AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WITT TV9 Global Summit 2024: ಭಾರತವು ಈಗ ಜಾಗತಿಕ ಆಸಕ್ತಿಯ ಕೇಂದ್ರವಾಗಿದೆ: ಟಿವಿ9 ನೆಟ್ವರ್ಕ್​ ಸಿಇಒ ಬರುಣ್​ ದಾಸ್

ಭಾರತವು ವಿಶ್ವದ ಭರವಸೆಯಾಗಿದೆ, ಭಾರತವು ಸವಾಲುಗಳನ್ನು ಮೀರಿ ಬೆಳೆಯುತ್ತಿದೆ ಎಂದು ಟಿವಿ9 ನೆಟ್​ವರ್ಕ್​ನ ಎಂಡಿ, ಹಾಗೂ ಸಿಇಒ ಬರುಣ್​ ದಾಸ್​ ಹೇಳಿದ್ದಾರೆ. ಟಿವಿ9 ನೆಟ್​ವರ್ಕ್​ ಆಯೋಜಿಸಿರುವ 3 ದಿನಗಳ ಜಾಗತಿಕ ಶೃಂಗಸಭೆ ‘ವಾಟ್​ ಇಂಡಿಯಾ ಥಿಂಕ್ಸ್​ ಟುಡೇ’ಯಲ್ಲಿ ಪಾಲ್ಗೊಂಡು ಮಾತನಾಡಿದರು. ಭಾರತವು ಹಲವು ಸವಾಲುಗಳನ್ನು ಮೆಟ್ಟಿ ನಿಂತು ಉನ್ನತ ಸ್ಥಾನಕ್ಕೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

WITT TV9 Global Summit 2024: ಭಾರತವು ಈಗ ಜಾಗತಿಕ ಆಸಕ್ತಿಯ ಕೇಂದ್ರವಾಗಿದೆ: ಟಿವಿ9 ನೆಟ್ವರ್ಕ್​ ಸಿಇಒ ಬರುಣ್​ ದಾಸ್
ಟಿವಿ9 ನೆಟ್​ವರ್ಕ್​ ಸಿಇಒ ಬರುಣ್​ ದಾಸ್​
ನಯನಾ ರಾಜೀವ್
|

Updated on:Feb 26, 2024 | 9:59 AM

Share

ಭಾರತವು ವಿಶ್ವದ ಭರವಸೆಯಾಗಿದೆ, ಭಾರತವು ಸವಾಲುಗಳನ್ನು ಮೀರಿ ಬೆಳೆಯುತ್ತಿದೆ ಎಂದು ಟಿವಿ9 ನೆಟ್​ವರ್ಕ್​ನ ಎಂಡಿ, ಹಾಗೂ ಸಿಇಒ ಬರುಣ್​ ದಾಸ್​ ಹೇಳಿದ್ದಾರೆ. ಟಿವಿ9 ನೆಟ್​ವರ್ಕ್​ ಆಯೋಜಿಸಿರುವ 3 ದಿನಗಳ ಜಾಗತಿಕ ಶೃಂಗಸಭೆ ‘ವಾಟ್​ ಇಂಡಿಯಾ ಥಿಂಕ್ಸ್​ ಟುಡೇ’ಯಲ್ಲಿ ಪಾಲ್ಗೊಂಡು ಮಾತನಾಡಿದರು. ಭಾರತವು ಹಲವು ಸವಾಲುಗಳನ್ನು ಮೆಟ್ಟಿ ನಿಂತು ಉನ್ನತ ಸ್ಥಾನಕ್ಕೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘‘ದಶಕದ ಬದಲಾವಣೆಗಳನ್ನು ಗಮನಿಸುವಾಗ ಮತ್ತು ಭೌಗೋಳಿಕ ರಾಜಕೀಯ ಬೆಳವಣಿಗೆಗಳನ್ನು ಪರಿಗಣಿಸುವಾಗ ಎಲ್ಲಾ ಘಟನೆಗಳು ಭಾರತದ ಪರವಾಗಿ ನಡೆಯುತ್ತಿವೆ ಎಂದು ವಿಶ್ವಾಸದಿಂದ ಹೇಳಬೇಕು’’ ಎಂದು ಬರುಣ್​ ದಾಸ್ ಹೇಳಿದ್ದಾರೆ. ಭಾರತವು ಈಗ ಜಾಗತಿಕ ಆಸಕ್ತಿಯ ಕೇಂದ್ರವಾಗಿದೆ. ನಮ್ಮ ದೇಶವನ್ನು ಜಾಗತಿಕ ದಕ್ಷಿಣದ ಹೊಸ ನಾಯಕ ಎಂದು ಗುರುತಿಸಲಾಗುತ್ತಿದೆ.

