ಅರುಣಾಚಲ ಪ್ರದೇಶದ ಚೀನಾ ಗಡಿಯಲ್ಲಿ ಅಮೆರಿಕ ನಿರ್ಮಿತ ಫಿರಂಗಿಗಳನ್ನು ನಿಯೋಜಿಸಿದ ಭಾರತ

ಅರುಣಾಚಲ ಪ್ರದೇಶದ ಚೀನಾ ಗಡಿಯಲ್ಲಿ ಅಮೆರಿಕ ನಿರ್ಮಿತ ಫಿರಂಗಿಗಳನ್ನು ನಿಯೋಜಿಸಿದ ಭಾರತ
ಚೀನಾ ಗಡಿಯಲ್ಲಿ ಭಾರತೀಯ ಸೇನೆ ನಿಯೋಜಿಸಿರುವ ಅಮೆರಿಕ ನಿರ್ಮಿತ ಹಗುರ ಫಿರಂಗಿ (ಸಂಗ್ರಹ ಚಿತ್ರ)

ಅಮೆರಿಕದಿಂದ ಖರೀದಿಸಲಾದ ಶಸ್ತ್ರಾಸ್ತ್ರಗಳನ್ನು ಅರುಣಾಚಲ ಪ್ರದೇಶದ ತವಾಂಗ್​ ಸೆಕ್ಟರ್​ನ ವಾಸ್ತವ ಗಡಿ ನಿಯಂತ್ರಣ ರೇಖೆಗೆ ಭಾರತೀಯ ಸೇನೆ ರವಾನಿಸಿದೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Oct 29, 2021 | 6:17 PM

ದೆಹಲಿ: ಚೀನಾ ಗಡಿಯಲ್ಲಿ ಭಾರತದ ಸೇನಾ ನಿಯೋಜನೆ ಮತ್ತು ವ್ಯೂಹ ರಚನೆಯನ್ನು ಚುರುಕುಗೊಳಿಸಿದೆ. ಅಗತ್ಯ ಯುದ್ಧೋಪಕರಣಗಳೊಂದಿಗೆ ಸಾಕಷ್ಟು ಸಂಖ್ಯೆಯಲ್ಲಿ ಸೇನಾ ಸಿಬ್ಬಂದಿಯನ್ನು ಸಹ ನಿಯೋಜಿಸಿದೆ. ಅಮೆರಿಕದಿಂದ ಖರೀದಿಸಲಾದ ಶಸ್ತ್ರಾಸ್ತ್ರಗಳನ್ನು ಅರುಣಾಚಲ ಪ್ರದೇಶದ ತವಾಂಗ್​ ಸೆಕ್ಟರ್​ನ ವಾಸ್ತವ ಗಡಿ ನಿಯಂತ್ರಣ ರೇಖೆಗೆ ಭಾರತೀಯ ಸೇನೆ ರವಾನಿಸಿದೆ.

ಅಮೆರಿಕದಿಂದ ಖರೀದಿಸಿರುವ ಚಿನೂಕ್​ ಹೆಲಿಕಾಪ್ಟರ್​, ಹಗುರ ತೂಕದ ಫಿರಂಗಿ ಹೌವಿಟ್ಜರ್​ ಎಂ 777 ಗನ್​, ರೈಲ್ಸ್​, ಹೊಸ ತಲೆಮಾರಿನ ಸರ್ವೇಕ್ಷಣಾ ಸಾಧನಗಳನ್ನು ಸೇನೆ ಗಡಿಗೆ ರವಾನಿಸಿದೆ. ಇದರ ಜೊತೆಗೆ ದೇಶೀಯವಾಗಿ ನಿರ್ಮಿಸಲಾಗಿರುವ ಸಾಕಷ್ಟು ಶಸ್ತ್ರಾಸ್ತ್ರಗಳನ್ನು ರವಾನಿಸಲಾಗಿದೆ.

ಕಳೆದ ತಿಂಗಳು ಚೀನಾ ಸೇನೆಯ 100 ಯೋಧರಿದ್ದ ತಂಡ ತವಾಂಗ್​ನಲ್ಲಿ ಭಾರತದ ಗಡಿ ಪ್ರವೇಶಿಸಿ ಕೆಲವು ಗಂಟೆ ಇದ್ದು ಹಿಂದಿರುಗಿತ್ತು. ಆಗಸ್ಟ್​ ಕಡೆಯಲ್ಲಿ ಉತ್ತರಾಖಂಡದ ಗಡಿಯಲ್ಲೂ ಚೀನಾ ಯೋಧರು ಕುದುರೆ ಮೇಲೆ ಬಂದು ಹೋಗಿದ್ದರು. ಈ ಘಟನೆಗಳ ನಂತರ ಗಡಿಯಲ್ಲಿ ನಿಗಾ ಹೆಚ್ಚಿಸಲಾಗಿದೆ. ಇದರ ಭಾಗವಾಗಿಯೇ ಅಮೆರಿಕದ ಶಸ್ತ್ರಾಸ್ತ್ರಗಳನ್ನು ರವಾನಿಸಲಾಗಿದೆ ಎಂದು ಸೇನೆಯ ಮೂಲಗಳು ಹೇಳಿವೆ.

