Coronavirus cases in India ಭಾರತದಲ್ಲಿ 18,987 ಹೊಸ ಕೊವಿಡ್ ಪ್ರಕರಣ ಪತ್ತೆ, 246 ಮಂದಿ ಸಾವು

TV9 Digital Desk

| Edited By: Rashmi Kallakatta

Updated on:Oct 14, 2021 | 10:45 AM

Covid 19 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೊವಿಡ್ ಪ್ರಕರಣಗಳಲ್ಲಿ 1,067 ಪ್ರಕರಣಗಳ ಇಳಿಕೆ ದಾಖಲಾಗಿದೆ. ಬುಧವಾರ ಒಟ್ಟು 13,01,083 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದುವರೆಗೆ ದೇಶದಲ್ಲಿ ಕೊವಿಡ್ -19 ಪತ್ತೆಗಾಗಿ ನಡೆಸಿದ ಒಟ್ಟು ಪರೀಕ್ಷೆಗಳ ಸಂಖ್ಯೆ 58,76,64,525 ಆಗಿದೆ.

Coronavirus cases in India ಭಾರತದಲ್ಲಿ 18,987 ಹೊಸ ಕೊವಿಡ್ ಪ್ರಕರಣ ಪತ್ತೆ, 246 ಮಂದಿ ಸಾವು
ಪ್ರಾತಿನಿಧಿಕ ಚಿತ್ರ

Follow us on

ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ  18,987 ಹೊಸ ಕೊರೊನಾವೈರಸ್ (Coronavirus ) ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿನ ಸಂಖ್ಯೆ 3,40,20,730ಕ್ಕೆ ಏರಿದೆ. ರಾಷ್ಟ್ರೀಯ ಕೊವಿಡ್ ಚೇತರಿಕೆಯ ಪ್ರಮಾಣವು ಶೇಕಡಾ 98.07 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹೇಳಿದೆ. 246 ಹೊಸ ಸಾವುಗಳೊಂದಿಗೆ ಸಾವಿನ ಸಂಖ್ಯೆ 4,51,435 ಕ್ಕೆ ತಲುಪಿದೆ. ಹೊಸ ಕೊರೊನಾವೈರಸ್ ಸೋಂಕಿನ ದೈನಂದಿನ ಏರಿಕೆಯು 20 ದಿನಗಳವರೆಗೆ 30,000 ಕ್ಕಿಂತ ಕಡಿಮೆಯಿದೆ ಮತ್ತು 50,000 ಕ್ಕೂ ಕಡಿಮೆ ದೈನಂದಿನ ಪ್ರಕರಣಗಳು ಸತತವಾಗಿ 109 ದಿನಗಳವರೆಗೆ ವರದಿಯಾಗಿವೆ. ಸಕ್ರಿಯ ಪ್ರಕರಣಗಳು 2,06,586 ಕ್ಕೆ ಇಳಿದಿದ್ದು, ಒಟ್ಟು ಸೋಂಕುಗಳಲ್ಲಿ 0.61 ಶೇಕಡಾವನ್ನು ಒಳಗೊಂಡಿದ್ದು, ರಾಷ್ಟ್ರೀಯ ಕೊವಿಡ್ ಚೇತರಿಕೆಯ ಪ್ರಮಾಣವು ಶೇಕಡಾ 98.07 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೊವಿಡ್ ಪ್ರಕರಣಗಳಲ್ಲಿ 1,067 ಪ್ರಕರಣಗಳ ಇಳಿಕೆ ದಾಖಲಾಗಿದೆ. ಬುಧವಾರ ಒಟ್ಟು 13,01,083 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದುವರೆಗೆ ದೇಶದಲ್ಲಿ ಕೊವಿಡ್ -19 ಪತ್ತೆಗಾಗಿ ನಡೆಸಿದ ಒಟ್ಟು ಪರೀಕ್ಷೆಗಳ ಸಂಖ್ಯೆ 58,76,64,525 ಆಗಿದೆ.

ಕಳೆದ 24 ಗಂಟೆಗಳಲ್ಲಿ ಭಾರತವು 13 ಲಕ್ಷ ಕೊವಿಡ್ -19 ಪರೀಕ್ಷೆ ಕಳೆದ 24 ಗಂಟೆಗಳಲ್ಲಿ 13 ಲಕ್ಷಕ್ಕೂ ಅಧಿಕ ಕೊವಿಡ್ -19 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇಲ್ಲಿಯವರೆಗೆ ನಡೆಸಿದ ಒಟ್ಟು ಪರೀಕ್ಷೆಗಳು 58.76 ಕೋಟಿ ದಾಟಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಗುರುವಾರ ಹೇಳಿದೆ. ಸಂಶೋಧನಾ ಸಂಸ್ಥೆಯ ಪ್ರಕಾರ, ಬುಧವಾರ ಒಟ್ಟು 13,01,083 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇದರೊಂದಿಗೆ, ಅಕ್ಟೋಬರ್ 13 ರವರೆಗೆ ಪರೀಕ್ಷಿಸಿದ ಒಟ್ಟು ಮಾದರಿಗಳು 58,76,64,525 ಕ್ಕೆ ತಲುಪಿದೆ.

