವ ಲೋಕಸಭೆ ಚುನಾವಣೆಗೆ (Lok sabha Election) ಪಶ್ಚಿಮ ಬಂಗಾಳದಲ್ಲಿ ಇಂಡಿಯಾ ಬಣದಲ್ಲಿನ (INDIA) ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ (Mamata Banerjee) ಹೇಳಿದ ಒಂದು ದಿನದ ನಂತರ, ಸಂಸದ ರಾಹುಲ್ ಗಾಂಧಿ(Rahul Gandhi)ಅವರು ಗುರುವಾರ ಇಂಡಿಯಾ ಬ್ಲಾಕ್ ಅನ್ಯಾಯ ವಿರುದ್ಧ ಹೋರಾಡಲಿದೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ಬಂದಿರುವುದು ಸಂತಸ ತಂದಿದೆ ಎಂದು ವಯನಾಡ್ ಸಂಸದರು ಹೇಳಿದ್ದಾರೆ. ಟಿಎಂಸಿಯೊಂದಿಗಿನ ಜಟಾಪಟಿಯ ನಡುವೆಯೇ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಇಂದು ಪಶ್ಚಿಮ ಬಂಗಾಳವನ್ನು ಪ್ರವೇಶಿಸಿತು. ಪಶ್ಚಿಮ ಬಂಗಾಳಕ್ಕೆ ಬಂದಿದ್ದಕ್ಕೆ ಖುಷಿಯಾಗಿದೆ. ನಿಮ್ಮ ಮಾತನ್ನು ಕೇಳಲು ಮತ್ತು ನಿಮ್ಮೊಂದಿಗೆ ನಿಲ್ಲಲು ನಾವು ಇಲ್ಲಿಗೆ ಬಂದಿದ್ದೇವೆ. ಬಿಜೆಪಿ-ಆರ್ಎಸ್ಎಸ್ ದ್ವೇಷ, ಹಿಂಸಾಚಾರ ಮತ್ತು ಅನ್ಯಾಯವನ್ನು ಹರಡುತ್ತಿವೆ. ಆದ್ದರಿಂದ, ಇಂಡಿಯಾ ಮೈತ್ರಿಕೂಟ ಅನ್ಯಾಯದ ವಿರುದ್ಧ ಒಟ್ಟಾಗಿ ಹೋರಾಡಲಿದೆ ಎಂದು ಅವರು ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
Incredible scenes in Cooch Behar, West Bengal!
A spontaneous sea of people lined up to extend a warm welcome to Shri @RahulGandhi. The enthusiasm is palpable, and the #BharatJodoNyayYatra is off to an electric start in West Bengal. pic.twitter.com/TALc1dC5Lo
— Congress (@INCIndia) January 25, 2024
ತಾನು ಮತ್ತ ಕಾಂಗ್ರೆಸ್ ಪಕ್ಷ ಮಮತಾ ಬ್ಯಾನರ್ಜಿ ಅವರೊಂದಿಗೆ “ಒಳ್ಳೆಯ ವೈಯಕ್ತಿಕ ಸಂಬಂಧವನ್ನು” ಹೊಂದಿದ್ದೇವೆ. ಎರಡೂ ಕಡೆಯಿಂದ ವಿಮರ್ಶಾತ್ಮಕ ಟೀಕೆಗಳು ಮುಂಬರುವ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಮಾತುಕತೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ರಾಹುಲ್ ಈ ಹಿಂದೆ ಹೇಳಿದ್ದರು.
ಗುರುವಾರ, ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕೂಡ ಮಮತಾ ಇಂಡಿಯಾ ಮೈತ್ರಿಕೂಟದ ಪ್ರಮುಖ ಭಾಗ ಎಂದು ಪುನರುಚ್ಚರಿಸಿದರು. 28 ಪಕ್ಷಗಳನ್ನು ಒಳಗೊಂಡಿರುವ ಇಂಡಿಯಾ ಮೈತ್ರಿಕೂಟದ ಪ್ರಮುಖ ಆಧಾರ ಸ್ತಂಭ ಟಿಎಂಸಿ ಎಂದು ನಾನು ಹೇಳಿದ್ದೇನೆ. ಮಮತಾ ಬ್ಯಾನರ್ಜಿ ದೇಶದ ಅನುಭವಿ ಮತ್ತು ಪವರ್ ಪುಲ್ ನಾಯಕಿ. ನಾವು ಅವರನ್ನು ಗೌರವಿಸುತ್ತೇವೆ. ಅವರು ನಮ್ಮ ದೇಶದ ರಾಜಕೀಯದಲ್ಲಿ ವಿಶೇಷ ಸ್ಥಾನ ಮತ್ತು ಗುರುತನ್ನು ಹೊಂದಿದ್ದಾರೆಂದು ಎಲ್ಲರಿಗೂ ತಿಳಿದಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಇದನ್ನೂ ಓದಿ: ಎಡಪಕ್ಷಗಳು ಇಂಡಿಯಾ ಬ್ಲಾಕ್‌ನ ಕಾರ್ಯಸೂಚಿಯನ್ನು ನಿಯಂತ್ರಿಸುತ್ತಿವೆ: ಮಮತಾ ಬ್ಯಾನರ್ಜಿ
ಅವರು ಕೂಡ ಬಿಜೆಪಿಯನ್ನು ಸೋಲಿಸಲು ಬಯಸುತ್ತಾರೆ ಎಂದು ನನಗೆ ತುಂಬಾ ವಿಶ್ವಾಸವಿದೆ, ನಮಗೂ ಅದೇ ಬೇಕು. ನಾವು ಒಟ್ಟಾಗಿ ಹೋರಾಡುತ್ತೇವೆ. ನಾವು ಇಂಡಿಯಾ ಮೈತ್ರಿಯನ್ನು ಯಶಸ್ವಿಗೊಳಿಸುತ್ತೇವೆ. ಅದು ನಮ್ಮ ಕರ್ತವ್ಯ ಎಂದಿದ್ದಾರೆ ಜೈರಾಮ್ ರಮೇಶ್.
ಭಾರತ್ ಜೋಡೋ ನ್ಯಾಯ್ ಯಾತ್ರೆ ಇಂದು ಬೆಳಗ್ಗೆ ಅಸ್ಸಾಂನಿಂದ ಪಶ್ಚಿಮ ಬಂಗಾಳವನ್ನು ದಾಟಿದೆ. ಅಸ್ಸಾಂ ಕಾಂಗ್ರೆಸ್ ಮುಖ್ಯಸ್ಥೆ ಅಂಗಿಕಾ ದತ್ತಾ ಅವರು ಪಕ್ಷದ ಬಂಗಾಳ ಘಟಕದ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರಿಗೆ ‘ತ್ರಿವರ್ಣ ಧ್ವಜ’ ಹಸ್ತಾಂತರಿಸಿದರು.
ಏತನ್ಮಧ್ಯೆ, ರಾಹುಲ್ ಮಾರ್ಗದ ರಸ್ತೆಬದಿಯಲ್ಲಿ ನಿಂತಿದ್ದ ಹಲವಾರು ಟಿಎಂಸಿ ಬೆಂಬಲಿಗರು ” ಬಂಗಾಳಕ್ಕೆ ದೀದಿ ಸಾಕು” ಎಂದು ಬರೆದಿರುವ ಬ್ಯಾನರ್‌ಗಳನ್ನು ಹಿಡಿದಿದ್ದರು ಎಂದು ಎಎನ್‌ಐ ವರದಿ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:03 pm, Thu, 25 January 24