AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Puneeth Rajkumar Songs: ಕಾಣದಂತೆ ಮಾಯವಾದನು!; ಪುನೀತ್ ರಾಜ್​ಕುಮಾರ್ ಹಾಡಿದ ಟಾಪ್ 20 ಹಾಡುಗಳಿವು

Puneeth Rajkumar Death: ಪುನೀತ್ ಕೇವಲ ನಟ, ನಿರ್ಮಾಪಕ ಮಾತ್ರವಲ್ಲದೆ ಉತ್ತಮ ಗಾಯಕ ಕೂಡ ಹೌದು. ಕನ್ನಡದ ಸಿನಿಮಾಗಳಲ್ಲಿ ಪುನೀತ್ ರಾಜ್​ಕುಮಾರ್ 95ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರು ಹಾಡಿರುವ ಟಾಪ್ 20 ಹಾಡುಗಳ ಪಟ್ಟಿ ಇಲ್ಲಿದೆ.

Puneeth Rajkumar Songs: ಕಾಣದಂತೆ ಮಾಯವಾದನು!; ಪುನೀತ್ ರಾಜ್​ಕುಮಾರ್ ಹಾಡಿದ ಟಾಪ್ 20 ಹಾಡುಗಳಿವು
ಪುನೀತ್​ ರಾಜ್​ ಕುಮಾರ್
TV9 Web
| Updated By: Digi Tech Desk|

Updated on:Oct 29, 2021 | 5:25 PM

Share

ಹೃದಯಾಘಾತದಿಂದ ಸಾವನ್ನಪ್ಪಿರುವ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ (Puneeth Rajkumar) 6 ತಿಂಗಳಿದ್ದಾಗಲೇ ರಾಜ್​ಕುಮಾರ್ (Dr. Rajkumar) ಅವರ ಸಿನಿಮಾದಲ್ಲಿ ಕಾಣಿಸಿಕೊಂಡವರು. ಬಾಲನಟನಾಗಿ ಗುರುತಿಸಿಕೊಂಡಿದ್ದ ಪುನೀತ್ ರಾಜ್​ಕುಮಾರ್ ಬಳಿಕ ಕನ್ನಡ ಚಿತ್ರರಂಗದ ಖ್ಯಾತ ನಟರಾಗಿ ಬೆಳೆದು ನಿಂತವರು. ಇಡೀ ಕುಟುಂಬವೇ ಒಟ್ಟಾಗಿ ಕುಳಿತು ನೋಡುವಂತಹ ಸಿನಿಮಾಗಳಲ್ಲಿ ನಟಿಸಿರುವ ಪುನೀತ್ ರಾಜ್​ಕುಮಾರ್ ಅವರ ಸರಳ ವ್ಯಕ್ತಿತ್ವ ಮತ್ತು ಎಲ್ಲರೊಂದಿಗೆ ಸ್ನೇಹದಿಂದ ಬೆರೆಯುತ್ತಿದ್ದ ಗುಣದಿಂದ ಎಲ್ಲ ಚಿತ್ರರಂಗದಲ್ಲೂ ಸ್ನೇಹಿತರನ್ನು ಸಂಪಾದಿಸಿದ್ದರು. ಇತ್ತೀಚೆಗೆ ಪಿಆರ್​ಕೆ ಪ್ರೊಡಕ್ಷನ್ ಮೂಲಕ ಸಿನಿಮಾಗಳ ನಿರ್ಮಾಣಕ್ಕೂ ಇಳಿದಿದ್ದ ಪುನೀತ್ ರಾಜ್​ಕುಮಾರ್ ಟಿವಿಯಲ್ಲಿ ಕನ್ನಡದ ಕೋಟ್ಯಧಿಪತಿ, ಫ್ಯಾಮಿಲಿ ಪವರ್ ಮುಂತಾದ ಶೋಗಳನ್ನು ಕೂಡ ನಡೆಸಿಕೊಟ್ಟಿದ್ದರು. ಪುನೀತ್ ಕೇವಲ ನಟ, ನಿರ್ಮಾಪಕ ಮಾತ್ರವಲ್ಲದೆ ಉತ್ತಮ ಗಾಯಕ ಕೂಡ ಹೌದು. ಕನ್ನಡದ ಸಿನಿಮಾಗಳಲ್ಲಿ ಪುನೀತ್ ರಾಜ್​ಕುಮಾರ್ 95ಕ್ಕೂ ಹೆಚ್ಚು ಹಾಡುಗಳನ್ನು (Puneeth Rajkumar songs) ಹಾಡಿದ್ದಾರೆ. ಅವರು ಹಾಡಿರುವ ಟಾಪ್ 20 ಹಾಡುಗಳ ಪಟ್ಟಿ ಇಲ್ಲಿದೆ.

