AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​ 19ನಿಂದ ಮೃತಪಟ್ಟವರ ಕುಟುಂಬಕ್ಕೆ 5000 ರೂ. ಮಾಸಾಶನ ನೀಡಲಿದೆ ಕೇರಳ ಸರ್ಕಾರ; ಷರತ್ತು ಅನ್ವಯ

ಕೇರಳದ ಬಿಪಿಎಲ್​ ಕುಟುಂಬಕ್ಕೆ ಸೇರಿದ ವ್ಯಕ್ತಿ ರಾಜ್ಯದ ಒಳಗೆ, ಹೊರಗೆ ಅಥವಾ ದೇಶದ ಹೊರಗೆ ಅಂದರೆ ಬೇರೆ ದೇಶದಲ್ಲಿ ಮೃತಪಟ್ಟರೂ ಅವರ ಕುಟುಂಬ ಈ ವಿಶೇಷ ಆರ್ಥಿಕ ನೆರವಿಗೆ ಒಳಪಡುತ್ತದೆ.

ಕೊವಿಡ್​ 19ನಿಂದ ಮೃತಪಟ್ಟವರ ಕುಟುಂಬಕ್ಕೆ 5000 ರೂ. ಮಾಸಾಶನ ನೀಡಲಿದೆ ಕೇರಳ ಸರ್ಕಾರ; ಷರತ್ತು ಅನ್ವಯ
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​
TV9 Web
| Updated By: Lakshmi Hegde|

Updated on:Oct 14, 2021 | 9:29 AM

Share

ತಿರುವನಂತಪುರಂ: ಕೊವಿಡ್​ 19 ಸೋಂಕಿನಿಂದ (Covid 19 Virus) ಮೃತಪಟ್ಟವರ ಕುಟುಂಬಕ್ಕೆ ಪ್ರತಿ ತಿಂಗಳೂ ಹೆಚ್ಚುವರಿಯಾಗಿ 5 ಸಾವಿರ ರೂ. ನೀಡಲು ಕೇರಳ ಸರ್ಕಾರ ನೀಡಿದೆ. ಈ ನೆರವನ್ನು ಮೂರು ವರ್ಷಗಳ ಕಾಲ ನೀಡಲು ಕೇರಳ ರಾಜ್ಯ ಸರ್ಕಾನ ನಿರ್ಧರಿಸಿದ್ದು, ಇದು ಬಡತನ ರೇಖೆಗಿಂತ ಕೆಳಗೆ ((BPL) ಇರುವ ಕುಟುಂಬಗಳಿಗೆ ಮಾತ್ರ ಅನ್ವಯ ಆಗಲಿದೆ. ಬುಧವಾರ ಟ್ವೀಟ್​ ಮಾಡಿರುವ ಕೇರಳ ಸಚಿವ ಥಾಮಸ್​ ಐಸಾಕ್​​,  ಕೊವಿಡ್​ 19ನಿಂದ ಸತ್ತವರ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ  50 ಸಾವಿರ ರೂ.ವಿಶೇಷ ನೆರವು ನೀಡಲಾಗುತ್ತಿದೆ. ಈಗ ಅದರೊಂದಿಗೆ ಕೇರಳದಲ್ಲಿ ಕೊವಿಡ್​ 19 ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ತಿಂಗಳಿಗೆ 5 ಸಾವಿರ ರೂ.ಮಾಸಾಶನ ಹೆಚ್ಚುವರಿಯಾಗಿ ಕೊಡಲು ನಿರ್ಧರಿಸಲಾಗಿದೆ. ಇದು ಬಿಪಿಎಲ್​ ಕುಟುಂಬಗಳಿಗೆ ಮಾತ್ರ ಅನ್ವಯ ಆಗಲಿದೆ ಮತ್ತು ಮುಂದಿನ ಮೂರು ವರ್ಷಗಳ ಕಾಲ ನೀಡಲ್ಪಡುತ್ತದೆ ಎಂದು ತಿಳಿಸಿದ್ದಾರೆ.  

ಕೊವಿಡ್​ 19 ನಿಂದ ಮೃತಪಟ್ಟವರ ಕುಟುಂಬಕ್ಕೆ 50 ಸಾವಿರ ರೂ.ನೀಡುವುದಾಗಿ ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿದೆ. ಇದೀಗ ಕೇರಳದಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳಲ್ಲಿ ಯಾರಾದರೂ ಕೊರೊನಾದಿಂದ ಸತ್ತರೆ, ಅವರನ್ನು ಅವಲಂಬಿಸಿಕೊಂಡಿರುವ ಕುಟುಂಬದ ಸದಸ್ಯರಿಗೆ ತಿಂಗಳಿಗೆ 5 ಸಾವಿರ ರೂಪಾಯಿ ನೀಡಲಾಗುವುದು. ಅಂಥವರು ಈಗಾಗಲೇ ಬೇರೆ ಕೆಲವು ಸಾಮಾಜಿಕ ಕಲ್ಯಾಣ, ಕಲ್ಯಾಣ ನಿಧಿ ಮತ್ತಿತರ ಪಿಂಚಣಿ ವ್ಯವಸ್ಥೆಗೆ ಒಳಪಟ್ಟಿದ್ದರೂ ಕೂಡ ಈ ಯೋಜನೆಯಿಂದ ವಂಚಿತರಾಗುವುದಿಲ್ಲ. ಅಷ್ಟೇ ಅಲ್ಲ, ಕೇರಳದ ಬಿಪಿಎಲ್​ ಕುಟುಂಬಕ್ಕೆ ಸೇರಿದ ವ್ಯಕ್ತಿ ರಾಜ್ಯದ ಒಳಗೆ, ಹೊರಗೆ ಅಥವಾ ದೇಶದ ಹೊರಗೆ ಅಂದರೆ ಬೇರೆ ದೇಶದಲ್ಲಿ ಮೃತಪಟ್ಟರೂ ಅವರ ಕುಟುಂಬ ಈ ವಿಶೇಷ ಆರ್ಥಿಕ ನೆರವಿಗೆ ಒಳಪಡುತ್ತದೆ ಎಂದು ಕ್ಯಾಬಿನೆಟ್​​ನಲ್ಲಿ ನಿರ್ಧಾರ ತೆಗೆದುಕೊಂಡಿದ್ದಾಗಿ ಕೇರಳ ಮುಖ್ಯಮಂತ್ರಿ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ.

ಹಾಗೇ, ಬುಧವಾರ ನಡೆದ ಕೇರಳ ಕ್ಯಾಬಿನೆಟ್​ನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಮ್ಮ ಯೋಜನೆಗೆ ಅರ್ಹರಾದವರು ಒಂದು ಪುಟದ ಅರ್ಜಿ ತುಂಬಿ ಸಲ್ಲಿಸಬೇಕಾಗುತ್ತದೆ. ಹಾಗೇ, ಇದಕ್ಕೆ ಸಂಬಂಧಪಟ್ಟ ಎಲ್ಲ ಕ್ರಮಗಳನ್ನೂ ಆಯಾ ಜಿಲ್ಲಾಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳು ತೆಗೆದುಕೊಳ್ಳುತ್ತಾರೆ. ಇನ್ನು ಕೊವಿಡ್​ 19 ನಿಂದ ಮೃತಪಟ್ಟವರ ಕುಟುಂಬದಲ್ಲಿ ಯಾರೂ ಸರ್ಕಾರಿ ಉದ್ಯೋಗಿಗಳು ಮತ್ತು ತೆರಿಗೆ ತುಂಬುತ್ತಿರುವ ವ್ಯಕ್ತಿಗಳು ಇಲ್ಲವೆಂಬುದನ್ನು ಆಯಾ ಹಳ್ಳಿಗಳ ಗ್ರಾಮ ಪಂಚಾಯಿತಿ ಅಧಿಕಾರಿಗಳು ಖಚಿತಪಡಿಸಬೇಕು ಎಂಬಿತ್ಯಾದಿ ವಿಷಯಗಳನ್ನು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Viral News: ಬರೋಬ್ಬರಿ 60 ಕೆಜಿ ಚಿನ್ನದ ಆಭರಣ ತೊಟ್ಟು ಕಾರಿನಲ್ಲಿ ನಗುತ್ತಾ ಕುಳಿತ ವಧು!

ರಾಜಧಾನಿಯಲ್ಲಿ ಮುಂದುವರಿದ ಮಳೆ ಕಾಟ: ಮೆಜೆಸ್ಟಿಕ್ ಬಳಿ ಕೆಎಸ್ಆರ್​​ಟಿಸಿ ಬಸ್ ಮೇಲೆ ಬಿದ್ದ ಮರ

Published On - 9:07 am, Thu, 14 October 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