AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳಲ್ಲಿ ಕೋವಿಡ್​-19 ಸೋಂಕು; ಹೊಸ ಮಾರ್ಗಸೂಚಿಗಳನ್ನು ಜಾರಿ ಮಾಡಿದ ಕೇಂದ್ರ ಸರ್ಕಾರ

ಮಕ್ಕಳಲ್ಲಿ ಮಧ್ಯಮ ಪ್ರಮಾಣದ ಸೋಂಕು ಇದ್ದರೆ ಅವರನ್ನು ಕೂಡಲೇ ಆಕ್ಸಿಜನ್ ಥೆರಪಿಗೆ ಒಳಪಡಿಬೇಕು ಮತ್ತು ಅವರಲ್ಲಿ ದ್ರವಾಂಶ ಮತ್ತು ಎಲೆಕ್ರೋಲೈಟ್​ ಪ್ರಮಾಣ ಸರಿದೂಗುವಂತೆ ಮಾಡಬೇಕು. ದ್ರವ ರೂಪದ ಪದಾರ್ಥಗಳನ್ನು ಹೆಚ್ಚು ನೀಡಬೇಕು

ಮಕ್ಕಳಲ್ಲಿ ಕೋವಿಡ್​-19 ಸೋಂಕು; ಹೊಸ ಮಾರ್ಗಸೂಚಿಗಳನ್ನು ಜಾರಿ ಮಾಡಿದ ಕೇಂದ್ರ ಸರ್ಕಾರ
ಮಕ್ಕಳಲ್ಲಿ ಕೋವಿಡ್-19 ಸೋಂಕು
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 11, 2021 | 1:29 AM

ನವದೆಹಲಿ: ಮಕ್ಕಳಲ್ಲಿ ಕೊರೋನಾವೈರಸ್ ವ್ಯಾಧಿಯನ್ನು ನಿರ್ವಹಿಸಲು ಸಮಗ್ರವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರವು ರೆಮ್​ಡೆಸಿವವಿರ್ ಌಂಡಿ ವೈರಲ್ ಡ್ರಗ್ ಬಳಸುವುದನ್ನು ಪ್ರತಿಬಂಧಿಸಿದೆ. ರೋಗ ಲಕ್ಷಣಗಳು ತೀವ್ರಗೊಂಡಾಗ ಮಾತ್ರವೇ ಎಚ್​ಆರ್​ಸಿಟಿ ಸ್ಕ್ಯಾನ್ ಮಾಡಿಸುವ ಸಲಹೆ ನೀಡಿದೆ ಮತ್ತು ಅಲ್ಪ ಪ್ರಮಾಣ ಸೋಂಕಿನ ಪ್ರಕರಣಗಲ್ಲಿ ಜ್ವರ-ನಿರೋಧಕ ಮಾತ್ರೆ ಮತ್ತು ಗಂಟಲು ಕೆರೆತ ಶಮನ ಮಾಡುವ ಔಷಧಿಯನ್ನು ಮಾತ್ರ ನೀಡಬೇಕೆಂದು ಹೇಳಿದೆ. ಕೇಂದ್ರ ಆರೋಗ್ಯ ಇಲಾಖೆಯ ತಾಂತ್ರಿಕ ಅಂಗವಾಗಿರುವ ಆರೋಗ್ಯ ಸೇವೆಗಳ ಮಹಾ ನಿರ್ದೇಶನಾಲಯ ಈ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ರೆಮ್​ಡೆಸಿವಿರ್ ಸುರಕ್ಷಿತ ಅನ್ನೋದನ್ನು ಸಾಬೀತುಮಾಡಳಲು ಸಾಕಷ್ಟು ಡಾಟಾ ಲಭ್ಯವಿಲ್ಲ. ರೋಗಲಕ್ಷಣಗಳು ಗಂಭೀರ ಸ್ವರೂಪಕ್ಕೆ ತಿರುಗುತ್ತಿವೆ ಎನ್ನುವ ಸಂದರ್ಭದಲ್ಲಿ ಮಾತ್ರ ಎಚ್​ಆರ್​ಸಿಟಿ ಸ್ಕ್ಯಾನ್ ಮಾಡಿಸಿಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಹಾಗೆಯೇ, ಸ್ಟಿರಾಯ್ಡ್ ಮತ್ತು ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಡ್ರಗ್​ ಅನ್ನು ಆಸ್ಪತ್ರೆಗಳ ತಜ್ಞ ವೈದ್ಯರು ಸಲಹೆ ನೀಡಿದರೆ ಮಾತ್ರ ಉಪಯೋಗಿಸಬೇಕು ಎಂದು ತಿಳಿಸಲಾಗಿದೆ

