ದೆಹಲಿ: ಶುಕ್ರವಾರ (ಆಗಸ್ಟ್ 27) ಭಾರತದಲ್ಲಿ 1 ಕೋಟಿ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 1 ಕೋಟಿ ಡೋಸ್ ಲಸಿಕೆ ನೀಡಿಕೆ ಆಗಿದ್ದು, ಇದೇ ಮೊದಲ ಬಾರಿಗೆ ಒಂದೇ ದಿನ 1 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಇಂದು 1 ಕೋಟಿ 64 ಸಾವಿರ ಡೋಸ್ ಲಸಿಕೆ ನೀಡಲಾಗಿದ್ದು, ದೇಶದಲ್ಲಿ ಇಂದಿನಂತೆ ಒಟ್ಟು 62 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ದೇಶದ ಶೇಕಡಾ 50 ರಷ್ಟು ವಯಸ್ಕರಿಗೆ ಕನಿಷ್ಠ ಒಂದು ಡೋಸ್ ಲಸಿಕೆ ನೀಡಿಕೆ ಆಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಶುಕ್ರವಾರ 7 ಗಂಟೆ ವೇಳೆಗೆ 62,09,43,580 ಡೋಸ್ ಕೊರೊನಾ ಲಸಿಕೆ ನೀಡಿಕೆ ದಾಖಲಾಗಿದೆ.
ದೇಶದಲ್ಲಿ 18 ವರ್ಷ ಮೇಲ್ಪಟ್ಟ 94 ಕೋಟಿ ಜನರಿದ್ದಾರೆ. ಇದರ ಪೈಕಿ 47 ಕೋಟಿ ಮೊದಲ ಡೋಸ್ ಲಸಿಕೆ ನೀಡಿಕೆ ಸಂಪೂರ್ಣಗೊಂಡಿದೆ. ದೇಶದಲ್ಲಿ 14.17 ಕೋಟಿ ಜನರಿಗೆ ಎರಡು ಡೋಸ್ ಲಸಿಕೆ ನೀಡಿಕೆ ಪೂರ್ಣವಾಗಿದೆ. ಇಂದು ಒಂದೇ ದಿನ 60 ಲಕ್ಷ ಮಂದಿಗೆ ಮೊದಲ ಡೋಸ್ ಲಸಿಕೆ ನೀಡಿಕೆ ಆಗಿದೆ ಎಂದು ತಿಳಿದುಬಂದಿದೆ. ಇಂದು 23 ಲಕ್ಷ ಮಂದಿಗೆ ಎರಡನೇ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟಾರೆ ಇಂದು 1 ಕೋಟಿ ಡೋಸ್ ಕೊವಿಡ್19 ಲಸಿಕೆ ನೀಡಿ ಹೊಸ ದಾಖಲೆ ಬರೆಯಲಾಗಿದೆ. ಈ ಮೊದಲು, ಜೂನ್ 21 ರಂದು ದೇಶದಲ್ಲಿ 88 ಲಕ್ಷ ಡೋಸ್ ಲಸಿಕೆ ನೀಡಿದ್ದೇ ಗರಿಷ್ಠ ದಾಖಲೆ ಆಗಿತ್ತು.
ಆಗಸ್ಟ್ ತಿಂಗಳಲ್ಲಿ ಇದುವರೆಗೂ 15 ಕೋಟಿ ಡೋಸ್ ಲಸಿಕೆ ನೀಡಿಕೆ ಆಗಿದೆ. ಆಗಸ್ಟ್ ತಿಂಗಳಲ್ಲಿ 17 ಕೋಟಿ ಡೋಸ್ ಲಸಿಕೆ ನೀಡಿಕೆ ಗುರಿ ಇಟ್ಟುಕೊಳ್ಳಲಾಗಿತ್ತು. ತಿಂಗಳ ಮುಕ್ತಾಯಕ್ಕೆ ನಾಲ್ಕು ದಿನ ಉಳಿದಿರುವಂತೆ 15 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಮುಂಬರುವ, ಸಪ್ಟೆಂಬರ್ ತಿಂಗಳಲ್ಲಿ 20 ಕೋಟಿ ಡೋಸ್ ಕೊವಿಡ್-19 ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ.
#COVID19Vaccination update- Day 224
✅India records highest single-day vaccine coverage
✅Over 93 lakh doses administered
✅India’s Cumulative COVID-19 Vaccination Coverage crosses 62 Cr landmark milestone#LargestVaccineDrive
Read: https://t.co/jTtXV81i87 pic.twitter.com/JoHZc1qA7N
— PIB India (@PIB_India) August 27, 2021
ಕರ್ನಾಟಕ ಕೊರೊನಾ ವರದಿ
ಕರ್ನಾಟಕ ರಾಜ್ಯದಲ್ಲಿ ಇಂದು (ಆಗಸ್ಟ್ 27) ಹೊಸದಾಗಿ 1,301 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,44,764 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 28,88,520 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 17 ಜನರ ಸಾವು ಸಂಭವಿಸಿದೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 37,248 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 18,970 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಇಂದು ಒಂದೇ ದಿನ 386 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,36,615 ಕ್ಕೆ ಏರಿಕೆಯಾಗಿದೆ. 12,36,615 ಸೋಂಕಿತರ ಪೈಕಿ 12,13,296 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿನಿಂದ 2 ಮಂದಿ ಸಾವನ್ನಪ್ಪಿದ್ದಾರೆ. ಅದರಂತೆ, ನಗರದಲ್ಲಿ ಕೊರೊನಾದಿಂದ ಈವರೆಗೆ 15,977 ಜನರ ಸಾವು ಸಂಭವಿಸಿದೆ. ಬೆಂಗಳೂರಲ್ಲಿ 7,341 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.
ಇದನ್ನೂ ಓದಿ: ಶಿಕ್ಷಕರ ದಿನಾಚರಣೆ ಹಿನ್ನೆಲೆ; ಎಲ್ಲಾ ಶಿಕ್ಷಕರಿಗೆ ಕೊರೊನಾ ಲಸಿಕೆ ನೀಡುವಂತೆ ಕೇಂದ್ರ ನಿರ್ದೇಶನ
Published On - 9:11 pm, Fri, 27 August 21