Coronavirus Cases in India: ದೇಶದಲ್ಲಿ ಸಾವಿನ ಸಂಖ್ಯೆ 2713ಕ್ಕೆ ಇಳಿಕೆ, 1.32 ಲಕ್ಷ ಹೊಸ ಪ್ರಕರಣಗಳು ಪತ್ತೆ
Covid 19: ಶುಕ್ರವಾರದ ಮಾಹಿತಿಯ ಪ್ರಕಾರ, ಹಿಂದಿನ 24 ಗಂಟೆಗಳಲ್ಲಿ 207,071 ಜನರು ಗುಣಮುಖರಾಗಿದ್ದು ದೇಶದಲ್ಲಿ ಚೇತರಿಕೆ ಪ್ರಮಾಣವು 93.80% ಕ್ಕೆ ಏರಿದೆ. ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 26,597,655 ಆಗಿದೆ.
ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 132,364 ಹೊಸ ಕೊರೊನಾವೈರಸ್ ಪ್ರಕರಣ ಪತ್ತೆಯಾಗಿದ್ದು ದೇಶದಲ್ಲಿ ಒಟ್ಟು ರೋಗಿಗಳ ಸಂಖ್ಯೆ 2,85,74,350ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ಇದೇ ಅವಧಿಯಲ್ಲಿ, 2713 ಜನರು ಕೊವಿಡ್ -19ನಿಂದ ಮೃತಪಟ್ಟಿದ್ದು, ಸಾವಿನ ಸಂಖ್ಯೆ 340,702 ಕ್ಕೆ ಏರಿಕೆ ಆಗಿದೆ. ಎರಡು ದಿನಗಳ ನಂತರ ಭಾರತವು ಮೊದಲ ಬಾರಿಗೆ ದೈನಂದಿನ ಹೊಸ ಪ್ರಕರಣಗಳಲ್ಲಿ ಅಲ್ಪ ಕುಸಿತ ಕಂಡಿದೆ. ಜೂನ್ 1 ಕ್ಕೆ 127,510 ತಾಜಾ ಸೋಂಕುಗಳನ್ನು ದಾಖಲಿಸಿದಾಗಿನಿಂದ ಎರಡು ತಿಂಗಳಿಗಿಂತಲೂ ಕಡಿಮೆ ಏಕದಿನ ಸೋಂಕು ಪ್ರಕರಣ ವರದಿ ಆಗಿದೆ.
ಶುಕ್ರವಾರದ ಮಾಹಿತಿಯ ಪ್ರಕಾರ, ಹಿಂದಿನ 24 ಗಂಟೆಗಳಲ್ಲಿ 207,071 ಜನರು ಗುಣಮುಖರಾಗಿದ್ದು ದೇಶದಲ್ಲಿ ಚೇತರಿಕೆ ಪ್ರಮಾಣವು 93.80% ಕ್ಕೆ ಏರಿದೆ. ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 26,597,655 ಆಗಿದೆ. ಸಕ್ರಿಯ ಪ್ರಕರಣಗಳು 1,635,993 ಕ್ಕೆ ಇಳಿದಿವೆ. ಹಿಂದಿನ ದಿನಕ್ಕಿಂತ ಶುಕ್ರವಾರ 77,420 ಸೋಂಕು ಪ್ರಕರಣಗಳು ಕುಸಿತವಾಗಿದೆ.
India reports 1,32,364 new #COVID19 cases, 2,07,071 discharges, and 2713 deaths in the last 24 hours, as per Health Ministry
Total cases: 2,85,74,350 Total discharges: 2,65,97,655 Death toll: 3,40,702 Active cases: 16,35,993
Total vaccination: 22,41,09,448 pic.twitter.com/mTgR4KVMqR
— ANI (@ANI) June 4, 2021
COVID19 | As many as 35,74,33,846 samples have been tested in the country thus far, including 20,75,428 samples tested yesterday: Indian Council of Medical Research (ICMR) pic.twitter.com/6uyuitGMLg
— ANI (@ANI) June 4, 2021
ಜೂನ್ 3 ರಂದು ನಡೆಸಿದ ಕೊವಿಡ್ ಪರೀಕ್ಷೆಗಳ ಸಂಖ್ಯೆ 2,075,428 ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಶುಕ್ರವಾರ ಬೆಳಿಗ್ಗೆ ಟ್ವೀಟ್ ಮಾಡಿದೆ. ಈವರೆಗೆ ಒಟ್ಟು 357,433,846 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಐಸಿಎಂಆರ್ ಅಂಕಿಅಂಶಗಳು ತೋರಿಸಿವೆ.