ತವಾಂಗ್​ ಸೆಕ್ಟರ್​ ಭಾರತ, ಭೂತನ್​ ಮತ್ತು ಟಿಬೆಟ್​ನ ಗಡಿಯನ್ನು ಒಳಗೊಂಡಿರುವ ಅತ್ಯಂತ ಸೂಕ್ಷ ಸ್ಥಳ. ಇದು ಮೊದಲಿನಿಂದಲೂ ಭಾರತದ ಹಿಡಿತದಲ್ಲೇ ಇದೆ. ಆದರೆ, ಇದನ್ನು ಚೀನಾ ತನ್ನದೆಂದು ಹೇಳುಕೊಳ್ಳುತ್ತದೆ. ಚೀನಾದಿಂದ ಪ್ರಾಣಭಯ ಉಂಟಾದ ಕಾರಣ ಬೌದ್ಧ ಧರ್ಮ ಗುರು ದಲೈ ಲಾಮಾ ಟಿಬೆಟ್​ ತೊರೆದು 1959ರಲ್ಲಿ ಭಾರತ ಪ್ರವೇಶಿಸಿದ ಸ್ಥಳ ಇದಾಗಿದೆ. 1962ರ ಯುದ್ಧದಲ್ಲಿಯೂ ತವಾಂಗ್​ನಲ್ಲಿ ತೀವ್ರ ಹೋರಾಟ ನಡೆದಿತ್ತು.

ಗಡಿಗೆ ಸೋಲಾರ್​ ಟೆಂಟ್​ ಸಮುದ್ರ ಮಟ್ಟದಿಂದ 17 ಸಾವಿರ ಅಡಿ ಎತ್ತರವಿರುವ ಗಡಿಯಲ್ಲಿ ಮುಂಚೂಣಿ ಸೇನಾ ಠಾಣೆಗಳಿಗೆ ಸೌರ ವಿದ್ಯುತ್​ ಶಾಖದಿಂದ ರಕ್ಷಣೆ ನೀಡುವ ಟೆಂಟ್​ಗಳನ್ನು ಕಳುಹಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಮೂಲಗಳು ಹೇಳಿವೆ. ತೀವ್ರ ಚಳಿಗಾಲದ ಸಂದರ್ಭದಲ್ಲಿ ಇದರಿಂದ ಯೋಧರನ್ನು ಬೆಚ್ಚಗೆ ಇರಿಸಲು ಸಾಧ್ಯವಾಗುತ್ತದೆ. ಮೈಸನ್​ 35ರಿಂದ 40 ಡಿಗ್ರಿ ಸೆಲ್ಶಿಯಸ್​ನಷ್ಟು ಪ್ರಮಾಣಕ್ಕೆ ತಾಪಮಾನ ಕುಸಿದರೂ ಈ ಟೆಂಟ್​ಗಳ ಒಳಗೆ ಬೆಚ್ಚಗಿನ ಶಾಖ ಇರುತ್ತದೆ.

ಮೊದಲ ಹಂತದಲ್ಲಿ 50 ಟೆಂಟ್​ಗಳನ್ನು ಪೂರೈಕೆ ಮಾಡಲಾಗುವುದು. ಇದು 21 ಡಿಗ್ರಿ ಸೆಲ್ಶಿಯಸ್​ ಉಷ್ಣತೆಯನ್ನು ಕಾಪಾಡುತ್ತದೆ. ತಾಸಿಗೆ 150 ಕಿಮೀ ವೇಗದಲ್ಲಿ ಗಾಳಿ ಬೀಸಿದರೂ ಟೆಂಟ್​ ಕಿತ್ತುಹೋಗುವುದಿಲ್ಲ. ಅತ್ಯಾಧುನಿಕ ಟೆಂಟ್​ಗಳಿಗಾಗಿ ಭಾರತ ಟಿಬೆಟ್​ ಗಡಿ ಪೊಲೀಸ್​ (ಐಟಿಬಿಪಿ) ನಾಲ್ಕು ವರ್ಷದಿಂದ ಕೋರುತ್ತಿತ್ತು.

ಇದನ್ನೂ ಓದಿ: ಚೀನಾ ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಪೂರಕ ಕ್ರಮ: ಗೊಗ್ರಾದಿಂದ ಸೇನೆ ಹಿಂದೆ ಕರೆಸಿಕೊಳ್ಳಲು ಭಾರತ-ಚೀನಾ ನಿರ್ಧಾರ ಇದನ್ನೂ ಓದಿ: ಮಾನ್ಸೂನ್ ಅಧಿವೇಶನಕ್ಕೆ ಮೊದಲು ಆಂಟನಿ ಮತ್ತು ಶರದ್ ಪವಾರ್​ರನ್ನು ಭೇಟಿಯಾಗಿ ಭಾರತ-ಚೀನಾ ಗಡಿ ಪರಿಸ್ಥಿತಿಯನ್ನು ವಿವರಿಸಿದ ರಾಜನಾಥ ಸಿಂಗ್

Follow us on

Related Stories

Most Read Stories

Click on your DTH Provider to Add TV9 Kannada