ಹೋಮ್ ಐಸೋಲೇಶನ್​ನಲ್ಲಿರುವ ರೋಗಲಕ್ಷಣಗಳನ್ನು ತೋರದ (asymptomatic ) ಪ್ರಕರಣಗಳು.

ಮಾರ್ಗಸೂಚಿಗಳಲ್ಲಿ ಮಾಡಿರುವ ಶಿಫಾರಸ್ಸಿನ ಪ್ರಕಾರ ಶಿಶುಗಳ ಮತ್ತು ಮಕ್ಕಳ ಪಾಲಕರು ಕೂಡಲೇ ನಿಗಾವಹಿಸಬೇಕು . ‘ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸೋಂಕಿಗೆ ನಿರ್ದಿಷ್ಟವಾದ ಔಷಧೋಪಚಾರ ಇಲ್ಲ, ಆದರೆ ಬೇರೆ ಅನಾರೋಗ್ಯವಿದ್ದರೆ, ಔಷಧಿಯನ್ನು ಮುಂದುವರೆಸಬಹುದು. ಸೋಂಕಿತ ಮಗು ಕಟ್ಟುನಿಟ್ಟಾಗಿ ಸೂಕ್ತ ಕೊವಿಡ್​ ನಡಾವಳಿಯನ್ನು (ಮಾಸ್ಕ್, ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ದೈಹಿಕ ಅಂತರ) ಅನುಸರಿಸಬೇಕು. ದೇಹದಲ್ಲಿ ನೀರಿನಾಂಶ ಕಾಯ್ದುಕೊಳ್ಳಲು ದ್ರವರೂಪದ ಪದಾರ್ಥಗಳನ್ನು ಕೊಡುವುದರ ಜೊತೆಗೆ ಪೌಷ್ಟಿಕ ಆಹಾರ ನೀಡಬೇಕು.

ಪೋನ್​ನಲ್ಲಿ ಪಾಸಿಟಿವ್ ಧೋರಣೆಯ ಮಾತುಗಳನ್ನಾಡುತ್ತಾ ಮತ್ತು ಇತರ ಚಟುವಟಿಕೆಗಳ ಮೂಲಕ ನಿರಂತರ ಸಂಪರ್ಕದಲ್ಲಿದ್ದು ಅವರನ್ನು ಗೆಲುವಾಗಿಸಿರಬೇಕು. ರೋಗ ಲಕ್ಷಣಗಳು ತೀವ್ರಗೊಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು, ಆಗಲೂ ಯಾವುದೇ ಟೆಸ್ಟ್​ನ ಅಗತ್ಯವಿರುವುದಿಲ್ಲ.

ಸಾಧಾರಣ ಸೋಂಕಿನ ಪ್ರಕಣಗಳಲ್ಲಿ

ಮಕ್ಕಳು ಕಟ್ಟುನಿಟ್ಟಾಗಿ ಸೂಕ್ತವಾದ ಕೊವಿಡ್​ ನಡಾವಳಿಯನ್ನು (ಮಾಸ್ಕ್, ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ದೈಹಿಕ ಅಂತರ) ಪಾಲಿಸಲೇಸಬೇಕು. ಜ್ವರಕ್ಕೆ ಪ್ರತಿ ಕೇಜಿಗೆ 10-15 ಗ್ರಾಂ ಲೆಕ್ಕದಲ್ಲಿ ಅವರ ತೂಕಕ್ಕನುಗುಣವಾಗಿ ಪ್ಯಾರಾಸಿಟಮೋಲ್ ಮಾತ್ರೆಯನ್ನು ಕೊಡಬೇಕು. ಕೆಮ್ಮಿಗೆ ಗಂಟಲು ಕೆರೆತ ಶಮನಗೊಳಿಸುವ ಸಿರಪ್ ಮತ್ತು ದೊಡ್ಡ ಮಕ್ಕಳಿಗೆ ಉಪ್ಪು ನೀರಿನಲ್ಲಿ ಬಾಯಿ ಮುಕ್ಕುಳಿಸುವುದನ್ನು ಮಾಡಿಸುತ್ತಿರಬೇಕು. ಎಲೆಕ್ಟ್ರಾಲ್ ಓರಲ್ ದ್ರವ ಮತ್ತು ಪೌಷ್ಟಿಕಾಂಶಭರಿತ ಆಹಾರವನ್ನು ಕೊಡಬೇಕು.

