ಸೈನಿಕರಿಗೆ 89 ಆ್ಯಪ್ ಸೇರಿ ಫೇಸ್​​ಬುಕ್​​​ ಬಳಕೆಗೆ ಬ್ರೇಕ್!

| Updated By:

Updated on: Jul 09, 2020 | 11:43 AM

ದೆಹಲಿ: ಎಲ್ಲಕ್ಕಿಂತ ದೇಶ ಮುಖ್ಯ.. ದೇಶದ ಭದ್ರತೆ ಮುಖ್ಯ.. ಒಂದು ಚೂರು ಹೆಚ್ಚು ಕಮ್ಮಿಯಾದ್ರೂ ಶತ್ರುಗಳು ಹುರಿದು ಮುಕ್ತಾರೆ. ಭಾರತದ ರಹಸ್ಯ ಮಾಹಿತಿಗಳನ್ನ ಕದಿಯೋಕೆ ನಾನಾ ತಂತ್ರ ಪ್ರಯೋಗಿಸ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತದ ಮೇಲೆ ದುಷ್ಟ ಚೀನಾ ಹಾಗೂ ಪಾಪಿ ಪಾಕಿಸ್ತಾನದ ಕೆಂಗಣ್ಣು ಬೀರಿದೆ. ಇದ್ರಿಂದ ಅಲರ್ಟ್ ಆಗಿರೋ ಭಾರತೀಯ ಸೇನೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಚೀನಾ ಆ್ಯಪ್​ ಬ್ಯಾನ್​ ಬಳಿಕ ಸೇನೆಯ ಖಡಕ್ ನಿರ್ಧಾರ! ಯೆಸ್​​.. ಗಾಲ್ವಾನ್ ಗಡಿಯಲ್ಲಿ ಚೀನಾ ಕಿರಿಕ್ ಬಳಿಕ ಭಾರತ […]

ಸೈನಿಕರಿಗೆ 89 ಆ್ಯಪ್ ಸೇರಿ ಫೇಸ್​​ಬುಕ್​​​ ಬಳಕೆಗೆ ಬ್ರೇಕ್!
Follow us on

ದೆಹಲಿ: ಎಲ್ಲಕ್ಕಿಂತ ದೇಶ ಮುಖ್ಯ.. ದೇಶದ ಭದ್ರತೆ ಮುಖ್ಯ.. ಒಂದು ಚೂರು ಹೆಚ್ಚು ಕಮ್ಮಿಯಾದ್ರೂ ಶತ್ರುಗಳು ಹುರಿದು ಮುಕ್ತಾರೆ. ಭಾರತದ ರಹಸ್ಯ ಮಾಹಿತಿಗಳನ್ನ ಕದಿಯೋಕೆ ನಾನಾ ತಂತ್ರ ಪ್ರಯೋಗಿಸ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತದ ಮೇಲೆ ದುಷ್ಟ ಚೀನಾ ಹಾಗೂ ಪಾಪಿ ಪಾಕಿಸ್ತಾನದ ಕೆಂಗಣ್ಣು ಬೀರಿದೆ. ಇದ್ರಿಂದ ಅಲರ್ಟ್ ಆಗಿರೋ ಭಾರತೀಯ ಸೇನೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.

ಚೀನಾ ಆ್ಯಪ್​ ಬ್ಯಾನ್​ ಬಳಿಕ ಸೇನೆಯ ಖಡಕ್ ನಿರ್ಧಾರ!
ಯೆಸ್​​.. ಗಾಲ್ವಾನ್ ಗಡಿಯಲ್ಲಿ ಚೀನಾ ಕಿರಿಕ್ ಬಳಿಕ ಭಾರತ ಮಹತ್ವದ ಹೆಜ್ಜೆಗಳನ್ನ ಇಡ್ತಿದೆ. ದೇಶದಲ್ಲಿ ಚೀನಾದ ಆ್ಯಪ್​ಗಳಿಗೆ ಗುನ್ನಾ ಹಾಕಿದ್ಮೇಲೆ ಖಡಕ್ ನಿರ್ಧಾರಗಳು ಹೊರ ಬೀಳ್ತಿದೆ. ಅದ್ರಲ್ಲೂ ಇತ್ತೀಚಿನ ದಿನಗಳಲ್ಲಿ ಭಾರತೀಯ ಸೈನಿಕರನ್ನ ರಣಹೇಡಿ ಪಾಕಿಸ್ತಾನ, ಚೀನಾದ ಗುಪ್ತಚರ ಸಂಸ್ಥೆಗಳು ಟಾರ್ಗೆಟ್ ಮಾಡ್ತಿವೆ.

ಭಾರತೀಯ ಸೇನಾ ಸಿಬ್ಬಂದಿಯನ್ನ ಹನಿಟ್ರ್ಯಾಪ್​ ಜಾಲಕ್ಕೆ ಬೀಳಿಸಿ ರಹಸ್ಯ ಮಾಹಿತಿಗಳನ್ನ ಕಲೆ ಹಾಕಿದ ಅನೇಕ ಪ್ರಕರಣಗಳೂ ನಡೆದಿವೆ. ಹೀಗಾಗಿ ಭದ್ರತೆ ಕಾರಣ, ಸೂಕ್ಷ್ಮ ಮಾಹಿತಿ ಸೋರಿಕೆ ತಡೆಗೆ ಸೇನೆ ಮಹತ್ವದ ಹೆಜ್ಜೆ ಇಟ್ಟಿದೆ. ಸೈನಿಕರು, ಅಧಿಕಾರಿಗಳು ತಮ್ಮ ಮೊಬೈಲ್‌ ಫೋನ್‌ನಲ್ಲಿರುವ ಫೇಸ್​ಬುಕ್, ಟಿವಿಕ್​ಟಾಕ್​, ಇನ್‌ಸ್ಟಾಗ್ರಾಮ್​ ಸೇರಿದಂತೆ 89 ಆ್ಯಪ್​​ಗಳನ್ನ ಡಿಲೀಟ್ ಮಾಡುವಂತೆ ಭಾರತೀಯ ಸೇನೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದ್ರಲ್ಲಿ ಚೀನಾದ 59 ಆ್ಯಪ್​ಗಳು ಕೂಡ ಸೇರಿರೋದು ವಿಶೇಷ.

