ಭಾರತ ಅತ್ಯಂತ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಹೊಂದಿದೆ: ಸಿಜೆಐ ಹೇಳಿಕೆಗೆ ಕಿರಣ್ ರಿಜಿಜು ಪ್ರತಿಕ್ರಿಯೆ

| Updated By: ರಶ್ಮಿ ಕಲ್ಲಕಟ್ಟ

Updated on: Jul 24, 2022 | 12:58 PM

ಭಾರತದ ನ್ಯಾಯಮೂರ್ತಿಗಳು ಮತ್ತು ನ್ಯಾಯಾಂಗ ವ್ಯವಸ್ಥೆ ಸಂಪೂರ್ಣವಾಗಿ ರಕ್ಷಿಸಲ್ಪಟ್ಟಿದೆ. ವಿಶ್ವದ ಬೇರೆ ಎಲ್ಲಿಯೂ ಭಾರತದಲ್ಲಿ ಇರುವಂತೆ ಯಾವುದೇ ನ್ಯಾಯಮೂರ್ತಿ ಅಥವಾ ನ್ಯಾಯಾಂಗ ವ್ಯವಸ್ಥೆಯು ಸ್ವತಂತ್ರವಾಗಿಲ್ಲ ಎಂದು ರಿಜಿಜು ಹೇಳಿದ್ದಾರೆ.

ಭಾರತ ಅತ್ಯಂತ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಹೊಂದಿದೆ: ಸಿಜೆಐ ಹೇಳಿಕೆಗೆ ಕಿರಣ್ ರಿಜಿಜು ಪ್ರತಿಕ್ರಿಯೆ
ಕಿರಣ್ ರಿಜಿಜು
Follow us on

ಮಾಧ್ಯಮಗಳು ಕಾಂಗರೂ ನ್ಯಾಯಾಲಯ (ನಿರ್ದಿಷ್ಟ ಹಿತಾಸಕ್ತಿಗಾಗಿ ನಡೆಸುವ ವಿಚಾರಣೆ) ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಮುಖ್ಯನ್ಯಾಯಮೂರ್ತಿ (CJI) ಎನ್.ವಿ ರಮಣ (NV Ramana)ಹೇಳಿಕೆಗೆ ಕೇಂದ್ರ ಕಾನೂನು ಸಚಿನ ಕಿರಣ್ ರಿಜಿಜು (Kiren Rijiju) ಪ್ರತಿಕ್ರಿಯಿಸಿದ್ದು ಭಾರತ ವಿಶ್ವದಲ್ಲೇ ಅತ್ಯಂತ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿದೆ ಎಂದಿದ್ದಾರೆ  ಭಾರತದ ನ್ಯಾಯಮೂರ್ತಿಗಳು ಮತ್ತು ನ್ಯಾಯಾಂಗ ವ್ಯವಸ್ಥೆ ಸಂಪೂರ್ಣವಾಗಿ ರಕ್ಷಿಸಲ್ಪಟ್ಟಿದೆ. ವಿಶ್ವದ ಬೇರೆ ಎಲ್ಲಿಯೂ ಭಾರತದಲ್ಲಿ ಇರುವಂತೆ ಯಾವುದೇ ನ್ಯಾಯಮೂರ್ತಿ ಅಥವಾ ನ್ಯಾಯಾಂಗ ವ್ಯವಸ್ಥೆಯು ಸ್ವತಂತ್ರವಾಗಿಲ್ಲ ಎಂದು ರಿಜಿಜು ಹೇಳಿದ್ದಾರೆ. ಮುಖ್ಯ ನ್ಯಾಯಮೂರ್ತಿ ಅವರ ಹೇಳಿಕೆಯನ್ನು ವೀಕ್ಷಣೆ ಎಂದು ಹೇಳಿದ ಕಾನೂನು ಸಚಿವರು, ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳು ನಡೆಸುವ ವಿಚಾರಣೆ ಬಗ್ಗೆ ಸಿಜೆಐ ಹೇಳಿಕೆ ಅವರ ವೀಕ್ಷಣೆಯಾಗಿದೆ. ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಇರುವ ಪರಿಸ್ಥಿತಿಯ ಪ್ರಕಾರ ಯಾರಾದರೂ ಹಾಗೆ ಭಾವಿಸಿದರೆ ನಾವು ಇದನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಚರ್ಚಿಸಬಹುದು, ಅವರು ಏನು ಹೇಳಿದ್ದಾರೆ ಎಂಬುದರ ಕುರಿತು ನಾನು ಈಗ ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದಿದ್ದಾರೆ.

