Coronavirus Cases in India: ದೇಶದಲ್ಲಿಂದು 3.47 ಲಕ್ಷಕ್ಕಿಂತಲೂ ಹೆಚ್ಚು ಕೊವಿಡ್ ಪ್ರಕರಣ ಪತ್ತೆ, ಒಮಿಕ್ರಾನ್ ಪ್ರಕರಣಗಳು 9,692ಕ್ಕೆ ಏರಿಕೆ

| Updated By: ರಶ್ಮಿ ಕಲ್ಲಕಟ್ಟ

Updated on: Jan 21, 2022 | 10:46 AM

Covid 19 ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 703 ಸಾವು ದಾಖಲಾಗಿದೆ.

Coronavirus Cases in India: ದೇಶದಲ್ಲಿಂದು 3.47 ಲಕ್ಷಕ್ಕಿಂತಲೂ ಹೆಚ್ಚು ಕೊವಿಡ್ ಪ್ರಕರಣ ಪತ್ತೆ, ಒಮಿಕ್ರಾನ್ ಪ್ರಕರಣಗಳು 9,692ಕ್ಕೆ ಏರಿಕೆ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3.47 ಲಕ್ಷಕ್ಕೂ ಹೆಚ್ಚು ಹೊಸ ಕೊರೊನಾವೈರಸ್ (Coronavirus) ಪ್ರಕರಣಗಳು (3,47,254) ವರದಿಯಾಗಿದೆ. 2.51 ಲಕ್ಷ ಹೊಸ (2,51,777) ಚೇತರಿಕೆಗಳೊಂದಿಗೆ, ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ 20,18,825 ಆಗಿದೆ. ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಒಟ್ಟು ಸಂಖ್ಯೆ 9,692 ಕ್ಕೆ ಏರಿದೆ, ಇದು ನಿನ್ನೆಯಿಂದ ಶೇಕಡಾ 4.36 ರಷ್ಟು ಹೆಚ್ಚಳವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 703 ಸಾವು ದಾಖಲಾಗಿದೆ. ಒಮಿಕ್ರಾನ್ (Omicron) ಉಲ್ಬಣ ಮುಂದುವರಿದಿದ್ದು ಇದು ಸಕ್ರಿಯ ಪ್ರಕರಣಗಳ ಏರಿಕೆಗೆ ಕಾರಣವಾಗಿದೆ. ಡೇಟಾ ಪ್ರಕಾರ, ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ ಇದು  5.23 ಪ್ರತಿಶತವನ್ನು ಒಳಗೊಂಡಿವೆ. ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ ಒಟ್ಟಾರೆ ಕೊವಿಡ್ ಪ್ರಕರಣಗಳ ಸಂಖ್ಯೆ ಈಗ 3,85,66,027 ಆಗಿದೆ. ಸಂಬಂಧಿತ ಸಾವಿನ ಸಂಖ್ಯೆ 4,88,396 ಆಗಿದೆ. ದೈನಂದಿನ ಧನಾತ್ಮಕತೆಯ ದರವು ಶೇಕಡಾ 17.94 ಕ್ಕೆ ಏರಿದೆ, ಆದರೆ ಸಾಪ್ತಾಹಿಕ ಸಕಾರಾತ್ಮಕತೆಯ ದರವು ಶೇಕಡಾ 16.56 ರಷ್ಟಿದೆ ಎಂದು ಸಚಿವಾಲಯ ಹೇಳಿದೆ. ಕಳೆದ 24 ಗಂಟೆಗಳಲ್ಲಿ 2,51,777 ಜನರು ಕೊವಿಡ್ ಕಾಯಿಲೆಯಿಂದ ಚೇತರಿಸಿಕೊಂಡಿದ್ದು ಒಟ್ಟು ಚೇತರಿಸಿಕೊಂಡವರ ಸಂಖ್ಯೆ 3,60,58,806 ಕ್ಕೆ ತಲುಪಿದೆ. ಏತನ್ಮಧ್ಯೆ, ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ದೇಶವು ಇದುವರೆಗೆ 160.43 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಿದೆ.

ಗುರುವಾರ ರಾಷ್ಟ್ರೀಯ ರಾಜಧಾನಿಯ ಸಕಾರಾತ್ಮಕ ದರವು ಗಮನಾರ್ಹವಾಗಿ ಕುಸಿದ ನಂತರ, ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ನಗರದಲ್ಲಿ ಮೂರನೇ ಅಲೆಯ ಉತ್ತುಂಗವು ಹಾದುಹೋಗುವ ಸಾಧ್ಯತೆಯಿದೆ ಎಂದು ಹೇಳಿದರು. “ದೆಹಲಿಯಲ್ಲಿ ಪ್ರಕರಣಗಳ ಸಂಖ್ಯೆಯು ಗರಿಷ್ಠ 28,000 ಪ್ರಕರಣಗಳ ಅರ್ಧಕ್ಕಿಂತ ಕಡಿಮೆಯಾಗಿದೆ ಮತ್ತು ಸಕಾರಾತ್ಮಕತೆಯ ದರವೂ ಕಡಿಮೆಯಾಗಿದೆ” ಎಂದು ಜೈನ್ ಹೇಳಿದರು.

ಒಮಿಕ್ರಾನ್​​ನಿಂದಾಗಿ ಮೂರನೇ ಅಲೆ ದೇಶಾದ್ಯಂತ ಹರಡಿದೆ. ಆರೋಗ್ಯ ಸಚಿವಾಲಯದ ಪ್ರಕಾರ, ಹೆಚ್ಚಿನ ವ್ಯಾಕ್ಸಿನೇಷನ್​​ನಿಂದಾಗಿ ಕಡಿಮೆ ಆಸ್ಪತ್ರೆಗೆ ದಾಖಲು ಮತ್ತು ಸಾವುಗಳು ಸಂಭವಿಸಿವೆ. ಭಾರತದಲ್ಲಿ ಕೊವಿಡ್-19 ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿದ್ದು, ಕಳೆದ ಒಂದು ವಾರದಲ್ಲಿ ಸಾಪ್ತಾಹಿಕ ಸಕಾರಾತ್ಮಕತೆಯ ಪ್ರಮಾಣವು ಸುಮಾರು ಶೇ16 ರಷ್ಟು ತಲುಪಿದೆ ಎಂದು ಸಚಿವಾಲಯ ತಿಳಿಸಿದೆ. ಏತನ್ಮಧ್ಯೆ, ಗುರುವಾರ (46,387) ಪ್ರಕರಣಗಳಲ್ಲಿ ಅತಿ ಹೆಚ್ಚು ಏಕದಿನ ಏರಿಕೆಯನ್ನು ವರದಿ ಮಾಡಿದ ನಂತರ, ಕೇರಳ ಸರ್ಕಾರವು ಮುಂದಿನ ಎರಡು ಭಾನುವಾರಗಳಲ್ಲಿ ಲಾಕ್‌ಡೌನ್ ತರಹದ ನಿರ್ಬಂಧಗಳನ್ನು ವಿಧಿಸಲು ನಿರ್ಧರಿಸಿದೆ.

ದೆಹಲಿಯಲ್ಲಿ 12306 ಪ್ರಕರಣಗಳು ವರದಿ ಆಗಿದ್ದು ಮುಂಬೈನಲ್ಲಿ 5708 ಪ್ರಕರಣಗಳು ವರದಿ ಆಗಿವೆ.ಅದೇ ಸಮಯದಲ್ಲಿ ಬೆಂಗಳೂರಿನಲ್ಲಿ 30540 ಪ್ರಕರಣಗಳು, ಕೋಲ್ಕತ್ತಾದಲ್ಲಿ 1759 ಪ್ರಕರಣಗಳು ಮತ್ತು ಚೆನ್ನೈನಲ್ಲಿ 7520 ಪ್ರಕರಣಗಳು ವರದಿ ಆಗಿವೆ.

ವೈರಸ್ ವೇಗವಾಗಿ ಹರಡುತ್ತಿದೆ: ಆರೋಗ್ಯ ಸಚಿವಾಲಯ

ಕಳೆದ ಒಂದು ವಾರದಲ್ಲಿ ದೇಶಾದ್ಯಂತ 515 ಜಿಲ್ಲೆಗಳು ಶೇಕಡಾ 5 ಕ್ಕಿಂತ ಹೆಚ್ಚು ಸಕಾರಾತ್ಮಕತೆಯನ್ನು ವರದಿ ಮಾಡಿದೆ ಎಂದು ಆರೋಗ್ಯ ಸಚಿವಾಲಯ ಗುರುವಾರ ಹೇಳಿದೆ,.ಹೆಚ್ಚು ಸಾಂಕ್ರಾಮಿಕ ಒಮಿಕ್ರಾನ್ ರೂಪಾಂತರದಿಂದ ಪ್ರಚೋದಿಸಲ್ಪಟ್ಟ ಮೂರನೇ ಅಲೆ ದೇಶದ ಬಹುತೇಕ ಎಲ್ಲಾ ಭಾಗಗಳಿಗೆ ಹರಡಿದೆ. ಆದಾಗ್ಯೂ, ಉಲ್ಬಣಗೊಳ್ಳುವಿಕೆಯ ಹೊರತಾಗಿಯೂ, ಹೆಚ್ಚಿನ ವ್ಯಾಕ್ಸಿನೇಷನ್ ನೀಡಿಕೆಯಿಂದಾಗಿ ಕಡಿಮೆ ಆಸ್ಪತ್ರೆಗೆ ದಾಖಲು ಮತ್ತು ಸಾವುಗಳು ಸಂಭವಿಸಿವೆ ಎಂದು ಸಚಿವಾಲಯ ಹೇಳಿದೆ.

ಕೇರಳದಲ್ಲಿ ಟಿಪಿಆರ್ ಶೇ40.2 ಕ್ಕೆ ಏರಿಕೆ

ಕೇರಳದಲ್ಲಿ ಗುರುವಾರ 46,387 ಹೊಸ ಕೊವಿಡ್ -19, 15,388 ಚೇತರಿಕೆ ಮತ್ತು ಕಳೆದ 24 ಗಂಟೆಗಳಲ್ಲಿ 32 ಸಾವುಗಳು ವರದಿಯಾಗಿವೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ 309 ಸಾವುಗಳನ್ನು ವರದಿ ಮಾಡಿದ್ದು ಒಟ್ಟು ಸಾವಿನ ಸಂಖ್ಯೆ 51,501 ಆಗಿದೆ.

ಇದನ್ನೂ ಓದಿ: Covid 19 Karnataka Update: ಕರ್ನಾಟಕದಲ್ಲಿ 47 ಸಾವಿರ ಮಂದಿಗೆ ಕೊರೊನಾ ಸೋಂಕು, ಕೊವಿಡ್​ನಿಂದ 29 ಜನರು ಸಾವು

Published On - 10:20 am, Fri, 21 January 22