
ನವದೆಹಲಿ, ಮೇ 10: ಭಾರತ ಪಾಕಿಸ್ತಾನ (Indo Pak Tension) ನಡುವಣ ಉದ್ವಿಗ್ನ ಪರಿಸ್ಥಿತಿ ಮಧ್ಯೆ ಭಾರತ ಸರ್ಕಾರ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಮೇ 15 ರ ಗುರುವಾರ ಬೆಳಿಗ್ಗೆ 5:29 ರವರೆಗೆ ದೇಶಾದ್ಯಂತ 32 ವಿಮಾನ ನಿಲ್ದಾಣಗಳಲ್ಲಿ (Airports) ಕಾರ್ಯಾಚರಣೆ ಸ್ಥಗಿತಗೊಳಿಸಲು ಆದೇಶಿಸಿದೆ. ಪಾಕಿಸ್ತಾನ (Pakistan) ನಡೆಸುತ್ತಿರುವ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ. ಈ ಹಿಂದೆ ಮೇ 10ರ ವರೆಗೆ ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವ ತೀರ್ಮಾನ ಘೋಷಿಸಲಾಗಿತ್ತು. ಆದರೆ, ಇದೀಗ ಪರಿಸ್ಥಿತಿ ಬಿಗಡಾಯಿಸಿರುವ ಕಾರಣ ಮೇ 15 ರ ವರೆಗೆ ವಿಸ್ತರಣೆ ಮಾಡಲಾಗಿದೆ.
ಚಂಡೀಗಢ, ಶ್ರೀನಗರ, ಅಮೃತಸರ, ಲೂಧಿಯಾನ, ಭುಂತರ್, ಕಿಶನ್‌ಗಢ, ಪಟಿಯಾಲ, ಶಿಮ್ಲಾ, ಜೈಸಾಲ್ಮೇರ್, ಪಠಾಣ್‌ಕೋಟ್, ಜಮ್ಮು, ಬಿಕಾನೇರ್, ಲೇಹ್, ಪೋರ್‌ಬಂದರ್ ಸೇರಿದಂತೆ 32 ವಿಮಾನ ನಿಲ್ದಾಣಗಳನ್ನು ಮೇ 15 ರವರೆಗೆ ಮುಚ್ಚಲಾಗುತ್ತದೆ. ಈ ಎಲ್ಲಾ ವಿಮಾನ ನಿಲ್ದಾಣಗಳು ಭಾರತ-ಪಾಕಿಸ್ತಾನ ಗಡಿಯ ಸಮೀಪವಿರುವ ನಗರಗಳಲ್ಲಿವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಭದ್ರತಾ ಕಾರಣಗಳಿಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.
➡️ Temporary Suspension of Civil Flight Operations at Select Airports and Air Routes
➡️ The Airports Authority of India (AAI) and relevant aviation authorities have issued a series of Notices to Airmen (NOTAMs) announcing the temporary closure of 32 airports across northern and… pic.twitter.com/MZEfbI1YkJ
— PIB India (@PIB_India) May 9, 2025
ಭಾರತ ಮತ್ತು ಪಾಕಿಸ್ತಾನ ನಡುವಣ ಸಂಘರ್ಷದ ಹಿನ್ನೆಲೆಯಲ್ಲಿ, ಹಲವಾರು ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಪ್ರಯಾಣ ಮಾರ್ಗಸೂಚಿ, ಸಲಹೆಗಳನ್ನು ಬಿಡುಗಡೆ ಮಾಡಿವೆ. ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ಅಪ್ಡೇಟ್ಗಳನ್ನು ತಿಳಿದುಕೊಳ್ಳುವಂತೆ ಸಲಹೆ ನೀಡಿವೆ.
‘ವಿಮಾನಯಾನ ಅಧಿಕಾರಿಗಳು ಹೊರಡಿಸಿದ ಅಧಿಸೂಚನೆಯ ಪ್ರಕಾರ, ದೇಶಾದ್ಯಂತ ಹಲವಾರು ವಿಮಾನ ನಿಲ್ದಾಣಗಳ ಮುಚ್ಚುವಿಕೆ ಸದ್ಯಕ್ಕೆ ಮುಂದುವರಿಯಲಿದೆ. ಏತನ್ಮಧ್ಯೆ, ಜಮ್ಮು, ಶ್ರೀನಗರ, ಲೇಹ್, ಜೋಧ್‌ಪುರ, ಅಮೃತಸರ, ಚಂಡೀಗಢ, ಭುಜ್, ಜಾಮ್‌ನಗರ, ರಾಜ್‌ಕೋಟ್‌ಗೆ ಎಲ್ಲಾ ವಿಮಾನಗಳನ್ನು ಗುರುವಾರ (ಮೇ 15) ಬೆಳಿಗ್ಗೆ 5:29 ರವರೆಗೆ ರದ್ದುಗೊಳಿಸಲಾಗಿದೆ’ ಏರ್ ಇಂಡಿಯಾ ಎಕ್ಸ್ ಸಂದೇಶದಲ್ಲಿ ಶುಕ್ರವಾರ ತಿಳಿಸಿತ್ತು.
ಇದನ್ನೂ ಓದಿ: ಭಾರತದ ವಿರೋಧದ ನಡುವೆಯೂ ಪಾಕಿಸ್ತಾನಕ್ಕೆ ಸಾಲ ಕೊಟ್ಟ IMF
ಮೇ 15 ರವರೆಗೆ 24 ನಗರಗಳಲ್ಲಿನ ವಿಮಾನ ನಿಲ್ದಾಣಗಳನ್ನು ಮುಚ್ಚಿರುವುದರಿಂದ ಇಂಡಿಗೋ ವಿಮಾನಯಾನ ಸಂಸ್ಥೆ ಕೂಡ ವಿಮಾನ ರದ್ದತಿಯ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