India’s Covid Updates: ದೇಶದಲ್ಲಿ 24ಗಂಟೆಯಲ್ಲಿ ಕೊರೊನಾದಿಂದ 624 ಮಂದಿ ಸಾವು; ಚೇತರಿಸಿಕೊಳ್ಳುವ ಪ್ರಮಾಣ ಶೇ. 97.28

| Updated By: Lakshmi Hegde

Updated on: Jul 14, 2021 | 1:29 PM

ದೇಶದಲ್ಲಿ ಕೊರೊನಾದಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 3,01,04,720ಕ್ಕೆ ಏರಿಕೆಯಾಗಿದೆ. ಹಾಗೇ ಸಾವಿನ ಪ್ರಮಾಣ ಶೇ.1.33ರಷ್ಟಿದೆ. ಈ ಮಧ್ಯೆ ಕೊರೊನಾ ಲಸಿಕೆ ಅಭಿಯಾನ ಭರದಿಂದ ಸಾಗುತ್ತಿದ್ದು ಇದುವರೆಗೆ ದೇಶಾದ್ಯಂತ 38.76 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ.

Indias Covid Updates: ದೇಶದಲ್ಲಿ 24ಗಂಟೆಯಲ್ಲಿ ಕೊರೊನಾದಿಂದ 624 ಮಂದಿ ಸಾವು; ಚೇತರಿಸಿಕೊಳ್ಳುವ ಪ್ರಮಾಣ ಶೇ. 97.28
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಭಾರತದಲ್ಲಿ ಕಳೆದ 24ಗಂಟೆಯಲ್ಲಿ 38,792 ಹೊಸ ಕೊರೊನಾ ಸೋಂಕಿನ (Coronavirus) ಕೇಸ್​ಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,09,46,074ಕ್ಕೆ ಏರಿಕೆಯಾಗಿದೆ. ಹಾಗೇ, 24ಗಂಟೆಯಲ್ಲಿ 624 ಮಂದಿ ಕೊರೊನಾದಿಂದ ಮೃತಪಟ್ಟಿದ್ದು, ಅಲ್ಲಿಗೆ ಸಾವಿನ ಸಂಖ್ಯೆ 4,11,408ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ದೇಶದಲ್ಲಿ ಕೊರೊನಾದಿಂದ ಚೇತರಿಸಿಕೊಳ್ಳುವ ಪ್ರಮಾಣ ಶೇ. 97.28ರಷ್ಟಿದ್ದು, ಸಕ್ರಿಯ ಪ್ರಕರಣಗಳು 4,29,946 ಇದೆ. ಮಂಗಳವಾರ ಒಂದೇ ದಿನ 19,15,501ಮಂದಿಗೆ ಕೊರೊನಾ ತಪಾಸಣೆ ಮಾಡಲಾಗಿದ್ದು, ಇಲ್ಲಿಯವರೆಗೆ ಒಟ್ಟು 43,59,73,639 ಮಂದಿಗೆ ಕೊರೊನಾ ಟೆಸ್ಟ್ ಮಾಡಿದಂತಾಗಿದೆ. ಸದ್ಯ ದೇಶದಲ್ಲಿ 2.10 ಪರ್ಸಂಟ್ ಪಾಸಿಟಿವಿಟಿ ರೇಟ್​ ಇದೆ. ಕಳೆದ 23 ದಿನಗಳಿಂದಲೂ ಪಾಸಿಟಿವಿಟಿ ದರ ಇಷ್ಟೇ ಇದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ದೇಶದಲ್ಲಿ ಕೊರೊನಾದಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 3,01,04,720ಕ್ಕೆ ಏರಿಕೆಯಾಗಿದೆ. ಹಾಗೇ ಸಾವಿನ ಪ್ರಮಾಣ ಶೇ.1.33ರಷ್ಟಿದೆ. ಈ ಮಧ್ಯೆ ಕೊರೊನಾ ಲಸಿಕೆ ಅಭಿಯಾನ ಭರದಿಂದ ಸಾಗುತ್ತಿದ್ದು ಇದುವರೆಗೆ ದೇಶಾದ್ಯಂತ 38.76 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಇನ್ನು ಕೊರೊನಾ ಸೋಂಕಿನ ಸಂಖ್ಯೆ ಹಾಗೂ ಸಾವಿನ ಸಂಖ್ಯೆಯಲ್ಲಿ ಮೊದಲಿನಿಂದಲೂ ಮಹಾರಾಷ್ಟ್ರವೇ ಮುಂಚೂಣಿಯಲ್ಲಿದ್ದು, ಕಳೆದ 24ಗಂಟೆಯಲ್ಲಿ ವರದಿಯಾದ 624 ಸಾವಿನ ಪ್ರಕರಣಗಳಲ್ಲಿ ಮಹಾರಾಷ್ಟ್ರದಲ್ಲೇ 196 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಕೇರಳದಿಂದ 124 ಸಾವಿನ ವರದಿಯಾಗಿದೆ. ಇನ್ನು ಇಲ್ಲಿಯವರೆಗೆ ದೇಶಾದ್ಯಂತ 4,11,408 ಮಂದಿ ಸಾವನ್ನಪ್ಪಿದ್ದು, ಅದರಲ್ಲಿ ಮಹಾರಾಷ್ಟ್ರದಲ್ಲಿ 1,26,220, ಕರ್ನಾಟಕದಲ್ಲಿ 35,944, ತಮಿಳುನಾಡಿನಲ್ಲಿ 33,502, ದೆಹಲಿಯಲ್ಲಿ 25,020, ಉತ್ತರಪ್ರದೇಶದಲ್ಲಿ 22,704 ಮತ್ತು ಪಶ್ಚಿಮಬಂಗಾಳದಲ್ಲಿ 17,944 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ ಸುಮಾರು 70 ಪರ್ಸಂಟ್ ಜನರು ಇತರ ಕಾಯಿಲೆಗಳನ್ನು ಹೊಂದಿದ್ದು, ನಂತರ ಕೊರೊನಾ ಬಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಡಾಟಾದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಉಡುಪಿಯಲ್ಲಿ ಐದು ದಿನ ಆರೆಂಜ್ ಅಲರ್ಟ್; ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಧಿಕಾರಿ ಸೂಚನೆ

India records 624 Corona deaths in last 24 hours Recovery Rate stands at 97.28 Percent