ಯುದ್ಧಕ್ಕೆ ಸಜ್ಜಾಯಿತಾ ಭಾರತ?; ಮೇ 7ರಂದು ರಕ್ಷಣಾ ಕವಾಯತು ನಡೆಸಲು ರಾಜ್ಯಗಳಿಗೆ ಸೂಚನೆ

ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ಯುದ್ಧದ ಸಮಯದಲ್ಲಿ ಮಾಡಲಾಗುವ ರಕ್ಷಣಾ ಅಣಕು ಕವಾಯತುಗಳನ್ನು ನಡೆಸಲು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ. ಮೇ 7ರಂದು ಯುದ್ಧದ ಸಂದರ್ಭದ ಮಾಕ್ ಡ್ರಿಲ್ ಮಾಡಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ವಾಯುದಾಳಿ ಸೈರನ್‌ಗಳು, ಜನರನ್ನು ಸ್ಥಳಾಂತರಿಸುವ ಪ್ರಕ್ರಿಯೆಯ ಅಣಕು ಪ್ರದರ್ಶನ ನಡೆಸಲು ಸೂಚನೆ ನೀಡಲಾಗಿದೆ. ಪಾಕಿಸ್ತಾನದ ಜೊತೆಗಿನ ಭಾರತದ ಉದ್ವಿಗ್ನತೆ ಹೆಚ್ಚಾಗಿರುವ ಈ ಸಂದರ್ಭದ ಈ ಸೂಚನೆಯಿಂದ ಕೇಂದ್ರ ಸರ್ಕಾರ ಪಾಕಿಸ್ತಾನದೊಂದಿಗೆ ಯುದ್ಧಕ್ಕೆ ಸಿದ್ಧತೆ ನಡೆಸಿದೆಯೇ? ಎಂಬ ಚರ್ಚೆಗಳು ಮತ್ತೆ ಶುರುವಾಗಿವೆ.

ಯುದ್ಧಕ್ಕೆ ಸಜ್ಜಾಯಿತಾ ಭಾರತ?; ಮೇ 7ರಂದು ರಕ್ಷಣಾ ಕವಾಯತು ನಡೆಸಲು ರಾಜ್ಯಗಳಿಗೆ ಸೂಚನೆ
Rajnath Singh With Armed Forces Chiefs

Updated on: May 05, 2025 | 7:30 PM

ನವದೆಹಲಿ, ಮೇ 5: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terror Attack) ಪ್ರವಾಸಿಗರ ಮೇಲೆ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಎರಡೂ ದೇಶಗಳು ತಮ್ಮ ಯುದ್ಧೋಪಕರಣಗಳ ತಾಲೀಮು ನಡೆಸಿದ್ದು, ಬಲಾಬಲ ಪ್ರದರ್ಶಿಸುತ್ತಿವೆ. ಇದೀಗ ಮೇ 7ರಂದು ದೇಶಾದ್ಯಂತ ಮಾಕ್ ಡ್ರಿಲ್‌ ನಡೆಸುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿದೆ. ಕೇಂದ್ರ ಗೃಹ ಸಚಿವಾಲಯ ಇಂದು ಆದೇಶ ನೀಡಿದ್ದು, ನಾಗರಿಕರ ರಕ್ಷಣೆಯ ಸಂಬಂಧ ಮೇ 7ರಂದು ದೇಶಾದ್ಯಂತ ಅಣಕು ಪ್ರದರ್ಶನ ಮಾಡಿಸಿ. ಎಲ್ಲಾ ರಾಜ್ಯಗಳಲ್ಲಿ ವಾಯುದಾಳಿಯ ಸೈರನ್‌ ವ್ಯವಸ್ಥೆ ಇರುವಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಎಲ್ಲ ರಾಜ್ಯಗಳಲ್ಲೂ ಯುದ್ಧದ ಸಮಯದಲ್ಲಿ ನಡೆಸಲಾಗುವ ರಕ್ಷಣಾ ಕಾರ್ಯದ ಅಣಕು ಕವಾಯತು ನಡೆಯಲಿದೆ.

ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ಸಿದ್ಧತೆಯನ್ನು ಪರೀಕ್ಷಿಸಲು ಮತ್ತು ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸಲು ಮೇ 7ರ ಬುಧವಾರ ಸಮಗ್ರ ನಾಗರಿಕ ರಕ್ಷಣಾ ಅಣಕು ಕಸರತ್ತುಗಳನ್ನು ನಡೆಸುವಂತೆ ಗೃಹ ಸಚಿವಾಲಯ (MHA) ರಾಜ್ಯಗಳಿಗೆ ನಿರ್ದೇಶನ ನೀಡಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಈ ಕಸರತ್ತುಗಳು ಹಲವಾರು ನಿರ್ಣಾಯಕ ಸನ್ನದ್ಧತಾ ಕ್ರಮಗಳ ಮೇಲೆ ಕೇಂದ್ರೀಕರಿಸುತ್ತವೆ. ಇವುಗಳಲ್ಲಿ ವಾಯುದಾಳಿ ಎಚ್ಚರಿಕೆ ಸೈರನ್‌ಗಳ ಕಾರ್ಯಾಚರಣೆ ಮತ್ತು ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರಿಗೆ ಅಗತ್ಯ ನಾಗರಿಕ ರಕ್ಷಣಾ ತಂತ್ರಗಳಲ್ಲಿ ತರಬೇತಿ ಸೇರಿವೆ. ವೈಮಾನಿಕ ದಾಳಿಗಳು ಅಥವಾ ಇತರ ಪ್ರತಿಕೂಲ ಘಟನೆಗಳಂತಹ ತುರ್ತು ಸಂದರ್ಭಗಳಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಹೇಗೆಂದು ಅವರನ್ನು ಸಜ್ಜುಗೊಳಿಸುವುದು ಇದರ ಗುರಿಯಾಗಿದೆ.

