Coronavirus cases in India: ಭಾರತದಲ್ಲಿ 18,987 ಹೊಸ ಕೊವಿಡ್ ಪ್ರಕರಣ ಪತ್ತೆ, 246 ಮಂದಿ ಸಾವು
Covid 19: ಸಕ್ರಿಯ ಪ್ರಕರಣಗಳ ಸಂಖ್ಯೆ 2,06,586 ಕ್ಕೆ ಇಳಿಕೆಯಾಗಿದ್ದು, ಒಟ್ಟು ಸೋಂಕಿನ ಶೇಕಡಾ 0.61 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ. ಆ ಮೂಲಕ 24 ಗಂಟೆಗಳ ಅವಧಿಯಲ್ಲಿ 1,067 ಸಕ್ರಿಯ ಕೊವಿಡ್ ಪ್ರಕರಣಗಳ ಇಳಿಕೆಯನ್ನು ದಾಖಲಿಸಿದೆ.
ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 18,987 ಹೊಸ ಕೊವಿಡ್ -19 (Covid 19) ಪ್ರಕರಣಗಳು ವರದಿಯಾಗದ್ದು ಗುರುವಾರ ಸೋಂಕು ಪ್ರಕರಣಗಳ ಸಂಖ್ಯೆ 3,40,20,730 ಕ್ಕೆ ತಲುಪಿದೆ. ಇದೇ ಅವಧಿಯಲ್ಲಿ, ರಾಷ್ಟ್ರೀಯ ಕೊವಿಡ್ ಚೇತರಿಕೆಯ ಪ್ರಮಾಣವು ಶೇಕಡಾ 98.07 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. 246 ಮಂದಿ ಕೊವಿಡ್ ನಿಂದ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 4,51,435 ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,06,586 ಕ್ಕೆ ಇಳಿಕೆಯಾಗಿದ್ದು, ಒಟ್ಟು ಸೋಂಕಿನ ಶೇಕಡಾ 0.61 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ. ಆ ಮೂಲಕ 24 ಗಂಟೆಗಳ ಅವಧಿಯಲ್ಲಿ 1,067 ಸಕ್ರಿಯ ಕೊವಿಡ್ ಪ್ರಕರಣಗಳ ಇಳಿಕೆಯನ್ನು ದಾಖಲಿಸಿದೆ.
20 ದಿನಗಳವರೆಗೆ, ಹೊಸ ಕೊವಿಡ್ ಸೋಂಕುಗಳ ದೈನಂದಿನ ಏರಿಕೆ 30,000 ಕ್ಕಿಂತ ಕಡಿಮೆಯಿದೆ. ಸತತ 109 ದಿನಗಳವರೆಗೆ ದಿನನಿತ್ಯದ ಪ್ರಕರಣಗಳು 50,000 ಗಡಿಗಿಂತ ಕೆಳಗಿವೆ. ಬುಧವಾರ, ದೇಶಾದ್ಯಂತ ಒಟ್ಟು 13,01,083 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದುವರೆಗೆ ದೇಶದಲ್ಲಿ ಕೊವಿಡ್ -19 ಪತ್ತೆಗಾಗಿ ನಡೆಸಲಾದ ಒಟ್ಟು ಪರೀಕ್ಷೆಗಳ ಸಂಖ್ಯೆಯನ್ನು 58,76,64,525 ಕ್ಕೆ ಆಗಿದೆ.
India reports 16,862 new #COVID cases, 19,391 recoveries and 379 deaths in last 24 hours, as per Union Health Ministry.
Total cases: 3,40,37,592 Active cases: 2,03,678 Total recoveries: 3,33,82,100 Death toll: 4,51,814
Total Vaccination: 97,14,38,553 (30,26,483 in last 24 hrs) pic.twitter.com/HL6ZofzuQl
— ANI (@ANI) October 15, 2021
ಕಳೆದ 24 ಗಂಟೆಗಳಲ್ಲಿ 11 ಲಕ್ಷಕ್ಕಿಂತಲೂ ಹೆಚ್ಚು ಕೊವಿಡ್ -19 ಪರೀಕ್ಷೆ ಕೊವಿಡ್ -19 ಸಾಂಕ್ರಾಮಿಕ ರೋಗವನ್ನು ತಡೆಯುವ ಪ್ರಯತ್ನದಲ್ಲಿ ಕಳೆದ 24 ಗಂಟೆಗಳಲ್ಲಿ 11 ಲಕ್ಷಕ್ಕಿಂತಲೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಇದುವರೆಗೆ ಒಟ್ಟು ಪರೀಕ್ಷೆಗಳು 58.88 ಕೋಟಿ ದಾಟಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಹೇಳಿದೆ.