ಥಾಣೆಯಲ್ಲಿ 275 ಹೊಸ ಕೊವಿಡ್ -19 ಪ್ರಕರಣ, 4 ಸಾವುಗಳು ಥಾಣೆಯಲ್ಲಿ 275 ಹೊಸ ಕೊರೊನಾವೈರಸ್ ಪ್ರಕರಣಗಳನ್ನು ವರದಿ ಆಗಿದ್ದು, ಮಹಾರಾಷ್ಟ್ರ ಜಿಲ್ಲೆಯಲ್ಲಿ ಸೋಂಕಿನ ಸಂಖ್ಯೆಯನ್ನು 5,62,576 ಕ್ಕೆ ಏರಿಸಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.. ವೈರಸ್ ನಾಲ್ಕು ಜನರ ಜೀವವನ್ನು ಬಲಿ ತೆಗೆದುಕೊಂಡಿತು, ಇದು ಜಿಲ್ಲೆಯಲ್ಲಿ ಸಾವಿನ ಸಂಖ್ಯೆಯನ್ನು 11,451 ಕ್ಕೆ ಏರಿಸಿದೆ ಎಂದು ಅವರು ಹೇಳಿದರು, ಥಾಣೆಯಲ್ಲಿ ಕೊವಿಡ್19 ಸಾವಿನ ಪ್ರಮಾಣವು 2.03 ಶೇಕಡಾದಲ್ಲಿತ್ತು. ನೆರೆಯ ಪಾಲ್ಘರ್ ಜಿಲ್ಲೆಯಲ್ಲಿ, ಕೊವಿಡ್ -19 ಪ್ರಕರಣಗಳ ಸಂಖ್ಯೆ 1,37,309 ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 3,278 ಆಗಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ತಮಿಳುನಾಡು ಕಳೆದ 24 ಗಂಟೆಗಳಲ್ಲಿ 1,280 ಹೊಸ COVID-19 ಪ್ರಕರಣಗಳು, 19 ಸಾವುಗಳು ಮತ್ತು 1,453 ಚೇತರಿಕೆಗಳನ್ನು ವರದಿ ಮಾಡಿದೆ. ಇಲ್ಲಿ ಸಕ್ರಿಯ ಪ್ರಕರಣಗಳು 15,650ರಷ್ಟಿದೆ. ಅದೇ ಅವಧಿಯಲ್ಲಿ ಕರ್ನಾಟಕದಲ್ಲಿ 357 ಹೊಸ ಧನಾತ್ಮಕ ಪ್ರಕರಣಗಳು, 438 ಚೇತರಿಕೆ ಮತ್ತು 10 ಸಾವುಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳು 9621 ಆಗಿದ್ದು ಒಟ್ಟು ಧನಾತ್ಮಕ ಪ್ರಕರಣಗಳು 29,82,089 ಆಗಿದೆ.

ಕೇರಳದಲ್ಲಿ ಬುಧವಾರ 11,079 ಹೊಸ ಪ್ರಕರಣಗಳು, 123 ಸಾವುಗಳು ಮತ್ತು 9,972 ಚೇತರಿಕೆ ವರದಿಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 97,630 ರಷ್ಟಿದೆ. ಆಂಧ್ರಪ್ರದೇಶದಲ್ಲಿ ಬುಧವಾರ 517 ಹೊಸ ಕೊವಿಡ್ -19 ಪ್ರಕರಣಗಳು, 826 ಚೇತರಿಕೆ ಮತ್ತು 8 ಸಾವುಗಳನ್ನು ವರದಿ ಮಾಡಿದೆ. ಇತ್ತೀಚಿನ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6,615 ಕ್ಕೆ ಇಳಿಕೆಯಾಗಿದೆ.

ಇದನ್ನೂ ಓದಿ:  ಕೊವಿಡ್​ 19ನಿಂದ ಮೃತಪಟ್ಟವರ ಕುಟುಂಬಕ್ಕೆ 5000 ರೂ. ಮಾಸಾಶನ ನೀಡಲಿದೆ ಕೇರಳ ಸರ್ಕಾರ; ಷರತ್ತು ಅನ್ವಯ

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada