Puneeth Rajkumar: ವಯಸ್ಸಿನಲ್ಲೂ..ಸಿನಿಮಾದಲ್ಲೂ 50 ದಾಟದ ನೋವು; ಪ್ರತಿಭಾವಂತ ನಟ ಪುನೀತ್​​ ಅಕಾಲಿಕ ಮರಣ

ನಟಸಾರ್ವಭೌಮ ರಾಜ್​​ಕುಮಾರ್​-ಪಾರ್ವತಮ್ಮ ದಂಪತಿಯ ಕಿರಿಯ ಪುತ್ರ ಪುನೀತ್​ ರಾಜಕುಮಾರ್​ ಬಾಲನಟನಾಗಿಯೇ ಪರಿಚಿತರು. ಪ್ರೇಮದ ಕಾಣಿಕೆ, ಬೆಟ್ಟದ ಹೂವು, ಚಲಿಸುವ ಮೋಡಗಳು, ಭಕ್ತಪ್ರಲ್ಹಾದ ಸೇರಿ ಸುಮಾರು 10 ಸಿನಿಮಾಗಳಲ್ಲಿ ಬಾಲನಟನಾಗಿ ನಟಿಸಿದ್ದಾರೆ.

Puneeth Rajkumar: ವಯಸ್ಸಿನಲ್ಲೂ..ಸಿನಿಮಾದಲ್ಲೂ 50 ದಾಟದ ನೋವು; ಪ್ರತಿಭಾವಂತ ನಟ ಪುನೀತ್​​ ಅಕಾಲಿಕ ಮರಣ
ಪುನೀತ್​ ರಾಜ್​ಕುಮಾರ್​
Follow us
TV9 Web
| Updated By: Lakshmi Hegde

Updated on:Oct 29, 2021 | 3:53 PM

ಸ್ಯಾಂಡಲ್​​ವುಡ್​​​ನ ಖ್ಯಾತ ನಟ ಪುನೀತ್​ ರಾಜ್​ಕುಮಾರ್ ಇಂದು ನಿಧನರಾದರು. ತೀರ ಮೊನ್ನೆಯವರೆಗೂ ಸಮಾರಂಭದಲ್ಲಿ ಭಾಗವಹಿಸಿ, ಆರೋಗ್ಯವಾಗಿಯೇ ಇದ್ದ ಪುನೀತ್​ ಈಗಿಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಕೇವಲ ಅವರ ಕುಟುಂಬ, ಚಿತ್ರರಂಗ ಅಷ್ಟೇ ಅಲ್ಲ, ಇಡೀ ಕರ್ನಾಟಕದ ಜನತೆಗೆ ಕಷ್ಟವಾಗುತ್ತಿದೆ. ದೊಡ್ಮನೆಯ ಕಿರಿಯ ಕುಡಿ ಪುನೀತ್​ ರಾಜ್​ಕುಮಾರ್​ ತಮ್ಮ ಚಿಕ್ಕವಯಸ್ಸಿನಲ್ಲಿಯೇ ಮೃತಪಟ್ಟಿದ್ದಾರೆ. ಕೇವಲ 46ವರ್ಷಕ್ಕೆ ಅವರ ಜೀವನ ಅಂತ್ಯಗೊಂಡಿದ್ದು ದುರಂತ. 46ವರ್ಷಕ್ಕೆ 49 ಸಿನಿಮಾಗಳಲ್ಲಿ ನಟಿಸಿರುವ ಪುನೀತ್​ ರಾಜ್​ಕುಮಾರ್​ ಅಕಾಲಿಕರ ಮರಣ ಇದೀಗ ದೊಡ್ಡ ಶಾಕ್​ ತಂದಿದೆ. ವಯಸ್ಸಿನಲ್ಲೂ..ಸಿನಿಮಾದಲ್ಲೂ ಅವರು 50ರ ಸಂಖ್ಯೆಯನ್ನು ಮುಟ್ಟಲಿಲ್ಲ ಎಂಬ ಕೊರಗೂ ಕಾಡುತ್ತಿದೆ. 

