AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

“ಮದರ್ ಆಫ್ ಆಲ್ ಟ್ರೇಡ್ ಡೀಲ್ಸ್”: ಈ ಒಪ್ಪಂದದಿಂದ ಅಗ್ಗವಾಗಲಿದೆ ಈ ವಸ್ತುಗಳ ಬೆಲೆ

77ನೇ ಗಣರಾಜ್ಯೋತ್ಸವದಲ್ಲಿ EU ಮುಖ್ಯಸ್ಥೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಭಾರತವನ್ನು 'ಭದ್ರವಾದ ನಕ್ಷತ್ರ' ಎಂದು ಶ್ಲಾಘಿಸಿದರು. ಭಾರತ-EU ಮುಕ್ತ ವ್ಯಾಪಾರ ಒಪ್ಪಂದವು ಜಾಗತಿಕ ಸ್ಥಿರತೆಗೆ ಕೊಡುಗೆ ನೀಡುತ್ತದೆ. ಈ ಐತಿಹಾಸಿಕ ಒಪ್ಪಂದದಿಂದ ಯುರೋಪಿಯನ್ ಐಷಾರಾಮಿ ಕಾರುಗಳು, ವೈನ್ ಅಗ್ಗವಾಗಲಿದ್ದು, ಭಾರತದ ಜವಳಿ, ಆಭರಣಗಳಿಗೆ ತೆರಿಗೆ ರಹಿತ ಪ್ರವೇಶ ಸಿಗಲಿದೆ. ಲಕ್ಷಾಂತರ ಉದ್ಯೋಗ ಸೃಷ್ಟಿ ನಿರೀಕ್ಷೆಯಿದೆ. ಇದು ಉಭಯ ದೇಶಗಳಿಗೆ ಆರ್ಥಿಕ ಬಲ ನೀಡಲಿದೆ.

ಮದರ್ ಆಫ್ ಆಲ್ ಟ್ರೇಡ್ ಡೀಲ್ಸ್: ಈ ಒಪ್ಪಂದದಿಂದ ಅಗ್ಗವಾಗಲಿದೆ ಈ ವಸ್ತುಗಳ ಬೆಲೆ
EU ಮುಖ್ಯಸ್ಥೆ ಉರ್ಸುಲಾ ವಾನ್ ಡೆರ್ ಲೇಯೆನ್
ಅಕ್ಷಯ್​ ಪಲ್ಲಮಜಲು​​
|

Updated on:Jan 26, 2026 | 3:31 PM

Share

ದೆಹಲಿ, ಜ.26: 77ನೇ ಗಣರಾಜ್ಯೋತ್ಸವದ (2026) ಮುಖ್ಯ ಅತಿಥಿಯಾಗಿ ಭಾಗವಹಿಸಿರುವ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ನೀಡಿರುವ ಹೇಳಿಕೆ ಇದೀಗ ಭಾರೀ ಚರ್ಚೆಯಲ್ಲಿದೆ. ಯಶಸ್ವಿ ಭಾರತವು ಜಗತ್ತನ್ನು ಹೆಚ್ಚು ಸ್ಥಿರ, ಸಮೃದ್ಧ ಮತ್ತು ಸುರಕ್ಷಿತವಾಗಿಸುತ್ತದೆ. ಪ್ರಸ್ತುತ ಜಗತ್ತು ಸಂಘರ್ಷಗಳಿಂದ ಹರಿದುಹಂಚಿಹೋಗಿರುವಾಗ (Fractured World), ಭಾರತ ಮತ್ತು ಯುರೋಪ್‌ ದೇಶಗಳು ‘ಸಂವಾದ ಮತ್ತು ಮುಕ್ತತೆ’ಯ ಮೂಲಕ ಹೊಸ ಹಾದಿಯನ್ನು ತೋರಿಸುತ್ತಿವೆ ಎಂದು ಅವರು ಶ್ಲಾಘಿಸಿದ್ದಾರೆ. 77ನೇ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿರುವುದು “ಜೀವಮಾನದ ಗೌರವ” ಎಂದು ಹೇಳಿದರು. ಮಂಗಳವಾರ ನಿಗದಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಶೃಂಗಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಭಾರತ ಮತ್ತು ಯುರೋಪಿಯನ್ ಒಕ್ಕೂಟ (EU) ನಡುವೆ ಸುಮಾರು 18 ವರ್ಷಗಳಿಂದ ನಡೆಯುತ್ತಿರುವ ಮುಕ್ತ ವ್ಯಾಪಾರ ಒಪ್ಪಂದಕ್ಕೆ “ಮದರ್ ಆಫ್ ಆಲ್ ಟ್ರೇಡ್ ಡೀಲ್ಸ್” ಎಂಬ ಹೆಸರನ್ನು ಇಡಲಾಗಿದೆ.

