ಪಾಕಿಸ್ತಾನದ ಯಾವುದೇ ಧಾರ್ಮಿಕ ಸ್ಥಳಗಳ ಮೇಲೆ ಭಾರತ ದಾಳಿ ಮಾಡಿಲ್ಲ; ವಿಕ್ರಮ್ ಮಿಸ್ರಿ ಸ್ಪಷ್ಟನೆ

ಭಾರತ ಮತ್ತು ಪಾಕಿಸ್ತಾನದ ನಡುವೆ ಮೇ 8ರಂದು ನಡೆದ ದಾಳಿಯ ಬಗ್ಗೆ ಮಾಹಿತಿ ನೀಡಲು ಇಂದು ವಿದೇಶಾಂಗ ಸಚಿವಾಲಯ ಹಾಗೂ ಸಶಸ್ತ್ರ ಪಡೆ ಸುದ್ದಿಗೋಷ್ಠಿ ಆಯೋಜಿಸಿತ್ತಯ. ಈ ವೇಳೆ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ನಿನ್ನೆ ರಾತ್ರಿ ಭಾರತದ ಹಲವು ನಗರಗಳ ಮೇಲೆ ಡ್ರೋನ್ ದಾಳಿಗೆ ಯತ್ನ ನಡೆಸಲಾಗಿದೆ. ಡ್ರೋನ್ ದಾಳಿ ವೇಳೆ ನಾಗರಿಕ ವಿಮಾನಗಳ ಹಾರಾಟ ಸ್ಥಗಿತಗೊಳಿಸಿರಲಿಲ್ಲ. ಲಾಹೋರ್‌, ಕರಾಚಿಯಲ್ಲಿ ವಿಮಾನಗಳ ಹಾರಾಟ ಎಂದಿನಂತೆ ಇತ್ತು. ಡ್ರೋನ್ ದಾಳಿ ನಡೆಸಿಲ್ಲ ಎಂದು ಎಂದಿನಂತೆ ಪಾಕಿಸ್ತಾನ ಸುಳ್ಳು ಹೇಳಿದೆ. ಭಾರತದ ಪ್ರತೀಕಾರದ ದಾಳಿಯಲ್ಲಿ ಪಾಕ್ ಸಾಕಷ್ಟು ನಷ್ಟ ಅನುಭವಿಸಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಯಾವುದೇ ಧಾರ್ಮಿಕ ಸ್ಥಳಗಳ ಮೇಲೆ ಭಾರತ ದಾಳಿ ಮಾಡಿಲ್ಲ; ವಿಕ್ರಮ್ ಮಿಸ್ರಿ ಸ್ಪಷ್ಟನೆ
Vikram Misri