ನಟಸಾರ್ವಭೌಮ ರಾಜ್​​ಕುಮಾರ್​-ಪಾರ್ವತಮ್ಮ ದಂಪತಿಯ ಕಿರಿಯ ಪುತ್ರ ಪುನೀತ್​ ರಾಜಕುಮಾರ್​ ಬಾಲನಟನಾಗಿಯೇ ಪರಿಚಿತರು. ಪ್ರೇಮದ ಕಾಣಿಕೆ, ಬೆಟ್ಟದ ಹೂವು, ಚಲಿಸುವ ಮೋಡಗಳು, ಭಕ್ತಪ್ರಲ್ಹಾದ ಸೇರಿ ಸುಮಾರು 10 ಸಿನಿಮಾಗಳಲ್ಲಿ ಬಾಲನಟನಾಗಿ ನಟಿಸಿದ್ದಾರೆ. ಅದರಲ್ಲೂ ಪ್ರೇಮದ ಕಾಣಿಕೆ ಸಿನಿಮಾದಲ್ಲಿ ಅವರಿನ್ನೂ ಆರು ತಿಂಗಳ ಮಗು.  ಅದರಲ್ಲಿ ಚಲಿಸುವ ಮೋಡಗಳು ಸಿನಿಮಾದ ಅತ್ಯುತ್ತಮ ಅಭಿನಯಕ್ಕಾಗಿ ಅವರು ರಾಷ್ಟ್ರಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಇದೇ ಸಿನಿಮಾಕ್ಕಾಗಿ ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯೂ ಲಭಿಸಿದೆ. ಎರಡು ಬಾರಿ ಫಿಲ್ಮ್​ಫೇರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆ ಬಾಲ ನಟನಾಗಿ ತೆರೆಯ ಮೇಲೆ ಅವರು ಗಟ್ಟಿಯಾಗಿ ಮಾತನಾಡುತ್ತಿದ್ದ ರೀತಿ, ನಿರ್ಭಿಡೆ ಅಭಿನಯ, ಹಾಡುಗಳನ್ನು ಅಪಾರ ಜನರು ಮೆಚ್ಚಿಕೊಂಡಿದ್ದರು.

ಮೊದಲು ನಾಯಕನಾಗಿದ್ದು ಅಪ್ಪು ಸಿನಿಮಾದಲ್ಲಿ ಬಾಲನಟನಾಗಿ ಅಭಿನಯಿಸಿ ಅದಾಗಲೇ ಸೈ ಎನ್ನಿಸಿಕೊಂಡಿದ್ದ ಪುನೀತ್​ ರಾಜ್​ಕುಮಾರ್​ ಮೊಟ್ಟಮೊದಲು ನಾಯಕನಟನಾಗಿ ಅಭಿನಯಿಸಿದ್ದು ಅಪ್ಪು ಸಿನಿಮಾದಲ್ಲಿ. ನಟಿ ರಕ್ಷಿತಾ ಇದರಲ್ಲಿ ನಾಯಕಿ. ಅಂದಿನಿಂದಲೂ ಪುನೀತ್​ ಸಿನಿ ಪ್ರಿಯರಿಗೆ ನಿರಾಸೆಗೊಳಿಸಲಿಲ್ಲ. ಅಭಿ, ವೀರ ಕನ್ನಡಿಗ, ಆಕಾಶ್​, ಅರಸು, ಮಿಲನ, ಅಜಯ್​, ವಂಶಿ, ಪ್ರಥ್ವಿ, ರಾಮ್​, ಪರಮಾತ್ಮ, ಅಣ್ಣಾಬಾಂಡ್​, ಯಾರೇ ಕೂಗಾಡಲಿ, ಮೌರ್ಯ, ಯುವರತ್ನ, ನಟಸಾರ್ವಭೌಮ, ರಾಜಕುಮಾರ, ಹುಡುಗರು..ಹೀಗೆ ಸುಮಾರು 28 ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಆದರೆ ಇವರು ಇಲ್ಲಿಯವರೆಗೆ ನಟಿಸಿದ ಒಟ್ಟು ಸಿನಿಮಾಗಳ ಸಂಖ್ಯೆ 49. ಕಳೆದ ವರ್ಷ ಸಿನಿ ಜರ್ನಿಯ 45ನೇ ವರ್ಷದ ಸಂಭ್ರಮವನ್ನು ಪುನೀತ್​ ಆಚರಿಸಿಕೊಂಡಿದ್ದರು. ಇನ್ನೂ ಎರಡು ಮೂರು ಸಿನಿಮಾಗಳು ಅವರ ಕೈಯಲ್ಲಿವೆ. ಅಂದಹಾಗೆ ಅವರ ಸಿನಿಮಾಗಳು ಯುವಕರಿಗೆ ತುಂಬ ಅಚ್ಚುಮೆಚ್ಚು ಎನ್ನಿಸುವಂಥವು. ಯುವಕರಿಗೆ ಸ್ಫೂರ್ತಿ ನೀಡುವ, ಸಭ್ಯ ಪಾತ್ರಗಳನ್ನೇ ಹೆಚ್ಚಾಗಿ ಮಾಡಿದ್ದಾರೆ.  ಇನ್ನೇನು ಅರ್ಧಶತಕ ಬಾರಿಸುವ ಸಂಭ್ರಮಕ್ಕೆ ಇನ್ನೊಂದೇ ಸಿನಿಮಾ ಬಾಕಿ ಇರುವಾಗ ನಟನೆಯನ್ನು ಬಿಡಿ, ಉಸಿರನ್ನೇ ನಿಲ್ಲಿಸಿ ಹೊರಟುಹೋಗಿದ್ದಾರೆ.

