ರಷ್ಯಾ-ಉಕ್ರೇನ್​ ಯುದ್ಧ ವಿಚಾರದಲ್ಲಿ ತಟಸ್ಥ ನಿಲುವು ಮುಂದುವರಿಸಿದ ಭಾರತ; ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾದ ನಿರ್ಣಯಕ್ಕೆ ಕೇವಲ 2 ಮತ !

| Updated By: Lakshmi Hegde

Updated on: Mar 24, 2022 | 10:39 AM

ನಿರ್ಣಯಕ್ಕೆ ಒಟ್ಟು 15 ರಾಷ್ಟ್ರಗಳ ಸಮ್ಮತಿ ಕೋರಿತ್ತು. ನಿರ್ಣಯ ಅಂಗೀಕಾರವಾಗಲು ರಷ್ಯಾಕ್ಕೆ 9 ಮತಗಳಾದರೂ ಬೇಕಿತ್ತು. ಆದರೆ 13 ರಾಷ್ಟ್ರಗಳು ದೂರವೇ ಉಳಿದವು. ಎರಡು ಮತಗಳು ಬಿದ್ದವು. 

ರಷ್ಯಾ-ಉಕ್ರೇನ್​ ಯುದ್ಧ ವಿಚಾರದಲ್ಲಿ ತಟಸ್ಥ ನಿಲುವು ಮುಂದುವರಿಸಿದ ಭಾರತ; ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾದ ನಿರ್ಣಯಕ್ಕೆ ಕೇವಲ 2 ಮತ !
ವಿಶ್ವ ಸಂಸ್ಥೆ ಭದ್ರತಾ ಮಂಡಳಿ ಸಭೆ
Follow us on

ರಷ್ಯಾ ಮತ್ತು ಉಕ್ರೇನ್​ ಮಧ್ಯದ ಯುದ್ಧದ (Russia-Ukraine War)ವಿಚಾರದಲ್ಲಿ ಭಾರತ ತನ್ನ ತಟಸ್ಥ ನಿಲುವನ್ನು ಮುಂದುವರಿಸಿದೆ. ಉಕ್ರೇನ್​​ನಲ್ಲಿ ಮಾನವೀಯ ಬಿಕ್ಕಟ್ಟು ಪರಿಸ್ಥಿತಿಗೆ ಸಂಬಂಧಪಟ್ಟಂತೆ ರಷ್ಯಾ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಮಂಡಿಸಿದ್ದ ನಿರ್ಣಯಕ್ಕೆ ಮತದಾನ ಮಾಡುವುದರಿಂದ ಭಾರತ ದೂರ ಉಳಿದಿದೆ. ಈ ನಿರ್ಣಯದ ಪರ ಕೇವಲ 2 ಮತಗಳು ಬಿದ್ದಿದ್ದು, ಭಾರತ ಸೇರಿ ಒಟ್ಟು 13 ರಾಷ್ಟ್ರಗಳು ಮತ ಹಾಕಲಿಲ್ಲ. ಆ ಎರಡು ಮತಗಳಲ್ಲಿ ಒಂದು ರಷ್ಯಾದ್ದು ಮತ್ತೊಂದು ಚೀನಾದ್ದು. ಹೀಗಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾದ ನಿರ್ಣಯ ತಿರಸ್ಕೃತಗೊಂಡಿದೆ.

ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ ಶಾಶ್ವತ ಮತ್ತು ವಿಟೋ ವೆಲ್ಡಿಂಗ್​ ಕೌನ್ಸಿಲ್​ ಸದಸ್ಯತ್ವ ಹೊಂದಿರುವ ರಷ್ಯಾ, ಉಕ್ರೇನ್​​ನಲ್ಲಿರುವ ಮಾನವೀಯ ಬಿಕ್ಕಟ್ಟಿನ ಕುರಿತು ಕರಡು ನಿರ್ಣಯ ಮಂಡಿಸಿತ್ತು. ಉಕ್ರೇನ್​​ನಲ್ಲಿ ಮಹಿಳೆಯರು ಮತ್ತು ಮಕ್ಕಳು, ದುರ್ಬಲರು ಸೇರಿ ನಾಗರಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅವರ ರಕ್ಷಣೆ ಮಾಡಲಾಗಿದೆ. ಅಲ್ಲಿನ ನಾಗರಿಕರ ಕ್ಷಿಪ್ರ, ಸುರಕ್ಷಿತ ಸ್ಥಳಾಂತರ ಮಾಡಲು ಸ್ವಯಂಪ್ರೇರಿತವಾಗಿಯೇ ಕದನ ವಿರಾಮ ಘೋಷಿಸಲಾಗುತ್ತಿದೆ.  ಈ ಮೂಲಕ ಮಾನವೀಯ ಕಾರಿಡಾರ್​ ರಚನೆಗಾಗಿ ರಷ್ಯಾ ಕ್ರಮಕೈಗೊಂಡಿದ್ದನ್ನು ಒಪ್ಪಿಕೊಳ್ಳಬೇಕು ಎಂದು ನಿರ್ಣಯದಲ್ಲಿ ಉಲ್ಲೇಖಿಸಿ, ಅದಕ್ಕೆ ಒಟ್ಟು 15 ರಾಷ್ಟ್ರಗಳ ಸಮ್ಮತಿ ಕೋರಿತ್ತು. ನಿರ್ಣಯ ಅಂಗೀಕಾರವಾಗಲು ರಷ್ಯಾಕ್ಕೆ 9 ಮತಗಳಾದರೂ ಬೇಕಿತ್ತು. ಆದರೆ 13 ರಾಷ್ಟ್ರಗಳು ದೂರವೇ ಉಳಿದವು. ಎರಡು ಮತಗಳು ಬಿದ್ದವು.

ರಷ್ಯಾ-ಉಕ್ರೇನ್ ಯುದ್ಧ ಶುರುವಾದಾಗಿನಿಂದಲೂ ಭಾರತ ಯಾವ ರಾಷ್ಟ್ರದ ಪರ-ವಿರೋಧವಾಗಿ ನಿಲ್ಲುತ್ತಿಲ್ಲ. ಬದಲಿಗೆ ಶಾಂತಿ ಜಪ ಪಠಿಸುತ್ತಿದೆ. ಈ ಹಿಂದೆ ಉಕ್ರೇನ್​​ ಮೇಲಿನ ರಷ್ಯಾದ ಆಕ್ರಮಣ ಖಂಡಿಸಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ತುರ್ತು ವಿಶೇಷ ಅಧಿವೇಶನ ನಡೆಸಲು ವಿಶ್ವ ಸಂಸ್ಥೆ ಭದ್ರತಾ ಮಂಡಳಿ ನಿರ್ಣಯ ಕೈಗೊಂಡಿತ್ತು.  ಆಗಲೂ ಸಹ ಭಾರತ ಮತದಾನದಿಂದ ದೂರವೇ ಇತ್ತು.

ಇದನ್ನೂ ಓದಿ: ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಶಾಕ್; ಏಪ್ರಿಲ್​ನಿಂದ ದುಬಾರಿಯಾಗಲಿವೆಯೇ ಹಲವು ಸೇವೆಗಳು? ಇಲ್ಲಿದೆ ಪೂರ್ಣ ವಿವರ

Published On - 8:33 am, Thu, 24 March 22