ಜಗತ್ತು ಪ್ರಸ್ತುತ ಭೌಗೋಳಿಕ ರಾಜಕೀಯ ಉದ್ವಿಗ್ನತೆ (Geopolitical tensions) ಮತ್ತು ಆರ್ಥಿಕ ಅಸ್ಥಿರತೆಯನ್ನು ಎದುರಿಸುತ್ತಿರುವಾಗ, ಭಾರತವು ಒಂದು “ಭದ್ರವಾದ ನಕ್ಷತ್ರ”ದಂತೆ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ. ಭಾರತದ ಆರ್ಥಿಕ ಯಶಸ್ಸು ಕೇವಲ ದೇಶಕ್ಕಷ್ಟೇ ಅಲ್ಲ, ಇಡೀ ಜಗತ್ತಿನ ಪೂರೈಕೆ ಸರಪಳಿಯನ್ನು (Supply Chain) ಸ್ಥಿರಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಈ ಒಪ್ಪಂದದ ಭಾಗವಾಗಿ, ಯುರೋಪ್‌ನಿಂದ ಬರುವ ಐಷಾರಾಮಿ ಕಾರುಗಳು (ಉದಾಹರಣೆಗೆ ಮೆರ್ಸಿಡಿಸ್, ಬಿಎಂಡಬ್ಲ್ಯೂ), ವೈನ್ ಮತ್ತು ಎಲೆಕ್ಟ್ರಾನಿಕ್ಸ್ ಮೇಲಿನ ಆಮದು ಸುಂಕವನ್ನು ಭಾರತವು ಗಣನೀಯವಾಗಿ ಇಳಿಸಲು ಒಪ್ಪಿದೆ ಎಂದು ಹೇಳಲಾಗಿದೆ. ಇದಕ್ಕೆ ಪ್ರತಿಯಾಗಿ, ಭಾರತದ ಜವಳಿ (Textile), ಚರ್ಮದ ವಸ್ತುಗಳು, ಆಭರಣ ಮತ್ತು ಐಟಿ ಸೇವೆಗಳಿಗೆ ಯುರೋಪ್‌ನ 27 ದೇಶಗಳಲ್ಲಿ ತೆರಿಗೆ ರಹಿತ ಅಥವಾ ಕಡಿಮೆ ತೆರಿಗೆಯ ಪ್ರವೇಶ ಸಿಗಲಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಅಮೆರಿಕ ಫಸ್ಟ್’ ನೀತಿ ಮತ್ತು ಭಾರತದ ಮೇಲೆ ವಿಧಿಸಿರುವ ಸುಂಕಗಳ ನಡುವೆ, ಯುರೋಪ್‌ನೊಂದಿಗೆ ಈ ಒಪ್ಪಂದ ಮಾಡಿಕೊಳ್ಳುವುದು ಭಾರತಕ್ಕೆ ಆರ್ಥಿಕವಾಗಿ ದೊಡ್ಡ ಬಲ ನೀಡಲಿದೆ.ಕೇವಲ ವ್ಯಾಪಾರ ಮಾತ್ರವಲ್ಲದೆ, ಯುರೋಪ್‌ನ ಹಸಿರು ಇಂಧನ ಮತ್ತು ಸೆಮಿಕಂಡಕ್ಟರ್ ತಂತ್ರಜ್ಞಾನವನ್ನು ಭಾರತಕ್ಕೆ ವರ್ಗಾಯಿಸುವ ಬಗ್ಗೆಯೂ ಈ ಒಪ್ಪಂದದಲ್ಲಿ ಪ್ರಮುಖ ಒತ್ತು ನೀಡಲಾಗಿದೆ. ಭಾರತವು ಯುರೋಪಿಯನ್ ಕಾರುಗಳ ಮೇಲಿನ ಆಮದು ಸುಂಕವನ್ನು ಪ್ರಸ್ತುತ ಇರುವ ಶೇ. 110 ರಿಂದ ಶೇ. 40ಕ್ಕೆ ಇಳಿಸಲು ಯೋಜಿಸಿದೆ. ಇದರಿಂದ ಮರ್ಸಿಡಿಸ್-ಬೆನ್ಜ್, BMW, ಆಡಿ, ವೋಕ್ಸ್‌ವ್ಯಾಗನ್ ಮತ್ತು ಸ್ಕೋಡಾ 10 ರಿಂದ 50 ಲಕ್ಷ ರೂ. ವರೆಗೆ ಇಳಿಕೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಮೋದಿ ಜತೆಗಿನ ಒಂದೇ ಒಂದು ಮಾತು: ಪಾಕ್​​ನ ಮಹತ್ವ ಯೋಜನೆ ಭಾರತಕ್ಕೆ ತಂದ ಯುಎಇ