ಕೇವಲ 46 ವರ್ಷ ಪುನೀತ್​ ರಾಜ್​ಕುಮಾರ್​ ಹುಟ್ಟಿದ್ದು 1975ರ ಮಾರ್ಚ್​ 17ರಂದು. ಈಗವರಿಗೆ 46ವರ್ಷ. ಇದೇನು ಸಾಯುವ ವಯಸ್ಸಾ? ಅದರಲ್ಲೂ ಕೂಡ ಪುನೀತ್​ ರಾಜ್​ಕುಮಾರ್ ತಮ್ಮ ಆಹಾರ, ಫಿಟ್​ನೆಸ್​, ವರ್ಕೌಟ್​​ ಬಗ್ಗೆ ತುಂಬ ಎಚ್ಚರಿಕೆ ವಹಿಸುತ್ತಿದ್ದರು. ಆದರೂ ಹೃದಯಾಘಾತ ಉಂಟಾಗಿದ್ದು ಪ್ರತಿಯೊಬ್ಬರನ್ನೂ ಶಾಕ್​​ಗೆ ದೂಡಿದೆ. ಅವರ ಕುಟುಂಬದವರು, ಅಭಿಮಾನಿಗಳು ಕಣ್ಣೀರಿಡುತ್ತಿದ್ದಾರೆ. ವಯಸ್ಸಿನಲ್ಲಿ 50 ದಾಟದ ಯುವ ನಟ ಪುನೀತ್​​ , ತಮ್ಮ 50 ನೇ ಸಿನಿಮಾ ಮಾಡುವುದಕ್ಕೂ ಮೊದಲೇ ಇಹಲೋಕ ತ್ಯಜಿಸಿದ್ದಾರೆ.

ಇದನ್ನೂ ಓದಿ: Puneeth Rajkumar Death Live: ನಟ ಪುನೀತ್ ರಾಜಕುಮಾರ್ ಇನ್ನಿಲ್ಲ

 ಪುನೀತ್​ ನಟಿಸುತ್ತಿದ್ದ ಈ ಸಿನಿಮಾ ಕೆಲಸಗಳು ಕೊನೆಗೂ ಪೂರ್ಣಗೊಳ್ಳಲೇ ಇಲ್ಲ

Puneeth Rajkumar passes away: ಕನ್ನಡದ ಕೋಟ್ಯಾಧಿಪತಿ ಪುನೀತ್ ರಾಜ್​ಕುಮಾರ್ ನಿಧನಕ್ಕೆ ಸೆಹ್ವಾಗ್, ಕುಂಬ್ಳೆ, ಹರ್ಭಜನ್ ಸಂತಾಪ

Published On - 3:52 pm, Fri, 29 October 21

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