ಈ ಆ್ಯಪ್​​ಗಳಿಗೆ ನಿರ್ಬಂಧ!
ಇನ್ನು, ಸೈನಿಕರು ಮೊಬೈಲ್​ನಲ್ಲಿರುವ ಫೇಸ್ ಬುಕ್, ಇನ್​ಸ್ಟಾಗ್ರಾಮ್, ಸ್ನ್ಯಾಪ್ ಚಾಟ್, ವಿಚಾಟ್, IMO, ಹಲೋ, ಶೇರ್ ಚಾಟ್, ಹೈಕ್, ಲೈನ್, ಟಿಕ್​​ಟಾಕ್ ಡಿಲೀಟ್ ಮಾಡಲು ಖಡಕ್ ಸೂಚನೆ ನೀಡಲಾಗಿದೆ. ಅಲ್ಲದೇ, ಶೇರ್​​ಇಟ್, ಕ್ಸೆಂಡರ್, ಯುಸಿ ಬ್ರೌಸರ್, ಜೂಮ್, ಲೈಕೀ, ವಿಮೇಟ್, ಕ್ಯಾಮ್ ಸ್ಕ್ಯಾನರ್, ಟ್ರೂ ಕಾಲರ್, ವೈಬರ್, ಪಬ್ ಜಿ, ಕ್ಲಾಶ್ ಆಫ್ ಕಿಂಗ್ಸ್, ಕ್ಲಬ್ ಫ್ಯಾಕ್ಟರಿ, ಟಿಂಡರ್, ಹ್ಯಾಪನ್, ಐಸಲ್, ಅಜರ್, ಟನ್​​​ಟನ್, 360 ಸೆಕ್ಯುರಿಟಿ, ಡೈಲಿ ಹಂಟ್, ನ್ಯೂಸ್ ಡಾಗ್, ಪ್ರತಿಲಿಪಿ, ಹಂಗಾಮಾ, ಸಾಂಗ್ಸ್ ಪಿಕೆ, ಟಂಬ್ಲರ್, ರೆಡ್ಡಿಟ್ ಸೇರಿದಂತೆ 89 ಆ್ಯಪ್​​ಗಳನ್ನ ಯಾರೂ ಕೂಡ ಬಳಸುವಂತಿಲ್ಲ ಅಂತ ಕಠಿಣ ಸಂದೇಶ ರವಾನಿಸಲಾಗಿದೆ.

ಸೈನಿಕರು ಸೂಚನೆ ಪಾಲಿಸದಿದ್ರೆ ಕಠಿಣ ಕ್ರಮದ ಎಚ್ಚರಿಕೆ!
ದೇಶದ ಹಿತದೃಷ್ಟಿಯಿಂದ ಸೂಕ್ಷ್ಮ ಮಾಹಿತಿಯನ್ನು ರಕ್ಷಿಸುವ ಸಲುವಾಗಿ ಇದೀಗ ಸೇನೆ ಇಂಥಹದ್ದೊಂದು ಆದೇಶ ನೀಡಿದೆ. ಆದೇಶ ಪಾಲಿಸದಿದ್ರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಅನ್ನೋ ಎಚ್ಚರಿಕೆಯನ್ನ ಕೂಡ ವಾನಿಸಲಾಗಿದೆ. ಈಗಾಗಲೇ ನೌಕಾದಳ ತನ್ನ ಎಲ್ಲಾ ಸೈನಿಕರಿಗೂ ಫೇಸ್‌ಬುಕ್‌ ಬಳಕೆಗೆ ನಿರ್ಬಂಧ ಹೇರಿದೆ. ಜೊತೆಗೆ ಕಳೆದ ಡಿಸೆಂಬರ್‌ನಲ್ಲಿ ನೌಕಾನೆಲೆಗಳಿಗೆ ಹಾಗೂ ಡಾಕ್‌ಯಾರ್ಡ್‌ಗಳಿಗೆ ಸ್ಮಾರ್ಟ್‌ಫೋನ್​​ಗಳನ್ನ ಕೊಂಡೊಯ್ಯದಂತೆ ಸೂಚನೆ ನೀಡಲಾಗಿತ್ತು. ಒಟ್ನಲ್ಲಿ ಚೀನಾದ ಆ್ಯಪ್ ಬ್ಯಾನ್ ಬಳಿಕ ಭಾರತೀಯ ಸೇನೆ ಮಹತ್ವದ ಹೆಜ್ಜೆ ಇಟ್ಟಿದೆ. ದೇಶದ ಯಾವುದೇ ಮಾಹಿತಿ. ಸೀಕ್ರೆಟ್ ಪ್ಲ್ಯಾನ್​​ಗಳು ಶತ್ರುಗಳ ಜಾಲಕ್ಕೆ ಸಿಗದಂತೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

Published On - 7:07 am, Thu, 9 July 20