ಕೊವಿಡ್​-19 ಸಂಬಂಧಿಸಿದ ಯಾವುದೇ ಔಷಧಿ ನೀಡುವ ಅವಶ್ಯಕತೆಯಿಲ್ಲ. ಮಕ್ಕಳ ತಂದೆ-ತಾಯಿಗಳು ಅಥವಾ ಅವರನ್ನು ನೋಡಿಕೊಳ್ಳುತ್ತಿರವವರು ಅವರ ಆರೋಗ್ಯದ ಚಾರ್ಟ್​ ಮಾನಿಟರ್ ಮಾಡುತ್ತಿರಬೇಕು.

ಉಸಿರಾಟದ ಪ್ರಮಾಣವನ್ನು ದಿನಕ್ಕೆ 2-3 ಸಲ ಪರೀಕ್ಷಿಸಬೇಕು, ಮಗು ಏದುಸಿರು ಬಿಡುತ್ತಿದೆಯೇ ಅನ್ನುವುದನ್ನು ಗಮನಿಸುತ್ತಿರಬೇಕು. ದೇಹದ ನೀಲಿಬಣ್ಣಕ್ಕೆ ತಿರುಗುತ್ತಿದೆಯೇ, ತೀವ್ರ ಸ್ವರೂಪದ ಶೀತ, ಮೂತ್ರದ ಪ್ರಮಾಣ, ಆಕ್ಸಿಜನ್ ಸ್ಯಾಚುರೇಷನ್, ದ್ರವ ಪದಾರ್ಥಗಳ ಸೇವನೆ ಮತ್ತು ಚಟುವಟಿಕೆಗಳ ಪ್ರಮಾಣ ಮೊದಲಾದವುಗಳನ್ನು ಗಮನಿಸುತ್ತಿರಬೇಕು, ಎಂದು ಮಾರ್ಗಸೂಚಿಗಳು ಹೇಳುತ್ತವೆ.

ಮಧ್ಯಮ ಪ್ರಮಾಣ ಸೋಂಕಿನ ಪ್ರಕರಣಗಳಲ್ಲಿ

ಮಕ್ಕಳಲ್ಲಿ ಮಧ್ಯಮ ಪ್ರಮಾಣದ ಸೋಂಕು ಇದ್ದರೆ ಅವರನ್ನು ಕೂಡಲೇ ಆಕ್ಸಿಜನ್ ಥೆರಪಿಗೆ ಒಳಪಡಿಬೇಕು ಮತ್ತು ಅವರಲ್ಲಿ ದ್ರವಾಂಶ ಮತ್ತು ಎಲೆಕ್ರೋಲೈಟ್​ ಪ್ರಮಾಣ ಸರಿದೂಗುವಂತೆ ಮಾಡಬೇಕು. ದ್ರವ ರೂಪದ ಪದಾರ್ಥಗಳನ್ನು ಹೆಚ್ಚು ನೀಡಬೇಕು (ಶಿಶುಗಳಿಗೆ ಸ್ತನ್ಯಪಾನ ಸೇರಿ), ದೇಹದಲ್ಲಿ ದ್ರವಾಂಶದ ಪ್ರಮಾಣ ತೀರ ಕಡಿಮೆಯೆನಿಸಿದರೆ ಸಲೈನ್ ಹಾಕಿಸಬೇಕು. ಮಕ್ಕಳಲ್ಲಿ ಮಧ್ಯಮ ಪ್ರಮಾಣದ ಸೋಂಕಿದ್ದರೆ ಕಾರ್ಟಿಕೋಸ್ಟಿರಾಯ್ಡಗಳನ್ನು ನೀಡುವ ಅಗತ್ಯವಿರುವುದಿಲ್ಲ.

ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದರೆ ಮಾತ್ರ ಅವುಗಳ ಜೊತೆ ರಕ್ತಹೆಪ್ಪುಗಟ್ಟುವುದನ್ನು ತಡೆಯುವ ಔಷಧಿ ನೀಡಬೇಕು, ಎಂದು ಮಾರ್ಗಸೂಚಿಗಳು ಹೇಳುತ್ತವೆ.

ತೀವ್ರ ಸ್ವರೂಪದ ಪರಕರಣಗಳಲ್ಲಿ

ಕೂಡಲೇ ಆಕ್ಸಿಜನ್ ಥೆರಪಿ ಆರಂಭಿಸಿಬೇಕು, ದ್ರವಾಂಶ ಮತ್ತ ಎಲೆಕ್ರೋಲೈಟ್​ ಪ್ರಮಾಣ ಸರಿದೂಗುವಂತೆ ಮಾಡಬೇಕು, ಕಾರ್ಟಿಕೋಸ್ಟಿರಾಯ್ಡಗಳನ್ನು ಮತ್ತು ರಕ್ತಹೆಪ್ಪುಗಟ್ಟುವುದನ್ನು ತಡೆಯುವ ಔಷಧಿ ನೀಡಲಾರಂಭಿಸಬಹುದು. ತೀವ್ರ ಉಸಿರಾಟದ ತೊಂದರೆ (ಎಆರ್​ಡಿಎಸ್) ಕಾಣಿಸಿಕೊಂಡರೆ, ಆಥವಾ ಶಾಕ್​ಗಳು ತಲೆದೋರಿದರೆ ಅಗತ್ಯವಿರುವ ಚಿಕಿತ್ಸೆ ಆರಂಭಿಸಬೇಕು. ಌಂಟಿ-ಮೈಕ್ರೊಬಯಲ್ಸ್ ಕೊಡುವುದನ್ನು ಆರಂಭಿಸಬೇಕು. ಮಗುವಿನಲ್ಲಿ ಅಂಗಾಂಗ ವೈಫಲ್ಯವಾದರೆ ಉದಾಹರಣೆಗೆ ಮೂತ್ರಪಿಂಡದ ವೈಫಲ್ಯ ಆದರೆ ಬದಲಿ ಅಂಗ ಜೋಡಣೆಗೆ ವ್ಯವಸ್ಥೆ ಮಾಡಬೇಕು.

ಮಕ್ಕಳು ಮಾಸ್ಕ್ ಬಳಸುವ ಬಗೆ

ಐದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮಾಸ್ಕ್ ಧರಿಸುವ ಅಗತ್ಯವಿಲ್ಲ. 6-11 ವರ್ಷ ವಯೋಮಾನದ ಮಕ್ಕಳು ಅದನ್ನು ಸುರಕ್ಷಿತವಾಗಿ ಮತ್ತು ಸೂಕ್ತವಾಗಿ ಬಳಸುವ ಸಾಮರ್ಥ್ಯಕ್ಕನುಗುಣವಾಗಿ ಪೋಷಕರ ನೇರ ಮಾರ್ಗದರ್ಶನದಲ್ಲಿ ಮಾಸ್ಕ್​ಗಳನ್ನು ಬಳಸಬೇಕು. 12ಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳು ವಯಸ್ಕರ ಹಾಗೆಯೇ ಮಾಸ್ಕ್​ಗಳನ್ನು ಬಳಸಬೇಕು ಮತ್ತು ಅವುಗಳನ್ನು ಬಳಸುವಾಗ ತಮ್ಮ ಕೈಗಳನ್ನು ಆಗಾಗ್ಗೆ ಸೋಪಿನಿಂದ ತೊಳೆಯುತ್ತಿರಬೇಕು ಇಲ್ಲವೇ ಹೆಚ್ಚಿನ ಪ್ರಮಾಣದ ಆಲ್ಕೋಹಾಲ್ ಹ್ಯಾಂಡ್ ರಬ್ ಬಳಸಬೇಕು.

ಇದನ್ನೂ ಓದಿ: Covid Vaccine Guidelines ಕೊವಿಡ್​ನಿಂದ ಚೇತರಿಸಿಕೊಂಡವರು ಮೂರು ತಿಂಗಳ ನಂತರ ಲಸಿಕೆ ತೆಗೆದುಕೊಂಡರೆ ಸಾಕು: ಕೇಂದ್ರ

Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