ದೈನಂದಿನ ಪ್ರಕರಣಗಳ ಕುಸಿತವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಮಟ್ಟದಲ್ಲಿ ಸರ್ಕಾರಗಳು ಕೈಗೊಂಡ ಕ್ರಮಗಳನ್ನು ಒಳಗೊಂಡಿರುತ್ತದೆ. ಈ ಕುಸಿತವು ದೆಹಲಿ ಮತ್ತು ಮಹಾರಾಷ್ಟ್ರದಂತಹ ಹಲವಾರು ರಾಜ್ಯ ಸರ್ಕಾರಗಳನ್ನು ಅನ್ ಲಾಕ್ ಮಾಡಲು ಅಥವಾ ಲಾಕ್ಡೌನ್ ಅಥವಾ ಲಾಕ್ಡೌನ್ ತರಹದ ನಿರ್ಬಂಧಗಳಿಂದ ನಿರ್ಗಮಿಸುವ ಕ್ರಮಗಳನ್ನು ಘೋಷಿಸಲು ಪ್ರೇರೇಪಿಸಿದರೆ, ಇನ್ನು ಕೆಲವೆಡೆ ವೈರಸ್ ಹರಡುವ ಸರಪಳಿಯನ್ನು ಮತ್ತಷ್ಟು ಮುರಿಯಲು ನಿರ್ಬಂಧಗಳಲ್ಲಿ ವಿಸ್ತರಣೆ ಮಾಡಲಾಗಿದೆ.
ಆದಾಗ್ಯೂ, ದೈನಂದಿನ ಪ್ರಕರಣಗಳು ಇನ್ನೂ 100,000 ಕ್ಕಿಂತ ಹೆಚ್ಚಿರುವ ಕಾರಣ, ಕೇಂದ್ರ ಸರ್ಕಾರವು ಜೂನ್ 1 ರಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 12 ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿತು. ಕೆಲವೇ ಗಂಟೆಗಳಲ್ಲಿ, ಕೌನ್ಸಿಲ್ ಆಫ್ ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್ (ಸಿಐಎಸ್ಸಿಇ) ತನ್ನ 12 ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿತು. ಎರಡನೇ ಅಲೆ ಉತ್ತುಂಗದಲ್ಲಿದ್ದಾಗ ಏಪ್ರಿಲ್‌ನಲ್ಲಿ 10 ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿತ್ತು.
ಮಹಾರಾಷ್ಟ್ರದಲ್ಲಿ 1ಲಕ್ಷ ಗಡಿ ದಾಟಿದ ಸಾವು
ಗುರುವಾರ 650 ಕ್ಕೂ ಹೆಚ್ಚು ಸಾವುಗಳು ವರದಿಯಾಗಿದ್ದು, ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸಂಬಂಧಿತ ಸಾವಿನ ಸಂಖ್ಯೆ ಈಗ ಒಂದು ಲಕ್ಷ ದಾಟಿದೆ. ಗುರುವಾರದವರೆಗಿನ ಅಂಕಿ ಅಂಶಗಳ ಪ್ರಕಾರ ಕೊರೊನಾವೈರಸ್ ಸೋಂಕಿನಿಂದ ಕನಿಷ್ಠ 1,00,233 ಜನರು ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಫೆಬ್ರವರಿ 15 ರ ನಂತರ ಈ ಅರ್ಧದಷ್ಟು ಸಾವುಗಳು ಸಂಭವಿಸಿವೆ, ಎರಡನೇ ಅಲೆಯಲ್ಲಿ ಅದು ಇನ್ನೂ ಪ್ರಬಲವಾಗಿದೆ.
ಇದನ್ನೂ ಓದಿ: MP Renukacharya: ಶಾಸಕ ರೇಣುಕಾಚಾರ್ಯರಿಂದ ಮತ್ತೊಂದು ಸತ್ಕಾರ್ಯ; ಕೊವಿಡ್ ಕೇರ್ ಸೆಂಟರ್ನಲ್ಲಿ ಮೂರು ದಿನಗಳ ವಾಸ್ತವ್ಯ
ಇದನ್ನೂ ಓದಿ: ಕೊವಿಡ್ ಸಭೆ; ಬೆಳಗಾವಿಗೆ ತೆರಳಲಿರುವ ಸಿಎಂ ಯಡಿಯೂರಪ್ಪಗೆ ತಟ್ಟಲಿದೆ ರೈತ ಮುಖಂಡರ ಪ್ರತಿಭಟನೆ ಬಿಸಿ
Published On - 10:37 am, Fri, 4 June 21