ರಾಂಚಿಯಲ್ಲಿ ದಿವಂಗತ ಸತ್ಯಬ್ರತ ಸಿನ್ಹಾ ಸ್ಮರಣೆಯ ಉಪನ್ಯಾಸ ಕಾರ್ಯಕ್ರಮದಲ್ಲಿ ಉದ್ಘಾಟನಾ ಭಾಷಣ ಮಾಡಿದ ಸಿಜೆಐ, ಮಾಧ್ಯಮ ವಿಚಾರಣೆಗಳು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯ ನ್ಯಾಯೋಚಿತ ನಿರ್ವಹಣೆಗೆ ಅಡ್ಡಿಪಡಿಸುತ್ತದೆ. ಅನುಭವಿ ನ್ಯಾಯಮೂರ್ತಿಗಳು ನಿರ್ಧಾರ ತೆಗೆದುಕೊಳ್ಳಲು ಕಷ್ಟ ಅನಿಸುವ ಪ್ರಕರಣಗಳಲ್ಲಿ ಮಾಧ್ಯಮಗಳು ಕಾಂಗರೂ ಕೋರ್ಟ್ ಗಳನ್ನು ನಡೆಸುವುದನ್ನು ನಾವು ನೋಡುತ್ತಿದ್ದೇವೆ ಎಂದಿದ್ದಾರೆ. ಮಾಧ್ಯಮಗಳಲ್ಲಿ ಪಕ್ಷಪಾತದ ನಿಲುವು ಜನರ ಮೇಲೆ ಪ್ರಭಾವ ಬೀರುವುದು ಮಾತ್ರವಲ್ಲದೆ ಪ್ರಜಾತಂತ್ರವನ್ನು ದುರ್ಬಲಗೊಳಿಸಿ, ವ್ಯವಸ್ಥೆಗೆ ಹಾನಿ ಮಾಡುತ್ತದೆ ಎಂದಿದ್ದಾರೆ.

ಇದನ್ನೂ ಓದಿ
Draupadi Murmu: ಸಾಂಪ್ರದಾಯಿಕ ಸಂತಾಲಿ ಸೀರೆಯುಟ್ಟು ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ದ್ರೌಪದಿ ಮುರ್ಮು
Ram Nath Kovind: ಸಂಜೆ 7 ಗಂಟೆಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ವಿದಾಯ ಭಾಷಣ
Criminal Justice System: ಬೇಕಾಬಿಟ್ಟಿ ಬಂಧನ, ಜಾಮೀನು ಪಡೆಯಲು ಅಡೆತಡೆ, ಪ್ರಕ್ರಿಯೆಯೇ ಶಿಕ್ಷೆ ಎಂದ ಸಿಜೆಐ ರಮಣ

ಆಗಸ್ಟ್ 26ರಂದು ನಿವೃತ್ತಿ ಹೊಂದಲಿರುವ ರಮಣ ಅವರು ಮುದ್ರಣ ಮಾಧ್ಯಮಗಳಿಗಾದರೆ ನಿರ್ದಿಷ್ಟ ಹೊಣೆಗಾರಿಕೆ ಇರುತ್ತದೆ. ಆದರೆ ವಿದ್ಯುನ್ಮಾನ ಮಾಧ್ಯಮಗಳು ಒಮ್ಮೆ ತೋರಿಸಿ ಮಾಯವಾಗುವುದರಿಂದ ಅವರಿಗೆ ಹೊಣೆಗಾರಿಕೆಯೇ ಇರುವುದಿಲ್ಲ. ನ್ಯಾಯಮೂರ್ತಿಗಳ ವಿರುದ್ಧ ಮಾಧ್ಯಮಗಳಲ್ಲಿ ನಿರ್ದಿಷ್ಟವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ನಡೆಯುತ್ತದೆ ಎಂದು ಹೇಳಿದ್ದಾರೆ.

Published On - 12:56 pm, Sun, 24 July 22