ಲಸಿಕೆ ಪ್ರಮಾಣವನ್ನು ಹೆಚ್ಚಿಸುವುದರ ಜೊತೆಗೆ ಹಣದುಬ್ಬರದ ಮೇಲೂ ಒಂದು ಕಣ್ಣಿಟ್ಟರಬೇಕು ಎನ್ನುತ್ತಾರೆ ಗೀತಾ ಗೋಪಿನಾಥ್
ವೈರಸ್ನಿಂದಾಗಿ ಆರ್ಥಿಕ ಮಾರುಕಟ್ಟೆಯಲ್ಲಿ ಹಲವಾರು ಸಮಸ್ಯೆಗಳನ್ನು ಭಾರತ ಎದುರಿಸುತ್ತಿದ್ದರೂ ಅದು ಹಣದುಬ್ಬರದ ಮೇಲೆ ಕಣ್ಣಿಟ್ಟಿರಲೇಬೇಕಾದ ಅನಿವಾರ್ಯತೆಯಿದೆ.

ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ ಅವರು ಬೇರೆ ರಾಷ್ಟ್ರಗಳು ವರ್ಷಾಂತ್ಯದವರೆಗೆ ತಮ್ಮ ತಮ್ಮ ದೇಶದ ಜನಸಂಖ್ಯೆಯ ಶೇಕಡಾ 40 ರಷ್ಟು ಜನರಿಗೆ ಲಸಿಕೆ ಹಾಕಲು ಹೆಣಗುತ್ತಿದ್ದರೂ ಭಾರತ ಶೇಕಡಾ 50 ರಷ್ಟು ಜನಸಂಖ್ಯೆಗೆ ಲಸಿಕೆ ಹಾಕಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದೆ ಎಂದು ಹೇಳಿದ್ದು ಕೊವಿಡ್-19 ಮೂರನೇ ಅಲೆಯ ಆತಂಕ ಇನ್ನೂ ದೂರವಾಗಿರದ ಕಾರಣ ಎಚ್ಚರದಿಂದರಬೇಕು ಮತ್ತು ಹಣದುಬ್ಬರದ ಮೇಲೂ ಒಂದು ದೃಷ್ಟಿಯಿಡಬೇಕಾದ ಅನಿವಾರ್ಯತೆ ಭಾರತಕ್ಕಿದೆ ಎಂದಿದ್ದಾರೆ.
ಬುಧವಾರದಂದು ಎನ್ ಡಿ ಟಿವಿ ಜೊತೆ ಮಾತಾಡಿದ ಗೀತಾ ಅವರು, ‘ಎಲ್ಲಾ ದೇಶಗಳಿಗೆ ತಮ್ಮ ಜನಸಂಖ್ಯೆಯ ಶೇಕಡಾ 40ರಷ್ಟು ಭಾಗಕ್ಕೆ ಲಸಿಕೆ ಹಾಕಿಸುವ ಟಾರ್ಗೆಟ್ ಇತ್ತು. ಆದರೆ ಬಹಳಷ್ಟು ದೇಶಗಳು ಅಂದುಕೊಂಡ ಗುರಿ ಮುಟ್ಟಿದಿರುವುದು ಚಿಂತೆಗೆ ಕಾರಣವಾಗಿದೆ. ನಮ್ಮ ಗಮನ ಈ ಅಂಶದ ಮೇಲಿರಬೇಕು’ ಎಂದು ಹೇಳಿದರು.
ಭಾರತದಲ್ಲಿ ಇದುವರೆಗೆ 96.7 ಕೋಟಿ ಲಸಿಕೆಯ ಡೋಸ್ಗಳನ್ನು ನೀಡಲಾಗಿದ್ದು ಮುಂದಿನ ವಾರ ಶತಕೋಟಿ ಡೋಸ್ಗಳನ್ನು ದಾಟಿದ ಮೈಲಿಗಲ್ಲನ್ನು ಸ್ಥಾಪಿಸಲಿದೆ. ಈ ಗುರಿ ಸೋಮವಾರ ಇಲ್ಲವೇ ಮಂಗಳವಾರದಂದು ಸ್ಥಾಪಿಸಲಾಗುವುದೆಂದು ಕೇಂದ್ರ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಅದೇ ಮೂಲಗಳ ಪ್ರಕಾರ ಸುಮಾರು ಶೇ. 73 ರಷ್ಟು ಜನ ಲಸಿಕೆಯ ಕನಿಷ್ಠ ಒಂದು ಡೋಸನ್ನು ಪಡೆದಿದ್ದಾರೆ ಮತ್ತು ಶೇಕಡಾ 30 ರಷ್ಟು ಜನ ಎರಡೂ ಡೋಸ್ಗಳನ್ನು ಪಡೆದುಕೊಂಡಿದ್ದಾರೆ.
‘ಭಾರತ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾದರೂ ಶೇ. 50ರಷ್ಟು ಜನಕ್ಕೆ ಲಸಿಕೆ ಪಡೆದಿರುವುದು ಆತ್ಮವಿಶ್ವಾಸದಿಂದ ತುಳುಕುವಂತೆ ಮಾಡಿದೆ. ಅದರೆ ಮೂರನೇ ಅಲೆಯ ಭೀತಿ ತಲೆ ಮೇಲೆ ಹೊಯ್ದಾಡುತ್ತಲೇ ಇದೆ,’ ಎಂದು ಗೀತಾ ಹೇಳಿದ್ದಾರೆ. ದೇಶದಲ್ಲಿ ಲಸಿಕೆಯ ಪ್ರಮಾಣ ಹೆಚ್ಚಾದರೆ ಅದು ಆರ್ಥಿಕ ಸ್ಥಿತಿಗೆ ನೆರವಾಗಲಿದೆ ಅಂತ ಗೀತಾ ಹೇಳಿದ್ದರು.
ಲಸಿಕೆ ವಿಷಯದಲ್ಲಿ ಅಮೇರಿಕ ಜೊತೆ ಭಾರತವನ್ನು ಪರ್ಯಾಯವಾಗಿಟ್ಟು ಮಾತಾಡಿದ ಗೀತಾ ಅವರು ಅಮೆರಿಕನಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜನರಲ್ಲಿ ಅನ್ಯಮನಸ್ಕತೆ ಕಾಣುತ್ತಿದ್ದು ಅದು ಆ ದೇಶದ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.
‘ಅಮೆರಿಕನಲ್ಲಿ ನಾವು ಬಳಕೆ ಪ್ರಮಾಣ ಇಳಿಮುಖಗೊಂಡಿರುವದನ್ನು ನಾವು ಗಮನಿಸಿದ್ದೇವೆ. ಅಮೇರಿಕದ ಬೆಳವಣಿಗೆಯನ್ನು ಕೆಳಮಟ್ಟಕ್ಕೆ ಇಳಿಸಲು ಇದೂ ಒಂದು ಅಂಶವಾಗಿದೆ. ಡೆಲ್ಟಾ ರೂಪಾಂತರಿಯು ಬೆಳವಣಿಗೆಯ ವೇಗ ಕುಂಠಿತಗೊಳಿಸಿದ್ದೂ ಅಲ್ಲದೆ ವಿತರಣೆಯ ಮೇಲೂ ಪರಿಣಾಮ ಬೀರಿದೆ,’ ಎಂದು ಅವರು ಹೇಳಿದರು.
‘ಅಮೇರಿಕದಂಥ ಮುಂದುವರಿದ ದೇಶದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜನ ಹಿಂಜರಿಯುತ್ತಿದ್ದಾರೆ, ಲಸಿಕೆ ಪ್ರಮಾಣ ಹೆಚ್ಚಾಗಬೇಕೆನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ,’ ಎಂದು ಗೀತಾ ಹೇಳಿದರು.
ವೈರಸ್ನಿಂದಾಗಿ ಆರ್ಥಿಕ ಮಾರುಕಟ್ಟೆಯಲ್ಲಿ ಹಲವಾರು ಸಮಸ್ಯೆಗಳನ್ನು ಭಾರತ ಎದುರಿಸುತ್ತಿದ್ದರೂ ಅದು ಹಣದುಬ್ಬರದ ಮೇಲೆ ಕಣ್ಣಿಟ್ಟಿರಲೇಬೇಕಾದ ಅನಿವಾರ್ಯತೆಯಿದೆ. ‘ಭಾರತದಲ್ಲಿ ತೈಲಗಳ ಬೆಲೆ ಹೆಚ್ಚುತ್ತಿದೆ, ವಿದ್ಯಚ್ಛಕ್ತಿ ಸರಬಾರಾಜಿನಲ್ಲಿ ವ್ಯತ್ಯಯಗಳು ಉಂಟಾಗುತ್ತಿವೆ, ಇಂಧನದ ಬೆಲೆಯೂ ಸ್ತಿಯಾಗುತ್ತಿದೆ. ಈ ಎಲ್ಲ ಅಂಶಗಳ ನಡುವೆ ನಾವು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶವೇನೆಂದರೆ ಕೋವಿಡ್ ಪಿಡುಗನ್ನು ಇಲ್ಲವಾಗಿಸಬೇಕು, ಹೆಚ್ಚು ಹೆಚ್ಚು ಜನರಿಗೆ ಲಸಿಕೆಗಳನ್ನು ಹಾಕಿಸುವ ಮೂಲಕ ಆತ್ಮವಿಶ್ವಾಸವನ್ನು ಎತ್ತರದ ಸ್ಥಾನದಲ್ಲಿಟ್ಟುಕೊಳ್ಳಬೇಕು,’ ಎಂದು ಗೀತಾ ಹೇಳಿದ್ದಾರೆ.
ಇದನ್ನೂ ಓದಿ: Covaxin for Children: 2ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲು ಅನುಮತಿ