ಗ್ರಾಮಸ್ಥನ ಸವಾಲ್! ಘರ್ಜಿಸಿದ JCB ಡ್ರೈವರ್.. ಮುಂದೇನಾಯ್ತು?
ಹೈದರಾಬಾದ್: JCB ಯಂತ್ರದ ಚಾಲಕನಿಗೆ ಸವಾಲ್ ಒಡ್ಡಿ ಯಂತ್ರದಿಂದ ಪೆಟ್ಟುತಿಂದ ಗ್ರಾಮಸ್ಥನೊಬ್ಬನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ತೆಲಂಗಾಣದ ಮುಲುಗು ಗ್ರಾಮದಲ್ಲಿ ನಿನ್ನೆ ನಡೆದಿರುವ ಈ ಘಟನೆಯಲ್ಲಿ ಗ್ರಾಮಸ್ಥನೊಬ್ಬ ಜೆಸಿಬಿ ಯಂತ್ರದ ಚಾಲಕನಿಗೆ ಕೆಲಸ ಮುಂದುವರೆಸಲು ಅಡ್ಡಿಪಡಿಸುವ ದೃಶ್ಯ ಕಂಡುಬಂದಿದೆ. ನಂತರ ಚಾಲಕನೊಟ್ಟಿಗೆ ವಾಗ್ವಾದಕ್ಕೆ ಇಳಿಯುತ್ತಾನೆ. ಇದರಿಂದ ಸಿಟ್ಟಾದ ಚಾಲಕ ಒಂದೆರಡು ಬಾರಿ ಯಂತ್ರದ ಬಕೆಟ್ನಿಂದ ಆತನ ತಲೆಯ ಮೇಲೆ ಮೊಟಕುತ್ತಾನೆ. ಆದ್ರೇ ಗ್ರಾಮಸ್ಥ ಇದಕ್ಕೂ ಬಗ್ಗೋದಿಲ್ಲ. ಕೊನೆಗೆ ಕೋಪಗೊಂಡ ಚಾಲಕ ಬಕೆಟ್ನಿಂದ ಬಲವಾಗಿ […]
ಹೈದರಾಬಾದ್: JCB ಯಂತ್ರದ ಚಾಲಕನಿಗೆ ಸವಾಲ್ ಒಡ್ಡಿ ಯಂತ್ರದಿಂದ ಪೆಟ್ಟುತಿಂದ ಗ್ರಾಮಸ್ಥನೊಬ್ಬನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ತೆಲಂಗಾಣದ ಮುಲುಗು ಗ್ರಾಮದಲ್ಲಿ ನಿನ್ನೆ ನಡೆದಿರುವ ಈ ಘಟನೆಯಲ್ಲಿ ಗ್ರಾಮಸ್ಥನೊಬ್ಬ ಜೆಸಿಬಿ ಯಂತ್ರದ ಚಾಲಕನಿಗೆ ಕೆಲಸ ಮುಂದುವರೆಸಲು ಅಡ್ಡಿಪಡಿಸುವ ದೃಶ್ಯ ಕಂಡುಬಂದಿದೆ. ನಂತರ ಚಾಲಕನೊಟ್ಟಿಗೆ ವಾಗ್ವಾದಕ್ಕೆ ಇಳಿಯುತ್ತಾನೆ. ಇದರಿಂದ ಸಿಟ್ಟಾದ ಚಾಲಕ ಒಂದೆರಡು ಬಾರಿ ಯಂತ್ರದ ಬಕೆಟ್ನಿಂದ ಆತನ ತಲೆಯ ಮೇಲೆ ಮೊಟಕುತ್ತಾನೆ. ಆದ್ರೇ ಗ್ರಾಮಸ್ಥ ಇದಕ್ಕೂ ಬಗ್ಗೋದಿಲ್ಲ.
ಕೊನೆಗೆ ಕೋಪಗೊಂಡ ಚಾಲಕ ಬಕೆಟ್ನಿಂದ ಬಲವಾಗಿ ಅವನ ತಲೆಗೆ ಹೊಡೆಯುತ್ತಾನೆ. ಇದರಿಂದ ಬ್ಯಾಲೆನ್ಸ್ ಕಳೆದುಕೊಂಡ ಗ್ರಾಮಸ್ಥ ಯಂತ್ರಕ್ಕೆ ಜೋರಾಗಿ ಡಿಕ್ಕಿ ಹೊಡೆದು ಬೀಳುತ್ತಾನೆ.
ಕೂಡಲೇ ಅಲ್ಲಿಂದ ಯಂತ್ರದೊಂದಿಗೆ ಡ್ರೈವರ್ ಎಸ್ಕೇಪ್ ಆಗಿದ್ದಾನೆ. ಇನ್ನು ಈ ಘಟನೆ ಸ್ಥಳೀಯ ಪೊಲೀಸರ ಗಮನಕ್ಕೆ ಬಂದಿದ್ದು ಚಾಲಕನ ವಿರುದ್ಧ FIR ದಾಖಲಿಸಿದ್ದಾರೆ. ಗ್ರಾಮಸ್ಥ ಕುಡಿದ ಅಮಲಿನಲ್ಲಿ ಚಾಲಕನೊಟ್ಟಿಗೆ ಜಗಳ ತೆಗೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
#WATCH A proclainer's driver hits a man with its front bucket in Telangana's Mulugu. FIR has been registered against the driver. Sub-Inspector, Mangapeta Police Station says, "The man was drunk and started arguing with the driver, following which the driver hit him." (07.07.20) pic.twitter.com/EjTDW6q3rD
— ANI (@ANI) July 8, 2020
Published On - 1:25 pm, Wed, 8 July 20