Coronavirus Cases in India: ನಿನ್ನೆ 91,072 ಕೊರೊನಾ ಪ್ರಕರಣ ಪತ್ತೆ, ಮೊನ್ನೆಗಿಂತ ತುಸು ಕಡಿಮೆ; ಸಾವಿನ ಸಂಖ್ಯೆಯಲ್ಲೂ ಇಳಿಮುಖ

| Updated By: Skanda

Updated on: Jun 11, 2021 | 10:08 AM

ಮೊನ್ನೆ (ಜೂನ್​ 9) 94,052 ಪ್ರಕರಣಗಳು ಹೊಸದಾಗಿ ದಾಖಲಾಗಿದ್ದು, ಅದಕ್ಕೆ ಹೋಲಿಸಿದರೆ ನಿನ್ನೆ ಸೋಂಕಿತರ ಪ್ರಮಾಣದಲ್ಲಿ ಕೊಂಚ ಇಳಿಕೆ ಕಂಡಿದೆ. ಜತೆಗೆ, ಸಾವಿನ ಪ್ರಮಾಣ ಸುಮಾರು ಅರ್ಧದಷ್ಟು ಕಡಿಮೆಯಾಗಿರುವುದು ವೈದ್ಯಕೀಯ ವಲಯದಲ್ಲಿ ಸಮಾಧಾನ ಮೂಡಿಸಿದೆ.

Coronavirus Cases in India: ನಿನ್ನೆ 91,072 ಕೊರೊನಾ ಪ್ರಕರಣ ಪತ್ತೆ, ಮೊನ್ನೆಗಿಂತ ತುಸು ಕಡಿಮೆ; ಸಾವಿನ ಸಂಖ್ಯೆಯಲ್ಲೂ ಇಳಿಮುಖ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಅಬ್ಬರ ಇಳಿಮುಖವಾಗುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ, ಸಾವಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ನಿನ್ನೆ (ಜೂನ್​ 10) ಭಾರತದಲ್ಲಿ 91,072 ಕೊರೊನಾ ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು, 3,403 ಸೋಂಕಿತರು ಮೃತಪಟ್ಟಿದ್ದಾರೆ. ಮೊನ್ನೆ (ಜೂನ್​ 9) 94,052 ಪ್ರಕರಣಗಳು ಹೊಸದಾಗಿ ದಾಖಲಾಗಿದ್ದು, ಅದಕ್ಕೆ ಹೋಲಿಸಿದರೆ ನಿನ್ನೆ ಸೋಂಕಿತರ ಪ್ರಮಾಣದಲ್ಲಿ ಕೊಂಚ ಇಳಿಕೆ ಕಂಡಿದೆ. ಜತೆಗೆ, ಸಾವಿನ ಪ್ರಮಾಣ ಸುಮಾರು ಅರ್ಧದಷ್ಟು ಕಡಿಮೆಯಾಗಿರುವುದು ವೈದ್ಯಕೀಯ ವಲಯದಲ್ಲಿ ಸಮಾಧಾನ ಮೂಡಿಸಿದೆ.

ಪ್ರಸ್ತುತ 91,072 ಕೊರೊನಾ ಪ್ರಕರಣಗಳು ಕಂಡುಬರುವ ಮೂಲಕ ಭಾರತದಲ್ಲಿ ಈವರೆಗೆ ದಾಖಲಾದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 2,92,74,873ಕ್ಕೆ ತಲುಪಿದೆ. ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 2,77,90,073 ಹಾಗೂ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 3,63,079ಕ್ಕೆ ಬಂದು ನಿಂತಿದೆ. ಸದ್ಯ ದೇಶದಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 11,21,671 ಆಗಿದ್ದು, ಸೋಂಕಿನ ಪ್ರಭಾವ ತಗ್ಗಿಸಲು ಲಸಿಕೆ ವಿತರಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.

ಕಳೆದ 24ತಾಸಿನಲ್ಲಿ ದೇಶದದಲ್ಲಿ 32,74,672 ಡೋಸ್ ಕೊರೊನಾ ಲಸಿಕೆ ವಿತರಣೆಯಾಗಿದ್ದು, ಇಲ್ಲಿಯ ತನಕ ಒಟ್ಟು 24,60,85,649 ಡೋಸ್​ ಲಸಿಕೆಯನ್ನು ಹಂಚಲಾಗಿದೆ. ಎಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಲಸಿಕೆ ವಿತರಣೆ ವಿಚಾರದಲ್ಲಿ ತಮಿಳುನಾಡು ತೀರಾ ಹಿಂದೆ ಬಿದ್ದಿದ್ದು ಇಲ್ಲಿಯ ತನಕ ರಾಜ್ಯದ 7ಕೋಟಿ ಜನರ ಪೈಕಿ ಕೇವಲ ಶೇ.9ರಷ್ಟು ಮಂದಿಗೆ ಮಾತ್ರ ಲಸಿಕೆ ನೀಡುವಲ್ಲಿ ಸಫಲವಾಗಿದೆ. ಇದರೊಂದಿಗೆ ಉತ್ತರಪ್ರದೇಶ, ಅಸ್ಸಾಂ, ಬಿಹಾರ್ ಹಾಗೂ ಜಾರ್ಖಂಡ್ ರಾಜ್ಯಗಳೂ ಲಸಿಕೆ ವಿತರಿಸುವಲ್ಲಿ ಹಿಂದುಳಿದಿವೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಏತನ್ಮಧ್ಯೆ ತಮಿಳುನಾಡಿನಲ್ಲಿ 16,183, ಕೇರಳದಲ್ಲಿ 14,424, ಮಹಾರಾಷ್ಟ್ರದಲ್ಲಿ 12,207 ಹಾಗೂ ಕರ್ನಾಟಕದಲ್ಲಿ 11,402 ಕೊರೊನಾ ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ. ಕರ್ನಾಟಕದ 11 ಜಿಲ್ಲೆಗಳಲ್ಲಿ ಜೂನ್​ 14ರ ನಂತರ ಮತ್ತೆ ಲಾಕ್​ಡೌನ್​ ವಿಸ್ತರಿಸುತ್ತಿರುವುದಾಗಿ ನಿನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದು, ಉಳಿದ ಜಿಲ್ಲೆಗಳಲ್ಲಿ ನಿಧಾನವಾಗಿ ನಿಯಮ ಸಡಿಲಿಸಲಾಗುವುದು ಎಂದು ತಿಳಿಸಿದ್ದಾರೆ.

(India records 91072 new cases on June 9th slightly fewer than day before death rate also decreased)

ಇದನ್ನೂ ಓದಿ:
ಕೊರೊನಾ ಚಿಕಿತ್ಸೆಗೆ ಲಕ್ಷಗಟ್ಟಲೆ ಹಣ ಪಡೆದ ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ನೋಟಿಸ್​; ದಾಖಲೆ ಸಿಕ್ಕರೆ ಕ್ರಮ ಕೈಗೊಳ್ಳುವ ಎಚ್ಚರಿಕೆ 

ಕೊರೊನಾ ಲಸಿಕೆ ಬೌದ್ಧಿಕ ಆಸ್ತಿ ಹಕ್ಕು ವಿನಾಯಿತಿ ಬಗ್ಗೆ ಮಾತುಕತೆಗೆ ಸಮ್ಮತಿಸಿದ ವಿಶ್ವ ವ್ಯಾಪಾರ ಸಂಘಟನೆ

Published On - 10:07 am, Fri, 11 June 21