
ಬೆಂಗಳೂರು, ಜುಲೈ 30: ಇಸ್ರೋ ಮತ್ತು ನಾಸಾ ಸಹಯೋಗದಲ್ಲಿ ತಯಾರಿಸಲಾದ ನಿಸಾರ್ ಉಪಗ್ರಹವನ್ನು (NISAR satellite) ಇಂದು ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ. ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಸ್ಪೇಸ್ ಸೆಂಟರ್ನಲ್ಲಿ ಭಾರತೀಯ ಕಾಲಮಾನ ಸಂಜೆ 5:40ಕ್ಕೆ ಈ ಉಪಗ್ರಹವನ್ನು ಆಗಸಕ್ಕೆ ಕಳುಹಿಸಲಾಗಿದೆ. ಜಿಎಸ್ಎಲ್ವಿ ಎಫ್-16 ರಾಕೆಟ್ ಮೂಲಕ ಇದರ ಉಡ್ಡಯನ ಮಾಡಲಾಗಿದೆ.
ನಿಸಾರ್ ಉಪಗ್ರಹ ಉಡಾವಣೆಯು ಭಾರತಕ್ಕೆ ಮಾತ್ರವಲ್ಲ ವಿಶ್ವಕ್ಕೂ ಒಂದು ಮೈಲಿಗಲ್ಲು. ಜಾಗತಿಕ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರಕ್ಕೆ ಇದು ವಿಶೇಷ ಕ್ಷಣಗಳಲ್ಲಿ ಒಂದೆನಿಸಿದೆ. ನಾಸಾ ಮತ್ತು ಇಸ್ರೋ ಜಂಟಿಯಾಗಿ ಅಭಿವೃದ್ಧಪಡಿಸಿರುವ ಸಿಂಥೆಟಿಕ್ ಅಪರ್ಚರ್ ರಾಡಾರ್ ಇದು. ಹೀಗಾಗಿ, ಇದಕ್ಕೆ NISAR (NASA ISRO Synthetic Aperture Radar) ಎಂದು ಹೆಸರಿಡಲಾಗಿದೆ.
ನಿಸಾರ್ ಸೆಟಿಲೈಟ್ ಅನ್ನು 1.5 ಬಿಲಿಯನ್ ಡಾಲರ್ ವೆಚ್ಚದಲ್ಲಿ ತಯಾರಿಸಲಾಗಿದೆ. ರಾಡಾರ್ ಇಮೇಜಿಂಗ್ ಸೆಟಿಲೈಟ್ ಇದು. ಹವಾಮಾನ ಬದಲಾವಣೆ ಮತ್ತು ನೈಸರ್ಗಿಕ ವಿಕೋಪ ಸಂದರ್ಭಗಳನ್ನು ಗಮನಿಸಲು ಈ ಉಪಗ್ರಹ ಉಪಯುಕ್ತವಾಗಲಿದೆ. ಇದರ ಜೀವಿತಾವಧಿ ಐದು ವರ್ಷ ಇರುವ ನಿರೀಕ್ಷೆ ಇದೆ.
ಇದನ್ನೂ ಓದಿ: ಟ್ರಂಪ್ ಡೆಡ್ಲೈನ್ನೊಳಗೆ ಅಮೆರಿಕದೊಂದಿಗೆ ಕುದುರದ ಭಾರತದ ಟ್ರೇಡ್ ಡೀಲ್; ಮುಂದೇನು?
ನಿಸಾರ್ ಸೆಟಿಲೈಟ್ ಮಾಮೂಲಿಯ ಉಪಗ್ರಹ ರೀತಿಯದ್ದಲ್ಲ. ರೆಗ್ಯುಲರ್ ಸೆಟಿಲೈಟ್ಗಳು ಸೂರ್ಯನ ಬೆಳಕು ಮತ್ತು ಕೆಮರಾ ಮೇಲೆ ಅವಲಂಬಿತವಾಗಿರುತ್ತವೆ. ಆದರೆ, ನಿಸಾರ್ ಸೆಟಿಲೈಟ್ ಎರಡು ರಾಡಾರ್ ಫ್ರೀಕ್ವೆನ್ಸಿಗಳನ್ನು ಬಳಸುತ್ತದೆ. ಅಂದರೆ, ಎರಡು ರಾಡಾರ್ ಕಣ್ಣುಗಳನ್ನು ಹೊಂದಿದೆ. ಈ ಎರಡು ರಾಡಾರ್ ಫ್ರೀಕ್ವೆನ್ಸಿಗಳೆಂದರೆ ಎಲ್ ಬ್ಯಾಂಡ್ ಮತ್ತು ಎಸ್ ಬ್ಯಾಂಡ್.
ಈ ರಾಡಾರ್ ಬ್ಯಾಂಡ್ಗಳು ಬಾಹ್ಯಾಕಾಶದಿಂದ ಭೂಮಿಗೆ ಸಿಗ್ನಲ್ಗಳನ್ನು ರವಾನಿಸುತ್ತವೆ. ಭೂಮಿಯಿಂದ ಮರಳುವ ಸಿಗ್ನಲ್ಗಳನ್ನು ಸ್ವೀಕರಿಸುತ್ತವೆ. ಇದರಿಂದ ಭೂಮಿಯ ಮೇಲ್ಮೈನಲ್ಲಿ ಆಗುವ ಪ್ರಮುಖ ಬದಲಾವಣೆಗಳನ್ನು ಗಮನಿಸಲು ಸಾಧ್ಯವಾಗುತ್ತದೆ. ಆಪ್ಟಿಕಲ್ ಕ್ಯಾಮರಾ ಬದಲು ರಾಡಾರ್ ಅನ್ನು ಬಳಸುವುದರಿಂದ ಯಾವುದೇ ಹವಾಮಾನದಲ್ಲೂ, ದಟ್ಟ ಮೋಡಗಳಿದ್ದರೂ ಭೂಮಿಯ ಮೇಲ್ಮೈಯನ್ನು ಇದು ಹೆಚ್ಚು ನಿಖರವಾಗಿ ಗಮನಿಸಬಲ್ಲುದು.
ಇದನ್ನೂ ಓದಿ: ಬೆಂಗಳೂರಿನಿಂದ ಕಾರ್ಯಾಚರಿಸುತ್ತಿದ್ದ ಶಂಕಿತ ಅಲ್ ಕೈದಾ ಭಯೋತ್ಪಾದಕಿ ಸಮಾ ಪರ್ವೀನ್ ಬಂಧಿಸಿದ ಗುಜರಾತ್ ಎಟಿಎಸ್
ನಿಸಾರ್ ಸೆಟಿಲೈಟ್ನ ಪ್ರಮುಖ ಸಿಸ್ಟಂಗಳನ್ನು ಇಸ್ರೋ ಅಭಿವೃದ್ಧಿಪಡಿಸಿದೆ. ಹಾಗೆಯೆ, ಜಿಎಸ್ಎಲ್ವಿ-ಎಫ್16 ರಾಕೆಟ್ ಕೂಡ ಇಸ್ರೋದಿಂದ ನಿರ್ಮಿತವಾಗಿದೆ. ಅಮೆರಿಕದ ನಾಸಾ ಸಂಸ್ಥೆಯು ಎಲ್ ಬ್ಯಾಂಡ್ ರಾಡಾರ್, ಜಿಪಿಎಸ್ ರಿಸೀವರ್ ಮತ್ತು ಹೈಸ್ಪೀಡ್ ಡಾಟಾ ಡೌನ್ಲಿಂಕ್ ಸಿಸ್ಟಂಗಳನ್ನು ಕೊಟ್ಟಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