Updated on: May 09, 2025 | 6:33 PM

ನವದೆಹಲಿ, ಮೇ 9: ಭಾರತ-ಪಾಕಿಸ್ತಾನ ಉದ್ವಿಗ್ನತೆಯ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ,’ಭಾರತ ಪಾಕಿಸ್ತಾನದ ಯಾವುದೇ ಧಾರ್ಮಿಕ ಸ್ಥಳಗಳ ಮೇಲೆ ದಾಳಿ ಮಾಡಿಲ್ಲ. ಪಾಕಿಸ್ತಾನ ವಿನಾಕಾರಣ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ’ ಎಂದು ಹೇಳಿದ್ದಾರೆ. LOC ಉದ್ದಕ್ಕೂ ಶಾಲೆಗಳು ಮತ್ತು ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ದಾಳಿಯ ಕುರಿತು ದೆಹಲಿಯಲ್ಲಿ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮಾಹಿತಿ ನೀಡಿದ್ದು, ಮೇ 7ರ ಮುಂಜಾನೆ LOC ಯಾದ್ಯಂತ ಭಾರೀ ಶೆಲ್ ದಾಳಿಯ ಸಮಯದಲ್ಲಿ, ಪಾಕಿಸ್ತಾನದಿಂದ ಹಾರಿಸಲಾದ ಶೆಲ್ ಪೂಂಚ್‌ನ ಕ್ರೈಸ್ಟ್ ಶಾಲೆಯ ಹಿಂದೆ ಬಿದ್ದಿತು. ಆ ಶೆಲ್ ಶಾಲೆಯ ಇಬ್ಬರು ವಿದ್ಯಾರ್ಥಿಗಳ ಮನೆಗೆ ಬಡಿದಿದ್ದು, ದುರದೃಷ್ಟವಶಾತ್ ಅವರು ಪ್ರಾಣ ಕಳೆದುಕೊಂಡರು ಮತ್ತು ಅವರ ಪೋಷಕರು ಗಾಯಗೊಂಡರು. ಪಾಕಿಸ್ತಾನದ ಶೆಲ್ ದಾಳಿಯ ಸಮಯದಲ್ಲಿ ಹಲವಾರು ಶಾಲಾ ಸಿಬ್ಬಂದಿ ಮತ್ತು ಸ್ಥಳೀಯರು ಶಾಲೆಯ ಭೂಗತ ಸ್ಥಳದಲ್ಲಿ ಆಶ್ರಯ ಪಡೆದರು. ಅದೃಷ್ಟವಶಾತ್ ಶಾಲೆಯನ್ನು ಮುಚ್ಚಲಾಗಿತ್ತು. ಇಲ್ಲದಿದ್ದರೆ ಹೆಚ್ಚಿನ ನಷ್ಟಗಳು ಸಂಭವಿಸುತ್ತಿದ್ದವು. ಗುರುದ್ವಾರಗಳು, ಚರ್ಚ್‌ಗಳು ಮತ್ತು ದೇವಾಲಯಗಳು ಸೇರಿದಂತೆ ನಿರ್ದಿಷ್ಟ ವಿನ್ಯಾಸದೊಂದಿಗೆ ಪೂಜಾ ಸ್ಥಳಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಶೆಲ್ ದಾಳಿ ನಡೆಸುತ್ತಿದೆ” ಎಂದಿದ್ದಾರೆ.

ಇದನ್ನೂ ಓದಿ: ಟರ್ಕಿ ಡ್ರೋನ್‌ ಬಳಸಿ ಭಾರತದ 36 ಸ್ಥಳಗಳ ಮೇಲೆ ಪಾಕಿಸ್ತಾನ ದಾಳಿಗೆ ಯತ್ನ; ವಿದೇಶಾಂಗ ಸಚಿವಾಲಯ

ಇದನ್ನೂ ಓದಿ
ಸೇನಾ ಕಾರ್ಯಾಚರಣೆಯ ಲೈವ್ ಬೇಡ: ಟಿವಿ ಚಾನೆಲ್​ಗಳಿಗೆ ರಕ್ಷಣಾ ಇಲಾಖೆ ಸೂಚನೆ
ಪಾಕ್​ ಜನ ಪ್ರಧಾನಿ ಶೆಹಬಾಜ್ ವಿರುದ್ಧ ಗರಂ ಆಗಿದ್ದೇಕೆ?
ಭಾರತೀಯ ಸೇನೆ ದಾಳಿ ಮಾಡಿದ ಪಾಕಿಸ್ತಾನದ ನಗರಗಳ ಇತಿಹಾಸವೇನು ಗೊತ್ತೇ?
ಭಾರತದಿಂದ ಎರಡನೇ ಬಾರಿ ದಾಳಿ, ಅಕ್ಷರಶಃ ನಲುಗಿದ ಪಾಕ್, ಏನೇನಾಯ್ತು?