ಯುರೋಪಿನ ಪ್ರಸಿದ್ಧ ವೈನ್ ಮತ್ತು ಆಲ್ಕೋಹಾಲ್ ಉತ್ಪನ್ನಗಳ ಮೇಲಿನ ಸುಂಕವು ಗಣನೀಯವಾಗಿ ಕಡಿಮೆಯಾಗಲಿದೆ. ಇದರಿಂದಾಗಿ ಫ್ರಾನ್ಸ್, ಇಟಲಿ ಮತ್ತು ಸ್ಪೇನ್‌ನಿಂದ ಬರುವ ಉತ್ತಮ ಗುಣಮಟ್ಟದ ವೈನ್‌ಗಳು ಮತ್ತು ಸ್ಕಾಚ್‌ಗಳ ಬೆಲೆ ಇಳಿಯಲಿದೆ.ಯುರೋಪಿಯನ್ ಒಕ್ಕೂಟದಿಂದ ಆಮದು ಮಾಡಿಕೊಳ್ಳುವ ಸುಧಾರಿತ ತಂತ್ರಜ್ಞಾನದ ಉಪಕರಣಗಳು ಅಗ್ಗವಾಗಲಿವೆ. ಬೆಲ್ಜಿಯಂ ಮತ್ತು ಸ್ವಿಟ್ಜರ್ಲೆಂಡ್‌ನಂತಹ ದೇಶಗಳಿಂದ ಬರುವ ಪ್ರೀಮಿಯಂ ಚಾಕೊಲೇಟ್‌ಗಳು, ಚೀಸ್ ಮತ್ತು ಇತರ ಸಂಸ್ಕರಿಸಿದ ಆಹಾರ ಪದಾರ್ಥಗಳ ಬೆಲೆಯೂ ತಗ್ಗಲಿದೆ. ಈ ಒಪ್ಪಂದದಿಂದ ಕೇವಲ ವಿದೇಶಿ ವಸ್ತುಗಳು ಅಗ್ಗವಾಗುವುದು ಮಾತ್ರವಲ್ಲ, ಭಾರತದ ಜವಳಿ (Textile) ಮತ್ತು ಆಭರಣಗಳು ಯುರೋಪ್‌ಗೆ ಸುಲಭವಾಗಿ ರಫ್ತಾಗುವುದರಿಂದ ಭಾರತದಲ್ಲಿ ಲಕ್ಷಾಂತರ ಹೊಸ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:30 pm, Mon, 26 January 26