ಭಾರತದ ಈ ನಗರವು ವಿಶ್ವದಲ್ಲೇ ಅತಿಹೆಚ್ಚು ಸಿಸಿಟಿವಿ ಕ್ಯಾಮರಾ ಹೊಂದಿರುವ ಪ್ರದೇಶ ಎಂಬ ಸ್ಥಾನ ಪಡೆದುಕೊಂಡಿದೆ!

CCTV Cameras: ಫೋರ್ಬ್ಸ್ ಪಟ್ಟಿಯ ಪ್ರಕಾರ ಪ್ರತಿ ಚದರ ಮೈಲಿಗೆ ಅತಿಹೆಚ್ಚು ಸಿಸಿಟಿವಿ ಕ್ಯಾಮರಾ ಅಳವಡಿಸಿರುವ ನಗರಗಳ ಪೈಕಿ ಈ ಪ್ರದೇಶ ಮೊದಲ ಸ್ಥಾನದಲ್ಲಿದೆ.

ಭಾರತದ ಈ ನಗರವು ವಿಶ್ವದಲ್ಲೇ ಅತಿಹೆಚ್ಚು ಸಿಸಿಟಿವಿ ಕ್ಯಾಮರಾ ಹೊಂದಿರುವ ಪ್ರದೇಶ ಎಂಬ ಸ್ಥಾನ ಪಡೆದುಕೊಂಡಿದೆ!
ಸಿಸಿಟಿವಿ ಕ್ಯಾಮರಾ (ಪ್ರಾತನಿಧಿಕ ಚಿತ್ರ)

ದೆಹಲಿ: ಭಾರತದ ರಾಜಧಾನಿ ದೆಹಲಿ ವಿಶ್ವದಲ್ಲೇ ಅತಿಹೆಚ್ಚು ಕ್ಯಾಮರಾ ಅಳವಡಿಕೆ ಆಗಿರುವ ನಗರ ಎಂದು ಗುರುತಿಸಲ್ಪಟ್ಟಿದೆ. ಫೋರ್ಬ್ಸ್ ಪಟ್ಟಿಯ ಪ್ರಕಾರ ಪ್ರತಿ ಚದರ ಮೈಲಿಗೆ ಅತಿಹೆಚ್ಚು ಸಿಸಿಟಿವಿ ಕ್ಯಾಮರಾ ಅಳವಡಿಸಿರುವ ನಗರದಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದೆ. ವಿಶ್ವದ 150 ನಗರಗಳ ವಿಶ್ಲೇಷಣೆಯ ಪ್ರಕಾರ ದೆಹಲಿಯ ಸಾರ್ವಜನಿಕ ಸ್ಥಳದಲ್ಲಿ ಅತಿಹೆಚ್ಚು ಸಿಸಿಟಿವಿ ಹೊಂದಿದೆ. ಫೋರ್ಬ್ಸ್ ವರದಿಯಂತೆ ದೆಹಲಿಯಲ್ಲಿ ಚದರ ಮೈಲಿಗೆ ಇರುವ ಸಿಸಿಟಿವಿ ಕ್ಯಾಮರಾಗಳ ಸರಾಸರಿ ಸಂಖ್ಯೆ ಬರೋಬ್ಬರಿ 1,826.6!

ದೆಹಲಿ ಹೊರತುಪಡಿಸಿ, ಅತಿಹೆಚ್ಚು ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಲ್ಪಟ್ಟಿರುವ ನಗರಗಳಲ್ಲಿ ಚೆನ್ನೈ ಮೂರನೇ ಸ್ಥಾನದಲ್ಲಿದೆ. ಚೆನ್ನೈ ನಗರದಲ್ಲಿ ಪ್ರತಿ ಚದರ ಮೈಲಿಗೆ ಸರಾಸರಿ 609.9 ಕ್ಯಾಮರಾ ಅಳವಡಿಸಲಾಗಿದೆ. ಮತ್ತು ಮುಂಬೈ ನಗರವು ಚದರ ಮೈಲಿಗೆ 157.4 ಕ್ಯಾಮರಾಗಳ ಮೂಲಕ 18ನೇ ಸ್ಥಾನ ಪಡೆದುಕೊಂಡಿದೆ.

ದೆಹಲಿ ನಗರವು ಚೀನಾದ ಹಲವು ನಗರಗಳನ್ನು ಹಿಂದಿಕ್ಕಿದೆ. ಶೆನ್​ಜೆನ್ (520.1), ವುಕ್ಸಿ (472.7), ಕ್ವಿಂಗ್ಡವೊ (415.8), ಶಾಂಘೈ (408.5) ಚೀನಾದ ಈ ನಗರಗಳು ಪ್ರತಿ ಚದರ ಮೈಲಿಗೆ ಅತಿಹೆಚ್ಚು ಕ್ಯಾಮರಾ ಹೊಂದಿರುವ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ದೆಹಲಿಯು ಲಂಡನ್ (1,138.5), ಸಿಂಗಾಪುರ (387.6), ನ್ಯೂಯಾರ್ಕ್ (193.7) ಮತ್ತು ಮಾಸ್ಕೋ (210) ನಗರಗಳನ್ನು ಕೂಡ ಹಿಂದಿಕ್ಕಿ ಮುಂಚೂಣಿಯ ಸ್ಥಾನ ಪಡೆದುಕೊಂಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ನಗರ ಒಂದರಲ್ಲಿ ಚದರ ಮೈಲಿಗೆ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳ ಪಟ್ಟಿಯಲ್ಲಿ, ಶಾಂಘೈ, ನ್ಯೂಯಾರ್ಕ್ ಮತ್ತು ಲಂಡನ್ ನಗರವನ್ನು ಹಿಂದಿಕ್ಕಿ ದೆಹಲಿ ಮೊದಲ ಸ್ಥಾನ ಪಡೆದುಕೊಂಡಿದೆ ಎನ್ನಲು ಹೆಮ್ಮೆ ಆಗುತ್ತಿದೆ ಎಂದು ಹೇಳಿದ್ದಾರೆ.

ಕ್ಯಾಮರಾ ಅಳವಡಿಕೆಯಲ್ಲಿ ಭಾಗಿ ಆಗಿರುವ ಅಧಿಕಾರಿಗಳನ್ನು ಕೂಡ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಭಿನಂದಿಸಿದ್ದಾರೆ. ಸಣ್ಣ ಅವಧಿಯಲ್ಲಿ ಈ ಕೆಲಸ ಮಾಡಲು ಶ್ರಮಿಸಿದ ನಮ್ಮ ಅಧಿಕಾರಿಗಳು ಹಾಗೂ ಇಂಜಿನಿಯರ್​​ಗಳಿಗೆ ಅಭಿನಂದನೆಗಳು ಎಂದು ಕೇಜ್ರಿವಾಲ್ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ದೆಹಲಿ ಸರ್ಕಾರದ ದೇಶ್ ಕೆ ಮೆಂಟರ್ ವಿಶೇಷ ಕಾರ್ಯಕ್ರಮಕ್ಕೆ  ಸೋನು ಸೂದ್ ಬ್ರಾಂಡ್ ಅಂಬಾಸಿಡರ್

Crime News: ನಡುರಸ್ತೆಯಲ್ಲಿ ವೃದ್ಧನ ಅಡ್ಡಗಟ್ಟಿ ದರೋಡೆ; ಸಿಸಿಟಿವಿ ವಿಡಿಯೋ ವೈರಲ್

Read Full Article

Click on your DTH Provider to Add TV9 Kannada