What India Thinks Today: ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ : ಆಸ್ಟ್ರೇಲಿಯಾ ಮಾಜಿ ಪ್ರಧಾನಿ ಟೋನಿ

|

Updated on: Feb 26, 2024 | 10:05 AM

ಇಂದು ಟಿವಿ 9 ನೆಟ್‌ವರ್ಕ್‌ನ ಜಾಗತಿಕ ಶೃಂಗಸಭೆ 'ವಾಟ್ ಇಂಡಿಯಾ ಟುಡೇ ಥಿಂಕ್ಸ್' ಎರಡನೇ ದಿನಕ್ಕೆ ಕಾಲಿಟ್ಟಿದೆ. ಫೆಬ್ರವರಿ 25 ರ ಭಾನುವಾರದಂದು ಈ ಕಾರ್ಯಕ್ರಮ ಪ್ರಾರಂಭವಾಯಿತು. ಕಾರ್ಯಕ್ರಮದ ಎರಡನೇ ದಿನವಾದ ಇಂದು ಪ್ರಧಾನಿ ಮೋದಿ, ಸ್ಮೃತಿ ಇರಾನಿ, ಎಸ್. ಜೈಶಂಕರ್, ಅಶ್ವಿನಿ ವೈಷ್ಣವ್ ಮುಂತಾದ ದಿಗ್ಗಜರು ಭಾಗವಹಿಸಲಿದ್ದಾರೆ. ಸದ್ಯ, ಆಸ್ಟ್ರೇಲಿಯಾದ ಮಾಜಿ ಪ್ರಧಾನಿ, ಪ್ರಧಾನಿ ಟೋನಿ ಅಬಾಟ್ ತಮ್ಮ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

What India Thinks Today: ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ : ಆಸ್ಟ್ರೇಲಿಯಾ ಮಾಜಿ ಪ್ರಧಾನಿ ಟೋನಿ
Follow us on

ದೇಶದ ಅತಿ ದೊಡ್ದ ಸುದ್ದಿ ಸಂಸ್ಥೆ ಟಿವಿ9 ನೆಟ್​​​ವರ್ಕ್​​ ‘ವಾಟ್ ಇಂಡಿಯಾ ಟುಡೇ ಥಿಂಕ್ಸ್’ (What India Thinks Today) ಎಂಬ ಜಾಗತಿಕ ಶೃಂಗಸಭೆ ನಡೆಸುತ್ತಿದೆ. ಫೆ.25ಕ್ಕೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಇಂದು ಎರಡನೇ ದಿನದ ಕಾರ್ಯಕ್ರಮ ನಡೆಯುತ್ತಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಟೋನಿ ಅಬಾಟ್ ‘ವಾಟ್ ಇಂಡಿಯಾ ಟುಡೇ ಥಿಂಕ್ಸ್’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಾರೆ. ಅಬಾಟ್ ಅವರು ‘ಏಷ್ಯಾ-ಪೆಸಿಫಿಕ್‌ನಿಂದ ಇಂಡೋ-ಪೆಸಿಫಿಕ್‌ಗೆ’ ವಿಷಯದ ಕುರಿತು ಮಾತನಾಡುತ್ತಿದ್ದಾರೆ. ಅಲ್ಲದೆ, ಪ್ರಾದೇಶಿಕ ಸಂಬಂಧಗಳ ಅಡಿಪಾಯ ಯಾವುದು ಮತ್ತು ಅವುಗಳನ್ನು ಹೇಗೆ ಸುಧಾರಿಸುವುದು ಎಂಬುದರ ಕುರಿತು ಟೋನಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಭಾರತವು ಅದ್ಭುತ ಸಾಮರ್ಥ್ಯವನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಟೋನಿ ಅಬಾಟ್ ಹೇಳಿದರು.

‘ಭಾರತದ ಪ್ರಜಾಪ್ರಭುತ್ವವು ಜರ್ಮನಿ ಮತ್ತು ಸ್ಪೇನ್‌ನಂತಹ ದೇಶಗಳಿಗಿಂತ ಹಳೆಯದು. ಕ್ವಾಡ್‌ಗೆ ಸಂಬಂಧಿಸಿದಂತೆ ಭಾರತ ಮತ್ತು ಜಪಾನ್‌ನ ಪ್ರಯತ್ನಗಳು ಶ್ಲಾಘನೀಯ ಎಂದರು.

ಇದನ್ನೂ ಓದಿ: ಭಾರತವು ಈಗ ಜಾಗತಿಕ ಆಸಕ್ತಿಯ ಕೇಂದ್ರವಾಗಿದೆ: ಟಿವಿ9 ನೆಟ್ವರ್ಕ್​ ಸಿಇಒ ಬರುಣ್​ ದಾಸ್

ಟೋನಿ ಅಬಾಟ್ ಅವರು ಆಸ್ಟ್ರೇಲಿಯಾದ 28 ನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು 2013 ಮತ್ತು 2015 ರ ನಡುವೆ ಎರಡು ವರ್ಷಗಳ ಕಾಲ ಆಸ್ಟ್ರೇಲಿಯಾದ ಪ್ರಧಾನಿಯಾಗಿದ್ದರು. ಪ್ರಧಾನಿಯಾಗುವ ಮೊದಲು ಟೋನಿ ಅವರು 2009 ಮತ್ತು 2013 ರ ನಡುವೆ ನಾಲ್ಕು ವರ್ಷಗಳ ಕಾಲ ವಿರೋಧ ಪಕ್ಷದ ನಾಯಕರಾಗಿದ್ದರು. ಇಂಗ್ಲೆಂಡ್‌ನ ರಾಜಧಾನಿ ಲಂಡನ್‌ನಲ್ಲಿ ಜನಿಸಿದ ಟೋನಿ 2 ವರ್ಷ ವಯಸ್ಸಿನಲ್ಲಿ ಆಸ್ಟ್ರೇಲಿಯಾದ ಸಿಡ್ನಿಗೆ ಬಂದರು. ಸಿಡ್ನಿ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ಮತ್ತು ಆಕ್ಸ್‌ಫರ್ಡ್‌ನ ಕ್ವೀನ್ಸ್ ಕಾಲೇಜಿನಲ್ಲಿ ತತ್ವಶಾಸ್ತ್ರ ಮತ್ತು ರಾಜಕೀಯ ವಿಷಯದಲ್ಲಿ ಅಧ್ಯಯನ ಮಾಡಿ. ತಮ್ಮ ವೃತ್ತಿಜೀವನವನ್ನು ಪತ್ರಕರ್ತ, ವ್ಯವಸ್ಥಾಪಕ ಮತ್ತು ರಾಜಕೀಯ ಸಲಹೆಗಾರರಾಗಿ ಪ್ರಾರಂಭಿಸಿದರು. 1994 ರಲ್ಲಿ ಮೊದಲ ಬಾರಿಗೆ ಟೋನಿ ಸಂಸದರಾಗಿ ಸದನಕ್ಕೆ ಪ್ರವೇಶಿಸಿದರು. ನಂತರ ಎರಡು ದಶಕಗಳ ನಂತರ ಅವರು ದೇಶದ ಪ್ರಧಾನಿಯಾದರು. ಇದೀಗ ನಿವೃತ್ತಿ ಹೊಂದಿದ್ದರು. ಅವರ ಮಾತುಗಳನ್ನು ಆಲಿಸಲು ಇಂದು ಒಂದಿಷ್ಟು ಜನ ಸಮೂಹವನ್ನು ಹೊಂದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:04 am, Mon, 26 February 24