ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದಿಲ್ಲ; ರಾಹುಲ್​ ಗಾಂಧಿ ಕಳವಳ

| Updated By: ರಾಜೇಶ್ ದುಗ್ಗುಮನೆ

Updated on: Mar 11, 2021 | 10:37 PM

ಭಾರತವನ್ನು ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಪಟ್ಟದಿಂದ ಚುನಾವಣೆಯುಳ್ಳ ನಿರಂಕುಶ ಪ್ರಭುತ್ವ ರಾಷ್ಟ್ರ ಎಂಬಲ್ಲಿಗೆ ಇಳಿಸಿರುವ ವರದಿಯನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿರುವ ರಾಹುಲ್​ ಗಾಂಧಿ, ಸದ್ಯದ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸುವ ವಾಕ್ಯಗಳನ್ನು ಬರೆದುಕೊಂಡಿದ್ದಾರೆ.

ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದಿಲ್ಲ; ರಾಹುಲ್​ ಗಾಂಧಿ ಕಳವಳ
ರಾಹುಲ್​ ಗಾಂಧಿ
Follow us on

ದೆಹಲಿ: ವಿಶ್ವದ ಅತಿದೊಡ್ಡ ಲಿಖಿತ ರೂಪದ ಸಂವಿಧಾನ ಹೊಂದಿರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತ ಈಗ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದಿಲ್ಲ ಎಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಟ್ವೀಟ್​ ಮಾಡಿದ್ದಾರೆ. ಭಾರತದ ಪ್ರಸ್ತುತ ರಾಜಕೀಯ ವ್ಯವಸ್ಥೆ ಪ್ರಜಾಪ್ರಭುತ್ವ ಆಶಯಕ್ಕೆ ಸಂಪೂರ್ಣ ಬದ್ಧವಾಗಿಲ್ಲ ಎಂಬ ವರದಿ ಪ್ರಕಟಿಸಿರುವ ಸ್ವೀಡನ್​ ಇನ್​ಸ್ಟಿಟ್ಯೂಟ್ಸ್ ಡೆಮಾಕ್ರಸಿ ರಿಪೋರ್ಟ್ಸ್​ ಉಲ್ಲೇಖಿಸಿರುವ ರಾಹುಲ್​ ಗಾಂಧಿ ಟ್ವೀಟ್​ ಮೂಲಕ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ್ದಾರೆ.

ಭಾರತವನ್ನು ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಪಟ್ಟದಿಂದ ಚುನಾವಣೆಯುಳ್ಳ ನಿರಂಕುಶ ಪ್ರಭುತ್ವ ರಾಷ್ಟ್ರ ಎಂಬಲ್ಲಿಗೆ ಇಳಿಸಿರುವ ವರದಿಯನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿರುವ ರಾಹುಲ್​ ಗಾಂಧಿ, ಸದ್ಯದ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸುವ ವಾಕ್ಯಗಳನ್ನು ಬರೆದುಕೊಂಡಿದ್ದಾರೆ. ಸದರಿ ವರದಿಗೆ ಸಂಬಂಧಿಸಿದ ತಲೆಬರಹದಲ್ಲಿ ಭಾರತ ಪಾಕಿಸ್ತಾನದಂತೆಯೇ ಚುನಾವಣೆಯುಳ್ಳ ನಿರಂಕುಶ ಪ್ರಭುತ್ವ ರಾಷ್ಟ್ರವಾಗಿದ್ದು, ಅದರ ಪರಿಸ್ಥಿತಿ ಬಾಂಗ್ಲಾದೇಶಕ್ಕಿಂತಲೂ ಕಳಪೆ ಎಂದು ಟೀಕಿಸಲಾಗಿದೆ.

ಇದಕ್ಕೂ ಮುನ್ನ ಅಮೆರಿಕಾ ಸರ್ಕಾರ ಪೋಷಿತ ಫ್ರೀಡಮ್​ ಹೌಸ್​ ಎಂಬ ಎನ್​ಜಿಓ ಒಂದು, ಭಾರತವನ್ನು ಸ್ವಾತಂತ್ರ್ಯ ಎಂಬಲ್ಲಿಂದ ತುಸು ಸ್ವಾತಂತ್ರ್ಯವುಳ್ಳ ರಾಷ್ಟ್ರ ಎಂಬಲ್ಲಿಗೆ ಇಳಿಸಿ ವರದಿ ಪ್ರಕಟಿಸಿತ್ತು. ಅಂತೆಯೇ, ನರೇಂದ್ರ ಮೋದಿ ನೇತೃತ್ವದ ಸರ್ಕಾರ 2014ರಲ್ಲಿ ಆಡಳಿತಕ್ಕೆ ಏರಿದ ನಂತರ ಭಾರತದಲ್ಲಿ ರಾಜಕೀಯ ಹಕ್ಕು ಹಾಗೂ ನಾಗರೀಕ ಸ್ವಾತಂತ್ರ್ಯದ ಹನನವಾಗಿದೆ ಎಂದೂ ಫ್ರೀಡಮ್​ ಹೌಸ್​ ಅಭಿಪ್ರಾಯ ವ್ಯಕ್ತಪಡಿಸಿತ್ತು.

ರಾಹುಲ್​ ಗಾಂಧಿ ಟ್ವೀಟ್​ ಮಾಡಿದ ವರದಿ

ಆದರೆ, ಇದನ್ನು ಬಲವಾಗಿ ವಿರೋಧಿಸಿದ್ದ ಸರ್ಕಾರ, ಫ್ರೀಡಮ್​ ಹೌಸ್​ ವರದಿ ಸಂಪೂರ್ಣ ತಪ್ಪಾಗಿದ್ದು, ವಾಸ್ತವಕ್ಕೆ ದೂರವಾಗಿದೆ ಎಂದು ಹೇಳಿತ್ತು. ಅಲ್ಲದೇ, ಭಾರತ ಅತ್ಯುತ್ತಮ ರೀತಿಯಲ್ಲಿ ಪ್ರಜಾಪ್ರಭುತ್ವವನ್ನು ಪಾಲಿಸಿಕೊಂಡು ಸಾಗುತ್ತಿದೆ. ಆ ಬಗ್ಗೆ ಯಾವುದೇ ಸಂದೇಹ ಬೇಡ ಎಂದೂ ಹೇಳಿಕೊಂಡಿತ್ತು. ಅದಾದ ನಂತರ ಈಗ ಮತ್ತೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಸಡಿಲಗೊಳ್ಳುತ್ತಿರುವ ಬಗ್ಗೆ ಪ್ರಸ್ತಾಪವಾಗಿದ್ದು, ರಾಹುಲ್​ ಗಾಂಧಿ ಟ್ವೀಟ್​ ಮಾಡಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ:
Emergency: ತುರ್ತು ಪರಿಸ್ಥಿತಿ ಒಂದು ತಪ್ಪು ನಿರ್ಣಯ, ಅದನ್ನು ಒಪ್ಪಿಕೊಳ್ಳಲಾಗುವುದಿಲ್ಲ: ರಾಹುಲ್​ ಗಾಂಧಿ

ಪ್ರಜಾಪ್ರಭುತ್ವಕ್ಕೆ ಧಕ್ಕೆಯಾದಾಗ ಹೋರಾಟಕ್ಕೆ ಧುಮುಕುವೆ; ಹೆಚ್.ಸಿ.ಮಹದೇವಪ್ಪ