ಪ್ರಜಾಪ್ರಭುತ್ವಕ್ಕೆ ಧಕ್ಕೆಯಾದಾಗ ಹೋರಾಟಕ್ಕೆ ಧುಮುಕುವೆ; ಹೆಚ್.ಸಿ.ಮಹದೇವಪ್ಪ
ಪ್ರಜಾಪ್ರಭುತ್ವಕ್ಕೆ ಗಂಡಾಂತರ ಬಂದರೆ ಅಧಿಕಾರದ ಬಗ್ಗೆ ಯೋಚನೆ ಮಾಡುವುದಿಲ್ಲ. ಸಮಾನ ಮನಸ್ಕರು ಒಂದೆಡೆ ಸೇರಿದಾಗ ತನ್ನಷಕ್ಕೆ ತಾನೇ ಚಳವಳಿ ಆಗುತ್ತದೆ. ರೈತ ಚಳವಳಿ ಜೀವಂತವಾಗಿದ್ದರೆ ಪ್ರಜಾಪ್ರಭುತ್ವ ಗಟ್ಟಿಯಾಗಿರುತ್ತದೆ
ಬೆಂಗಳೂರು: ನಾನು ಮತ್ತು ಸಿದ್ದರಾಮಯ್ಯ 1989ರಿಂದಲೂ ಆತ್ಮೀಯರು. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಕೇವಲ ಅಂತೆಕಂತೆ ಅಷ್ಟೇ. ಸಮಯ ಬಂದಾಗಲೆಲ್ಲಾ ನಾವು ಹೋರಾಟ ಮಾಡುತ್ತೇವೆ. ಪ್ರಜಾಪ್ರಭುತ್ವಕ್ಕೆ ಧಕ್ಕೆ ಆದಾಗ ಹೋರಾಟ ಸೃಷ್ಟಿಯಾಗುತ್ತೆ. ಅಂತಹ ಚಳವಳಿಗಳಿಗೆ ನಾವು ಬೆಂಬಲ ನೀಡುತ್ತೇವೆ. ಆದರೆ ಅಹಿಂದ ವೇದಿಕೆಯನ್ನು ನಾವೇ ಸೃಷ್ಟಿ ಮಾಡಲ್ಲ ಎಂದು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.
ಡಾಲರ್ಸ್ ಕಾಲೋನಿಯಲ್ಲಿರುವ ಎಚ್.ಸಿ.ಮಹದೇವಪ್ಪ ನಿವಾಸಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ 3 ಗಂಟೆಗಳ ಕಾಲ ಚರ್ಚೆ ನಡೆಸಿದರು. ಚರ್ಚೆಯ ನಂತರ ಮಹದೇವಪ್ಪ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದರು.
ಪ್ರಜಾಪ್ರಭುತ್ವಕ್ಕೆ ಗಂಡಾಂತರ ಬಂದರೆ ಅಧಿಕಾರದ ಬಗ್ಗೆ ಯೋಚನೆ ಮಾಡುವುದಿಲ್ಲ. ಸಮಾನ ಮನಸ್ಕರು ಒಂದೆಡೆ ಸೇರಿದಾಗ ತನ್ನಷಕ್ಕೆ ತಾನೇ ಚಳವಳಿ ಆಗುತ್ತದೆ. ರೈತ ಚಳವಳಿ ಜೀವಂತವಾಗಿದ್ದರೆ ಪ್ರಜಾಪ್ರಭುತ್ವ ಗಟ್ಟಿಯಾಗಿರುತ್ತದೆ ಎಂದು ಎಚ್.ಸಿ.ಮಹದೇವಪ್ಪ ಹೇಳಿದರು.
ಸಂದರ್ಭ ಬಂದಾಗ ಹೇಳುತ್ತೇನೆ ಎಂದ ಸಿದ್ದರಾಮಯ್ಯ ಹಿಂದುಳಿದವರು, ಸಾಮಾಜಿಕವಾಗಿ ಶೋಷಣೆಗೆ ಒಳಗಾದವರಿಗೆ ಮೀಸಲಾತಿ ಸಿಗಬೇಕು. ಸಂವಿಧಾನ ಸಹ ಇದನ್ನೇ ಹೇಳಿದೆ. ಯಾರೇ ಮೀಸಲಾತಿ ಕೇಳಿದರೂ ನಾನು ವಿರೋಧ ಮಾಡಲ್ಲ. ಯಾರು ಬೇಕಾದರೂ ಮೀಸಲಾತಿಗಾಗಿ ಹೋರಾಟ ಮಾಡಲಿ. ನಾನು ಯಾವುದೇ ಸಂಘಟನೆ, ಹೋರಾಟದ ಬಗ್ಗೆ ಮಾತಾಡಲ್ಲ ಎಂದು ಹೇಳಿಕೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಹಳೆ ಅಹಿಂದ ನೆನಪು ಮತ್ತೆ ಕೆರಳಿಸುತ್ತಿದೆಯಾ ಎಂಬ ವಿಚಾರಕ್ಕೆ ಸಮಯ ಸಂದರ್ಭ ಬಂದಾಗ ಎಲ್ಲಾ ವಿಚಾರಗಳನ್ನು ಹೇಳುತ್ತೇನೆ ಎಂದರು.
ಇದನ್ನೂ ಓದಿ: ಪ್ರಾದೇಶಿಕ ಪಕ್ಷ ಉಳಿಸಲು ಶಕ್ತಿ ಮೀರಿ ಪ್ರಯತ್ನಿಸುವೆ; ಸರ್ಕಾರ ತೆಗೆಯುವ ಕೆಲಸದಲ್ಲಿ ನಾನು ಭಾಗಿಯಾಗಲ್ಲ: ಹೆಚ್.ಡಿ. ದೇವೇಗೌಡ