ನಾವು ಜಾಗತಿಕ ಶಾಂತಿಯ ಚಾಂಪಿಯನ್ ಮಾತ್ರವಲ್ಲ, ಜಾಗತಿಕ ಆರ್ಥಿಕತೆಯಲ್ಲಿ ಕೂಡ ಉತ್ತಮ ಸ್ಥಾನದಲ್ಲಿದ್ದೇವೆ ಎಂದು ಐಎಂಎಫ್​ ಹೇಳಿದೆ. ಸುಮಾರು ಮೂರು ದಶಕಗಳವರೆಗೆ, ಚೀನಾ ತನ್ನ ಆರ್ಥಿಕತೆಯನ್ನು ಹೆಚ್ಚಾಗಿ ಮುಚ್ಚಿದ್ದರೂ ಪಾಶ್ಚಿಮಾತ್ಯ ಮಾರುಕಟ್ಟೆಗಳಲ್ಲಿ ವೇಗವಾಗಿ ಬೆಳೆಯಿತು. ಇದರ ಹೊರತಾಗಿಯೂ, ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯತ್ತ ಸಾಗುತ್ತಿದೆ. ಅಭಿವೃದ್ಧಿ ಹೊಂದಲು ನಾವು ಇತರರನ್ನು ನಮ್ಮೊಂದಿಗೆ ಕರೆದೊಯ್ಯಬೇಕು ಎಂಬುದು ನಮ್ಮ ಆಶಯ.

ಮತ್ತಷ್ಟು ಓದಿ: What India Thinks Today: ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಎರಡನೇ ದಿನ, ಪ್ರಧಾನಿ ಮೋದಿ ವಿಶೇಷ ಅತಿಥಿ

ಒಂದು ಕುಟುಂಬ, ಒಂದು ಭೂಮಿ, ಒಂದು ಭವಿಷ್ಯದತ್ತ ಗಮನಹರಿಸುವುದು ಜಗತ್ತಿಗೆ ಅಗತ್ಯವಿರುವ ಆದರ್ಶವಾಗಿದೆ. ಯುರೋಪ್ ಮತ್ತು ಪಶ್ಚಿಮ ಏಷ್ಯಾದಲ್ಲಿ ಇನ್ನೂ ಪ್ರಮುಖ ಸಂಘರ್ಷಗಳು ನಡೆಯುತ್ತಿವೆ, ಇದು ಯಾವುದೇ ಸಮಯದಲ್ಲಿ ಜಾಗತಿಕ ಬಿಕ್ಕಟ್ಟಾಗಿ ಬದಲಾಗಬಹುದು. ಇದಲ್ಲದೆ, ಡಿಗ್ಲೋಬಲೈಸೇಶನ್ ಪ್ರಕ್ರಿಯೆಯೂ ನಡೆಯುತ್ತಿದೆ. ಅಗತ್ಯ ಕ್ಷೇತ್ರಗಳಲ್ಲಿ ಹೆಚ್ಚು ಹೆಚ್ಚು ದೇಶಗಳು ಸ್ವಾವಲಂಬಿಯಾಗಲು ಬಯಸುವುದಕ್ಕೆ ಇದು ಕಾರಣವಾಗಿದೆ ಎಂದರು.

ಪೂರೈಕೆ ಸರಪಳಿಯಲ್ಲಿನ ಅನಿಶ್ಚಿತತೆಯು ಹಣದುಬ್ಬರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಮತ್ತು ಲಕ್ಷಾಂತರ ಜನರನ್ನು ಬಡತನಕ್ಕೆ ತಳ್ಳಬಹುದು, ಭಾರತ ಮತ್ತು ಪ್ರಪಂಚದ ಇತರ ಭಾಗಗಳು ವ್ಯವಹರಿಸಬೇಕಾದ ಅನೇಕ ಸಮಸ್ಯೆಗಳಿವೆ ಎಂದರು.

ಶೃಂಗಸಭೆಯಲ್ಲಿ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಟೋನಿ ಅಬಾಟ್, ಮಾಲ್ಡೀವ್ಸ್‌ನ ಮಾಜಿ ರಕ್ಷಣಾ ಸಚಿವೆ ಮೇಡಮ್ ಮರಿಯಾ ಅಹ್ಮದ್ ದೀದಿ, ಇಸ್ರೇಲ್ ರಾಯಭಾರಿ ನಾರ್ ಗಿಲ್ಲನ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಮೂವರು ದಿಗ್ಗಜರು ಇಂದು ವಿವಿಧ ಅಧಿವೇಶನಗಳಲ್ಲಿ ಉಪಸ್ಥಿತರಿರಲಿದ್ದಾರೆ. ಅದೇ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಇಂದು ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:49 am, Mon, 26 February 24