ವಿಧಿಯ ಕ್ರೂರ ತಿರುವು ಇದು: ಪುನೀತ್ ರಾಜ್ಕುಮಾರ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ, ಹಳೇ ಫೋಟೋ ಟ್ವೀಟ್
Puneeth Rajkumar Death: 2019ರ ಲೋಕಸಭೆ ಚುನಾವಣೆ ಪೂರ್ವ 2018ರ ಮೇ ತಿಂಗಳಲ್ಲಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಆಗಮಿಸಿ, ಮೂರು ರ್ಯಾಲಿಗಳಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಪ್ರಧಾನಿ ಮೋದಿಯವರನ್ನು ಪುನೀತ್ ರಾಜ್ಕುಮಾರ್ ಭೇಟಿಯಾಗಿದ್ದರು.
ಸ್ಯಾಂಡಲ್ವುಡ್ ಖ್ಯಾತ ನಟ ಪುನೀತ್ ರಾಜ್ಕುಮಾರ್ (Puneeth Rajkumar) ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಸಂತಾಪ ಸೂಚಿಸಿದ್ದಾರೆ. ಏರ್ಪೋರ್ಟ್ವೊಂದರಲ್ಲಿ ಪುನೀತ್ ರಾಜಕುಮಾರ್ ದಂಪತಿಯೊಟ್ಟಿಗೆ ನಿಂತುಕೊಂಡಿರುವ ಫೋಟೋ ಶೇರ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ವಿಧಿಯ ಕ್ರೂರ ತಿರುವೊಂದು ಪ್ರತಿಭಾವಂತ ನಟ ಪುನೀತ್ ರಾಜ್ಕುಮಾರ್ ಅವರನ್ನು ನಮ್ಮಿಂದ ಕಿತ್ತುಕೊಂಡಿದೆ. ಅವರದ್ದು ಸಾಯುವ ವಯಸ್ಸಲ್ಲ. ಪುನೀತ್ ಅವರನ್ನು ಮುಂಬರುವ ಪೀಳಿಗೆ ಸದಾ ನೆನಪಲ್ಲಿಟ್ಟುಕೊಳ್ಳುತ್ತದೆ. ಅಂಥ ಅದ್ಭುತ ಕೆಲಸಗಳನ್ನು ಅವರು ಮಾಡಿದ್ದಾರೆ. ನಿಜಕ್ಕೂ ಅವರದ್ದು ಅದ್ಭುತ ವ್ಯಕ್ತಿತ್ವ. ಪುನೀತ್ ಸಾವಿನ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ. ಓಂ ಶಾಂತಿ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
A cruel twist of fate has snatched away from us a prolific and talented actor, Puneeth Rajkumar. This was no age to go. The coming generations will remember him fondly for his works and wonderful personality. Condolences to his family and admirers. Om Shanti. pic.twitter.com/ofcNpnMmW3
— Narendra Modi (@narendramodi) October 29, 2021
ನಟ ಪುನೀತ್ ರಾಜ್ಕುಮಾರ್ 2018ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು. 2019ರ ಲೋಕಸಭೆ ಚುನಾವಣೆ ಪೂರ್ವ 2018ರ ಮೇ ತಿಂಗಳಲ್ಲಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಆಗಮಿಸಿ, ಮೂರು ರ್ಯಾಲಿಗಳಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಪ್ರಧಾನಿ ಮೋದಿಯವರನ್ನು ಪುನೀತ್ ರಾಜ್ಕುಮಾರ್ ಭೇಟಿಯಾಗಿದ್ದರು. ತಂದೆ ನಟ ರಾಜ್ಕುಮಾರ್ ಅವರ ಬಗ್ಗೆ ತಾವು ಬರೆದ ಪುಸ್ತಕವನ್ನು ಪ್ರಧಾನಿಯವರಿಗೆ ನೀಡಿದ್ದರು. ಈ ವೇಳೆ ಪತ್ನಿ ಅಶ್ವಿನಿ ಕೂಡ ಜತೆಗಿದ್ದರು. ನಂತರ ಫೋಟೋ ಟ್ವೀಟ್ ಮಾಡಿದ್ದ ಪುನೀತ್ ರಾಜ್ಕುಮಾರ್, ನಮ್ಮ ಕ್ರಿಯಾಶೀಲ ಪ್ರಧಾನಮಂತ್ರಿಯವರನ್ನು ಭೇಟಿಯಾಗುವ ಅದ್ಭುತ ಅವಕಾಶ ನನಗೆ ಸಿಕ್ಕಿತ್ತು. ನಾನು ನನ್ನ ಅಪ್ಪಾಜಿಯವರ ಬಗ್ಗೆ ಬರೆದ ವ್ಯಕ್ತಿತ್ವದ ಹಿಂದಿರುವ ವ್ಯಕ್ತಿ ಎಂಬ ಪುಸ್ತಕವನ್ನು ಅವರಿಗೆ ನೀಡಿದೆ. ಅವರದನ್ನು ತುಂಬ ಪ್ರೀತಿಯಿಂದ ಸ್ವೀಕರಿಸಿದರು. ನಮ್ಮ ಇಡೀ ಕುಟುಂಬಕ್ಕೆ ಶುಭ ಹಾರೈಸಿದರು ಎಂದು ಹೇಳಿಕೊಂಡಿದ್ದರು. ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಅದೇ ಫೋಟೋವನ್ನು ಶೇರ್ ಮಾಡಿಕೊಂಡು ಪುನೀತ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: Puneeth Rajkumar Songs: ಕಾಣದಂತೆ ಮಾಯವಾದನು!; ಪುನೀತ್ ರಾಜ್ಕುಮಾರ್ ಹಾಡಿದ ಟಾಪ್ 20 ಹಾಡುಗಳಿವು
Published On - 4:51 pm, Fri, 29 October 21