2022-24ರ ಏಷ್ಯನ್ ಚುನಾವಣಾ ಪ್ರಾಧಿಕಾರಗಳ ಸಂಘದ ಅಧ್ಯಕ್ಷನಾಗಿ ಭಾರತ ಅವಿರೋಧ ಆಯ್ಕೆ

| Updated By: ಸುಷ್ಮಾ ಚಕ್ರೆ

Updated on: May 11, 2022 | 7:02 PM

ಮೇ 7ರಂದು ಫಿಲಿಪೈನ್ಸ್‌ನ ಮನಿಲಾದಲ್ಲಿ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ 2022-2024ಕ್ಕೆ ಏಷ್ಯನ್ ಚುನಾವಣಾ ಪ್ರಾಧಿಕಾರಗಳ ಸಂಘದ ಹೊಸ ಅಧ್ಯಕ್ಷರಾಗಿ ಭಾರತವನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ

2022-24ರ ಏಷ್ಯನ್ ಚುನಾವಣಾ ಪ್ರಾಧಿಕಾರಗಳ ಸಂಘದ ಅಧ್ಯಕ್ಷನಾಗಿ ಭಾರತ ಅವಿರೋಧ ಆಯ್ಕೆ
ಏಷ್ಯನ್ ಚುನಾವಣಾ ಪ್ರಾಧಿಕಾರಗಳ ಸಂಘದ ಅಧ್ಯಕ್ಷನಾಗಿ ಆಯ್ಕೆಯಾದ ಭಾರತ
Follow us on

ನವದೆಹಲಿ: 2022-2024ರ ಏಷ್ಯನ್ ಚುನಾವಣಾ ಪ್ರಾಧಿಕಾರಗಳ ಸಂಘದ (AAEA) ಹೊಸ ಅಧ್ಯಕ್ಷರಾಗಿ ಭಾರತವನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. 2022ರ ಮೇ 7ರಂದು ಫಿಲಿಪೈನ್ಸ್‌ನ ಮನಿಲಾದಲ್ಲಿ (Manila) ಇತ್ತೀಚೆಗೆ ನಡೆದ ಕಾರ್ಯಕಾರಿ ಮಂಡಳಿ ಮತ್ತು ಸಾಮಾನ್ಯ ಸಭೆಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಉಪ ಚುನಾವಣಾ ಆಯುಕ್ತ ನಿತೇಶ್ ವ್ಯಾಸ್ ನೇತೃತ್ವದ ಭಾರತೀಯ ಚುನಾವಣಾ ಆಯೋಗದ 3 ಸದಸ್ಯರ ನಿಯೋಗ, ಮಣಿಪುರದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ), ರಾಜೇಶ್ ಅಗರವಾಲ್ ಮತ್ತು ರಾಜಸ್ಥಾನದ ಸಿಇಒ ಪ್ರವೀಣ್ ಗುಪ್ತಾ ಮನಿಲಾದಲ್ಲಿ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಭಾಗವಹಿಸಿದ್ದರು.

ಭಾರತದಲ್ಲಿ, ಇಂಡಿಯಾ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ಡೆಮಾಕ್ರಸಿ ಆ್ಯಂಡ್ ಎಲೆಕ್ಷನ್ ಮ್ಯಾನೇಜ್‌ಮೆಂಟ್ (IIIDEM) ನಿಯಮಿತವಾಗಿ ಅಂತಾರಾಷ್ಟ್ರೀಯ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇದರಲ್ಲಿ ಅನೇಕ AAEA ಸದಸ್ಯ ರಾಷ್ಟ್ರಗಳ ಅಧಿಕಾರಿಗಳು ಭಾಗವಹಿಸುತ್ತಾರೆ. 2019ರಿಂದ AAEA ಸದಸ್ಯ ರಾಷ್ಟ್ರಗಳಿಂದ 250ಕ್ಕೂ ಹೆಚ್ಚು ಅಧಿಕಾರಿಗಳು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇದಲ್ಲದೆ, IIIDEM ನಿರ್ದಿಷ್ಟ AAEA ಸದಸ್ಯ ರಾಷ್ಟ್ರಗಳಿಗೆ ಕಸ್ಟಮೈಸ್ ಮಾಡಿದ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಸಹ ನಡೆಸುತ್ತದೆ.

2021-22ರ ಅವಧಿಯಲ್ಲಿ ಬಾಂಗ್ಲಾದೇಶ ಚುನಾವಣಾ ಆಯೋಗದ 50 ಅಧಿಕಾರಿಗಳಿಗೆ ಕಾರ್ಯಕ್ರಮದಲ್ಲಿ ತರಬೇತಿ ನೀಡಲಾಯಿತು. AAEAಯ ಪ್ರತಿನಿಧಿಗಳು ಭಾರತದ ಚುನಾವಣಾ ಆಯೋಗವು ಆಯೋಜಿಸಿದ ಅಂತಾರಾಷ್ಟ್ರೀಯ ಚುನಾವಣಾ ಸಂದರ್ಶಕರ ಕಾರ್ಯಕ್ರಮದಲ್ಲಿ ನಿಯಮಿತವಾಗಿ ಭಾಗವಹಿಸುತ್ತಿದೆ. 12 AAEA ಸದಸ್ಯರಿಂದ 62 ಅಧಿಕಾರಿಗಳು 2022ರಲ್ಲಿ ಅಸೆಂಬ್ಲಿ ಚುನಾವಣೆಯ ಸಮಯದಲ್ಲಿ ECI ಆಯೋಜಿಸಿದ 3ನೇ ಇಂಟರ್​ ನ್ಯಾಷನಲ್ ವರ್ಚುವಲ್ ಎಲೆಕ್ಷನ್ ವಿಸಿಟರ್ಸ್ ಪ್ರೋಗ್ರಾಂ (IEVP)ನಲ್ಲಿ ಭಾಗವಹಿಸಿದ್ದಾರೆ. AAEA 118 ಸದಸ್ಯರ ವಿಶ್ವ ಚುನಾವಣಾ ಸಂಸ್ಥೆಗಳ (A-WEB) ಅಸೋಸಿಯೇಟ್ ಸದಸ್ಯ ಕೂಡ ಆಗಿದೆ.

ಮೇ 7ರಂದು ಫಿಲಿಪೈನ್ಸ್‌ನ ಮನಿಲಾದಲ್ಲಿ ನಡೆದ ಸಾಮಾನ್ಯ ಸಭೆ ಮತ್ತು ಕಾರ್ಯಕಾರಿ ಮಂಡಳಿ ಸಭೆಯಲ್ಲಿ 2022-2024ಕ್ಕೆ ಏಷ್ಯನ್ ಚುನಾವಣಾ ಪ್ರಾಧಿಕಾರಗಳ ಸಂಘದ (AAEA) ಹೊಸ ಅಧ್ಯಕ್ಷರಾಗಿ ಭಾರತವನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (ECI) ತಿಳಿಸಿದೆ. ಕಾರ್ಯಕಾರಿ ಮಂಡಳಿಗೆ ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಲ್ಲಿ ರಷ್ಯಾ, ಉಜ್ಬೇಕಿಸ್ತಾನ್, ಶ್ರೀಲಂಕಾ, ಮಾಲ್ಡೀವ್ಸ್, ತೈವಾನ್ ಮತ್ತು ಫಿಲಿಪೈನ್ಸ್ ಸೇರಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