1. ಅಭಿಮಾನಿಗಳೇ ನಮ್ಮನೆ ದೇವ್ರು (ದೊಡ್ಮನೆ ಹುಡುಗ) 2. ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು (ಚಲಿಸುವ ಮೋಡಗಳು/ ಅಣ್ಣಾ ಬಾಂಡ್) 3. ಎಲ್ಲಿ ಕಾಣ್ ಎಲ್ಲಿ ಕಾಣೆನೋ (ರ್ಯಾಂಬೋ 2) 4. ಬಿಸಿಲೆ ಇರಲಿ ಮಳೆಯೆ ಬರಲಿ (ಬೆಟ್ಟದ ಹೂವು) 5. ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ (ಭಾಗ್ಯವಂತ) 6. ಸಿಂಪಲ್​ ಆಗ್ ಹೇಳ್ತೀನ್ ಕೇಳೆ ನಮ್ಮೂರ ಭಾಷೆ (ಮೌರ್ಯ) 7. ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ (ವಂಶಿ) 8. ಹೊಸ ಗಾನ ಬಜಾನ (ರಾಮ್) 9. ಮೈಲಾಪುರ ಮೈಲಾರಿ (ಮೈಲಾರಿ) 10. ಅಧ್ಯಕ್ಷ ಅಧ್ಯಕ್ಷ (ಅಧ್ಯಕ್ಷ) 11. ಗುರುವಾರ ಸಂಜೆ ನಾ ಹೊರಟಿದ್ದೆ (ಪವರ್) 12. ನೀನೆ ನೀನೆ (ರಣವಿಕ್ರಮ) 13. ಉಪ್ಪಿಟ್ಟು ಉಪ್ಪಿಟ್ಟು (ಉಪ್ಪಿ 2) 14. ಏನಾಯ್ತು ಇದೇನಾಯ್ತು (ಚಕ್ರವ್ಯೂಹ) 15. ಝನಕ್ ಝನಕ್ ಮನ್ ಡೋಲೆ (ರನ್ ಆ್ಯಂಟನಿ) 16. ತಾಲಿಬಾನ್ ಅಲ್ಲ ಅಲ್ಲ (ಅಪ್ಪು) 17. ಯಾಕಿಂಗಾಗಿದೆ (ರಾಜಕುಮಾರ) 18. ರಂಗೇರಿದೆ (ವಾಸು ನಾನ್ ಪಕ್ಕಾ ಕಮರ್ಷಿಯಲ್) 19. ಯೇನ್ ಮಾಡೋದು ಸ್ವಾಮಿ (ಫ್ರೆಂಚ್ ಬಿರಿಯಾನಿ ) 20 . ಊರಿಗೊಬ್ಬ ರಾಜ ಆ ರಾಜಂಗೊಬ್ಳು ರಾಣಿ (ಯುವರತ್ನ)

ಉತ್ತಮ ನಟನೆ, ಒಳ್ಳೆಯ ಫಿಟ್ನೆಸ್​, ಅದ್ಭುತವಾದ ಡ್ಯಾನ್ಸ್, ಚೆಂದದ ಕಂಠ, ಒಳ್ಳೆ ಸಿನಿಮಾಗಳ ನಿರ್ಮಾಪಕ, ಒಳ್ಳೊಳ್ಳೆ ಶೋಗಳ ನಿರೂಪಕ ಹೀಗೆ ಎಲ್ಲ ರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದ ಪುನೀತ್ ರಾಜ್​ಕುಮಾರ್ ನಟಿಸುತ್ತಿದ್ದ ಜೇಮ್ಸ್, ದ್ವಿತ್ವ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿತ್ತು. ತಮ್ಮ ಪಿಆರ್​ಕೆ ಬ್ಯಾನರ್​ನಡಿ ಫ್ರೆಂಚ್ ಬಿರಿಯಾನಿ, ಕವಲುದಾರಿ, ಮಾಯಾ ಬಜಾರ್, ಲಾ ಸಿನಿಮಾಗಳನ್ನು ನಿರ್ಮಿಸಿದ್ದ ಪುನೀತ್ ರಾಜ್​ಕುಮಾರ್ ತಮ್ಮ ನಿರ್ಮಾಣ ಸಂಸ್ಥೆಯ ಸಿನಿಮಾದಲ್ಲಿ ನಟಿಸಬೇಕೆಂಬ ಕನಸು ಕಂಡಿದ್ದರು. ಆದರೆ, ಆ ಕನಸು ಈಡೇರುವ ಮೊದಲೇ ಅವರು ನಮ್ಮನ್ನೆಲ್ಲ ಅಗಲಿದ್ದಾರೆ.

ಪುನೀತ್​ ರಾಜ್​ಕುಮಾರ್​ ನಿಧನ; ಕ್ಷಣಕ್ಷಣದ ಮಾಹಿತಿಗೆ ಇಲ್ಲಿ ಕ್ಲಿಕ್​ ಮಾಡಿ

ಇದನ್ನೂ ಓದಿ: Puneeth Rajkumar: ವಯಸ್ಸಿನಲ್ಲೂ..ಸಿನಿಮಾದಲ್ಲೂ 50 ದಾಟದ ನೋವು; ಪ್ರತಿಭಾವಂತ ನಟ ಪುನೀತ್​​ ಅಕಾಲಿಕ ಮರಣ

Puneeth Rajkumar: ಶಿವಣ್ಣನ ಎದುರು ಪುನೀತ್​ ಹೇಳಿಕೊಂಡಿದ್ದ ಆಸೆ ಈಡೇರಲೇ ಇಲ್ಲ; ಅಭಿಮಾನಿಗಳ ಹೃದಯ ನುಚ್ಚುನೂರು

Published On - 4:34 pm, Fri, 29 October 21