ಇದನ್ನೂ ಓದಿ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಐಎಂಎಫ್​​​ಗೆ ಅಯ್ಯರ್; ಪಾಕಿಸ್ತಾನಕ್ಕೆ ಇದೆಯಾ ಆಪತ್ತು?
ಭಾರತಕ್ಕೆ ಹಾನಿ ಮಾಡುವ ಮುನ್ನ ಪಾಕ್ 100 ಬಾರಿ ಯೋಚಿಸಬೇಕು
ಜರ್ಮನಿಯಲ್ಲಿ ಹಿಂದೂ ಸಮುದಾಯದ ಒಗ್ಗಟ್ಟಿನ ಸಂದೇಶ ಸಾರಿದ ಭಾರತೀಯರು

ಇದನ್ನೂ ಓದಿ: ಕಾಲು ಕೆದರಿ ಜಗಳಕ್ಕೆ ಬರುತ್ತಿರುವ ಪಾಕಿಸ್ತಾನದ ಸೇನೆಯಿಂದ ಪುನಃ ಗಡಿಭಾದಲ್ಲಿ ಗುಂಡಿನ ದಾಳಿ

ರಾಷ್ಟ್ರವ್ಯಾಪಿ ಕವಾಯತನ್ನು ಪರಿಣಾಮಕಾರಿಗೊಳಿಸಲು ಸ್ಥಳೀಯ ಅಧಿಕಾರಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ನಾಗರಿಕ ರಕ್ಷಣಾ ಸಿಬ್ಬಂದಿಯಿಂದ ಸಂಘಟಿತ ಭಾಗವಹಿಸುವಿಕೆಯ ಮಹತ್ವವನ್ನು ಗೃಹ ಸಚಿವಾಲಯ ಒತ್ತಿ ಹೇಳಿದೆ. ಕೇಂದ್ರ ಸರ್ಕಾರದ ಈ ಆದೇಶದ ಸಮಯವು ಬಹಳ ನಿರ್ಣಾಯಕವಾಗಿದೆ. ಕೊನೆಯ ಬಾರಿಗೆ ಇದೇ ರೀತಿಯ ರಕ್ಷಣಾ ಕವಾಯತು 1971ರಲ್ಲಿ ನಡೆದಿತ್ತು. ವರ್ಷದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಸಂಭವಿಸಿತ್ತು.


ಸರ್ಕಾರದ ಆದೇಶದಲ್ಲೇನಿದೆ?:

1. ವಾಯುದಾಳಿ ಎಚ್ಚರಿಕೆ ಸೈರನ್‌ಗಳ ಕಾರ್ಯಾಚರಣೆ ನಡೆಸಬೇಕು

2. ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ನಾಗರಿಕರು, ವಿದ್ಯಾರ್ಥಿಗಳಿಗೆ ರಕ್ಷಣಾ ಅಂಶಗಳ ಕುರಿತು ತರಬೇತಿ ನೀಡಬೇಕು

3. ಕ್ರ್ಯಾಶ್ ಬ್ಲ್ಯಾಕೌಟ್ ಕ್ರಮಗಳನ್ನು ಒದಗಿಸಬೇಕು

4. ಪ್ರಮುಖ ಕಟ್ಟಡಗಳು, ಸ್ಥಾವರಗಳನ್ನು ಮರೆಮಾಚಬೇಕು

5. ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ನಡೆಸುವ ಬಗ್ಗೆ ಪೂರ್ವಾಭ್ಯಾಸ ಮಾಡಬೇಕು

ಇದನ್ನೂ ಓದಿ: ಭಾರತವನ್ನು ಮತ್ತೆ ಗುರಿಯಾಗಿಸಿಕೊಂಡ ಪಾಕಿಸ್ತಾನ; ರಕ್ಷಣಾ ಇಲಾಖೆಯ ವೆಬ್​ಸೈಟ್​ಗಳು ಹ್ಯಾಕ್

ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿರುವ ಭಯೋತ್ಪಾದಕರು ಪಹಲ್ಗಾಮ್​ನಲ್ಲಿ 26 ಮುಗ್ಧ ನಾಗರಿಕರನ್ನು ಹತ್ಯೆ ಮಾಡಿದ ನಂತರ ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಪಹಲ್ಗಾಮ್ ದಾಳಿಯ ನಂತರ ಗಡಿಯಲ್ಲಿ ಉದ್ವಿಗ್ನತೆ ಕಡಿಮೆಯಾಗುವ ಯಾವುದೇ ಲಕ್ಷಣಗಳಿಲ್ಲ. ಪಾಕಿಸ್ತಾನವು ಸತತ 11 ರಾತ್ರಿಗಳ ಕಾಲ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತೀಯ ಸ್ಟೇಷನ್​ಗಳ ಮೇಲೆ ಗುಂಡಿನ ದಾಳಿ ನಡೆಸಿದೆ. ಪಾಕಿಸ್ತಾನದ ಪದೇ ಪದೇ ಗಡಿಯಾಚೆಗಿನ ಗುಂಡಿನ ದಾಳಿಗೆ ಭಾರತ ಪ್ರತಿದಾಳಿ ನಡೆಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 7:28 pm, Mon, 5 May 25