ಗಡಿ ನಿಯಂತ್ರಣಾ ರೇಖೆ ಬಳಿ ಭಾರತ-ಪಾಕ್ ಸೈನಿಕರಿಂದ ಈದ್ ಆಚರಣೆ; ಸಿಹಿ ಹಂಚಿ-ಶುಭಾಶಯ ಹೇಳಿಕೊಂಡ ಸೇನಾ ಸಿಬ್ಬಂದಿ
ಈದ್, ಹೋಳಿ, ದೀಪಾವಳಿ ಸೇರಿ ಹಿಂದು ಮತ್ತು ಮುಸ್ಲಿಮರ ಹಬ್ಬದ ದಿನ ಗಡಿಯಲ್ಲಿ ಎರಡೂ ದೇಶಗಳ ಯೋಧರು ಸಿಹಿ ಹಂಚಿಕೊಂಡು, ಶುಭಾಶಯ ಕೋರುವುದು ಸಾಮಾನ್ಯವಾಗಿದೆ.
ಶ್ರೀನಗರ: ಈದ್ ಉಲ್ ಫಿತರ್ ಹಬ್ಬದ ನಿಮಿತ್ತ ಇಂದು ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣಾ ರೇಖೆ (ಎಲ್ಒಸಿ) ಬಳಿ ಭಾರತ ಮತ್ತು ಪಾಕಿಸ್ತಾನ ಸೇನೆ ಯೋಧರು ಪರಸ್ಪರ ಸಿಹಿ ಹಂಚಿಕೊಂಡು, ಶುಭಾಶಯ ಕೋರಿದರು. ಈದ್, ಹೋಳಿ, ದೀಪಾವಳಿ ಸೇರಿ ಹಿಂದು ಮತ್ತು ಮುಸ್ಲಿಮರ ಹಬ್ಬದ ದಿನ ಗಡಿಯಲ್ಲಿ ಎರಡೂ ದೇಶಗಳ ಯೋಧರು ಸಿಹಿ ಹಂಚಿಕೊಂಡು, ಶುಭಾಶಯ ಕೋರುವುದು ಸಾಮಾನ್ಯವಾಗಿದೆ.
ಸಾಮಾನ್ಯವಾಗಿ ವಿಶೇಷ ಹಬ್ಬಗಳ ದಿನದಂದು ಕುಪ್ವಾರಾದ ಟ್ಯಾಂಗ್ಧರ್ನಲ್ಲಿರುವ ಕಿಶನ್ಗಂಗಾ ನದಿಯ ತಿತ್ವಾಲ್ ಕ್ರಾಸಿಂಗ್ ಮತ್ತು ಉರಿಯಲ್ಲಿರುವ ಕಮಾನ್ ಅಮನ್ ಸೇತುವೆಯ ಬಳಿ ಎರಡೂ ದೇಶಗಳ ಯೋಧರು ಸೇರಿ ಹಬ್ಬ ಆಚರಿಸುತ್ತಾರೆ. ಹಾಗೇ ಇಂದು ಪಾಕಿಸ್ತಾನ ಸೇನೆ ಸೈನಿಕರು ಪೂಂಚ್ನ ಗಡಿ ನಿಯಂತ್ರಣಾ ರೇಖೆ ಬಳಿಯೂ ಕೂಡ ಭಾರತೀಯ ಯೋಧರಿಗೆ ಸಹಿ ಹಂಚಿದೆ. ಅದಕ್ಕೆ ಪ್ರತಿಯಾಗಿ ನಮ್ಮ ಯೋಧರೂ ಕೂಡ ಅವರಿಗೆ ಶುಭಕೋರಿದ್ದಾರೆ.
ಗಡಿನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನ ಸದಾ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುತ್ತದೆ. ಇಲ್ಲಿ ಗುಂಡಿನ ಶಬ್ದ ಸಾಮಾನ್ಯ. ಇತ್ತೀಚೆಗೆ ಹಲವು ದಿನಗಳಿಂದ ಗಡಿಯ ಬಳಿ ಪರಸ್ಪರ ಗುಂಡಿನ ದಾಳಿ ತುಸು ಕಡಿಮೆಯಾಗಿದೆ. ಇನ್ನು ಹೀಗೆ ಸಿಹಿ ಹಂಚುವಾಗ ಕೊರೊನಾ ನಿಯಂತ್ರಣಕ್ಕೆ ಸಂಬಂಧಪಟ್ಟ ಎಲ್ಲ ಶಿಷ್ಟಾಚಾರಗಳನ್ನೂ ಪಾಲಿಸಲಾಗಿದೆ ಎಂದು ಸೇನಾ ವಕ್ತಾರರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಂಜು ಕೇವಲ ಕಾಮಿಡಿಯನ್, ಹೀರೋ ಆಗಲ್ಲ; ಮನೆಯಿಂದ ಹೊರ ಬಂದ ಸಂಬರಗಿ ಮಾತು
ಕೊರೊನಾ ನೆಗೆಟಿವ್ ಬಂದ ಮೇಲೆ ನಟ ಅಲ್ಲು ಅರ್ಜುನ್ ತಮ್ಮ ಕುಟುಂಬವನ್ನು ಮತ್ತೆ ಭೇಟಿಯಾಗಿದ್ದಾರೆ