ಅಂಡಮಾನ್‌ನಲ್ಲಿ 3 ಕೊವಿಡ್ ಪ್ರಕರಣ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮೂರು ಹೊಸ ಕೊವಿಡ್ ಪ್ರಕರಣಗಳನ್ನು ವರದಿ ಮಾಡಿವೆ. ಕೇಂದ್ರಾಡಳಿತ ಪ್ರದೇಶದಲ್ಲಿ 7,640 ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಸಂಪರ್ಕ ಪತ್ತೆಹಚ್ಚುವಿಕೆಯ ಸಮಯದಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಅವರು ಹೇಳಿದರು.
ಕಳೆದ 24 ಗಂಟೆಗಳಲ್ಲಿ ಸೋಂಕಿನಿಂದ ಯಾವುದೇ ಹೊಸ ಸಾವು ಸಂಭವಿಸಿಲ್ಲ ಎಂದು ಸಾವಿನ ಸಂಖ್ಯೆ 129 ರಷ್ಟಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಅವಧಿಯಲ್ಲಿ ಇನ್ನೂ ಇಬ್ಬರು ವ್ಯಕ್ತಿಗಳು ಕಾಯಿಲೆಯಿಂದ ಗುಣಮುಖರಾಗಿದ್ದು, ದ್ವೀಪಸಮೂಹದಲ್ಲಿ ಒಟ್ಟು ಚೇತರಿಕೆಯ ಸಂಖ್ಯೆಯನ್ನು 7,501 ಕ್ಕೆ ತೆಗೆದುಕೊಂಡಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಈಗ 10 ಸಕ್ರಿಯ ಪ್ರಕರಣಗಳಿವೆ.
ಕೇರಳದಲ್ಲಿ 9,200 ಕ್ಕೂ ಹೆಚ್ಚು ಹೊಸ ಪ್ರಕರಣ ಪತ್ತೆ ಕಳೆದ 24 ಗಂಟೆಗಳಲ್ಲಿ 88,733 ಮಾದರಿಗಳನ್ನು ಪರೀಕ್ಷಿಸಿದಾಗ ಕೇರಳವು 9,246 ಹೊಸ ಕೊವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ. ರಾಜ್ಯದಲ್ಲಿ ಪ್ರಸ್ತುತ 95,828 ಸಕ್ರಿಯ ಪ್ರಕರಣಗಳಿದ್ದು ಈ ಸಂಖ್ಯೆ ಪ್ರತಿದಿನ ಕಡಿಮೆಯಾಗುತ್ತಿದೆ. ಅಕ್ಟೋಬರ್ 14 ರಂದು ಕಾಯಿಲೆಯಿಂದ ಚೇತರಿಸಿಕೊಂಡ ರೋಗಿಗಳ ಸಂಖ್ಯೆ 10,952 ಆಗಿದೆ. ಆರೋಗ್ಯ ಇಲಾಖೆಯ ಪ್ರಕಾರ ಆಸ್ಪತ್ರೆಗಳು ಅಥವಾ ಕ್ಷೇತ್ರ ಆಸ್ಪತ್ರೆಗಳಲ್ಲಿ ಕೇವಲ ಶೇ 10.1 ಸಕ್ರಿಯ ಪ್ರಕರಣಗಳು ದಾಖಲಾಗುತ್ತವೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 96 ಮಂದಿ ಸಾವಗೀಡಾಗಿದ್ದು ಒಟ್ಟು ಸಾವಿನ ಸಂಖ್ಯೆ 26,667ಕ್ಕೆ ತಲುಪಿದೆ.
ಇದನ್ನೂ ಓದಿ: ಕೊವಿಡ್ ನಿಯಮ ಪಾಲಿಸದಿದ್ದರೆ ಚಿತ್ರಮಂದಿರ ಕ್ಲೋಸ್: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಎಚ್ಚರಿಕೆ
Published On - 10:51 am, Fri, 15 October 21