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು ಅದರ ನಂತರ ಮೇ 7 ರಂದು ಭಾರತ ನೀಡಿದ ಪ್ರತಿಕ್ರಿಯೆಯು ಚರ್ಚೆಯ ಕೇಂದ್ರಬಿಂದುವಾಗಿತ್ತು. ವಿದೇಶಾಂಗ ಕಾರ್ಯದರ್ಶಿಯವರು ಈ ಬೆಳವಣಿಗೆಗಳ ಕುರಿತು ಸಚಿವರೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ಕೆಲಸ ಮಾಡುವ ಅಮೆರಿಕದ ಬದ್ಧತೆಯನ್ನು ಸಚಿವರು ಬಹಳವಾಗಿ ಶ್ಲಾಘಿಸಿದರು. ಆಪರೇಷನ್ ಸಿಂಧೂರ್‌ಗೆ ಸಂಬಂಧಿಸಿದಂತೆ ಭಾರತ ತೆಗೆದುಕೊಂಡ ಗುರಿ ಕ್ರಮಗಳನ್ನು ಸಹ ಅವರು ಒತ್ತಿ ಹೇಳಿದರು. ಪಾಕಿಸ್ತಾನದಿಂದ ಉಲ್ಬಣಗೊಳ್ಳುವ ಯಾವುದೇ ಪ್ರಯತ್ನಗಳನ್ನು ಭಾರತ ದೃಢವಾಗಿ ಎದುರಿಸುತ್ತದೆ ಎಂದು ಸಚಿವರು ಒತ್ತಿ ಹೇಳಿದ್ದಾರೆ ಎಂದಿದ್ದಾರೆ.


“ಭಾರತದ ಮೇಲೆ ಹಾರಿಸಿದ್ದ ಹಲವು ಡ್ರೋನ್‌ಗಳನ್ನು ಧ್ವಂಸಗೊಳಿಸಿದ್ದೇವೆ. ಉರಿ, ಪೂಂಚ್‌, ಅಖ್ನೂರ್‌ ಸೇರಿ ಎಲ್‌ಒಸಿಯಲ್ಲಿ ಭಾರಿ ಗುಂಡಿನ ದಾಳಿ ನಡೆದಿದೆ. ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಗೂ ತಕ್ಕ ತಿರುಗೇಟು ನೀಡಿದ್ದೇವೆ. ಪಂಜಾಬ್‌ ಏರ್ ಡಿಫೆನ್ಸ್‌ ಸಿಸ್ಟಮ್‌ ಮೂಲಕ ಪಾಕಿಸ್ತಾನದ ಸೇನೆಯ ದಾಳಿ ಯತ್ನ ವಿಫಲಗೊಳಿಸಲಾಗಿದೆ. ಪಾಕಿಸ್ತಾನದಿಂದ 300-400 ಡ್ರೋನ್‌ಗಳನ್ನು ಹಾರಿಸಲಾಗಿದೆ. ಮೇ 8 ಮತ್ತು ಮೇ 9ರ ಮಧ್ಯರಾತ್ರಿ ಪಾಕಿಸ್ತಾನಿ ಸೇನೆಯು ಪಶ್ಚಿಮ ಗಡಿಗಳಲ್ಲಿನ ಮಿಲಿಟರಿ ಸ್ಥಾಪನೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಲೇಹ್‌ನಿಂದ ಸರ್ ಕ್ರೀಕ್‌ವರೆಗೆ ಪಾಕಿಸ್ತಾನಿ ಸೇನೆಯು ಒಳನುಸುಳುವಿಕೆಗಾಗಿ ಡ್ರೋನ್‌ಗಳನ್ನು ಬಳಸಿತು. ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನಿ ಡ್ರೋನ್‌ಗಳನ್ನು ತಟಸ್ಥಗೊಳಿಸಿವೆ. ಈ ಡ್ರೋನ್‌ಗಳನ್ನು ಗುಪ್ತಚರ ಮಾಹಿತಿ ಸಂಗ್ರಹಿಸಲು ಬಳಸಲಾಗುತ್ತಿತ್ತು. ಆರಂಭಿಕ ವರದಿಗಳ ಪ್ರಕಾರ, ಪಾಕಿಸ್ತಾನದ ಬಳಸಿದ ಡ್ರೋನ್​ಗಳು ಟರ್ಕಿಯ ಸೋಂಗಾರ್ ಡ್ರೋನ್‌ಗಳು. ಪಾಕಿಸ್ತಾನಿ ಯುಎವಿ ಕೂಡ ಭಟಿಂಡಾದಲ್ಲಿರುವ ಮಿಲಿಟರಿ ನೆಲೆಯ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಆದರೆ ಆ ಪ್ರಯತ್ನವನ್ನು ವಿಫಲಗೊಳಿಸಲಾಯಿತು” ಎಂದು ಕರ್ನಲ್ ಸೋಫಿಯಾ ಖುರೇಷಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