10ನೇ ಕ್ಲಾಸ್ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್, ಬಾಲಕಿಗೆ ಸಿಕ್ತು ಹೊಸ ಫ್ಲ್ಯಾಟ್!
ಭೋಪಾಲ್: ಜೀವನದಲ್ಲಿ ಎಷ್ಟೇ ಕಷ್ಟ ಎದುರಾದ್ರೂ ಮನುಷ್ಯ ಅದನ್ನು ಮೆಟ್ಟಿನಿಲ್ಲಬಹುದು. ಸಾಧಿಸುವ ಛಲವೊಂದಿರಬೇಕು ಅಷ್ಟೇ. ಅಂತೆಯೇ ಚೆನ್ನಾಗಿ ಓದಿ IAS ಅಧಿಕಾರಿ ಆಗಲೇ ಬೇಕು ಎಂಬ ಮಹದಾಸೆ ಹೊತ್ತಿರುವ ಮಧ್ಯಪ್ರದೇಶದ ಬಾಲಕಿಯೊಬ್ಬಳ ಪರಿಶ್ರಮಕ್ಕೆ ಇದೀಗ ಸರ್ಕಾರದ ಕಡೆಯಿಂದ ತಕ್ಕ ಪ್ರೋತ್ಸಾಹ ದಕ್ಕಿದೆ. ಹೌದು, ಮಧ್ಯಪ್ರದೇಶದ ಇಂದೋರ್ನಲ್ಲಿ 10ನೇ ಕ್ಲಾಸ್ ಓದುತ್ತಿರುವ ಭಾರತಿ ಖಂಡೇಕರ್ ಓರ್ವ ಬಡ ಕೂಲಿಕಾರ್ಮಿಕನ ಮಗಳು. ಜೀವನದಲ್ಲಿ ಚೆನ್ನಾಗಿ ಓದಿ IAS ಅಧಿಕಾರಿಯಾಗಬೇಕು ಎಂಬ ಹಂಬಲವಿರುವ ಭಾರತ ಅಂತೆಯೇ ತನ್ನ 10ನೇ ಕ್ಲಾಸ್ ಪರೀಕ್ಷೆಯಲ್ಲಿ […]
ಭೋಪಾಲ್: ಜೀವನದಲ್ಲಿ ಎಷ್ಟೇ ಕಷ್ಟ ಎದುರಾದ್ರೂ ಮನುಷ್ಯ ಅದನ್ನು ಮೆಟ್ಟಿನಿಲ್ಲಬಹುದು. ಸಾಧಿಸುವ ಛಲವೊಂದಿರಬೇಕು ಅಷ್ಟೇ. ಅಂತೆಯೇ ಚೆನ್ನಾಗಿ ಓದಿ IAS ಅಧಿಕಾರಿ ಆಗಲೇ ಬೇಕು ಎಂಬ ಮಹದಾಸೆ ಹೊತ್ತಿರುವ ಮಧ್ಯಪ್ರದೇಶದ ಬಾಲಕಿಯೊಬ್ಬಳ ಪರಿಶ್ರಮಕ್ಕೆ ಇದೀಗ ಸರ್ಕಾರದ ಕಡೆಯಿಂದ ತಕ್ಕ ಪ್ರೋತ್ಸಾಹ ದಕ್ಕಿದೆ.
ಹೌದು, ಮಧ್ಯಪ್ರದೇಶದ ಇಂದೋರ್ನಲ್ಲಿ 10ನೇ ಕ್ಲಾಸ್ ಓದುತ್ತಿರುವ ಭಾರತಿ ಖಂಡೇಕರ್ ಓರ್ವ ಬಡ ಕೂಲಿಕಾರ್ಮಿಕನ ಮಗಳು. ಜೀವನದಲ್ಲಿ ಚೆನ್ನಾಗಿ ಓದಿ IAS ಅಧಿಕಾರಿಯಾಗಬೇಕು ಎಂಬ ಹಂಬಲವಿರುವ ಭಾರತ ಅಂತೆಯೇ ತನ್ನ 10ನೇ ಕ್ಲಾಸ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಿಂದ ತೇರ್ಗಡೆಯಾಗಿದ್ದಾರೆ.
ಒಳ್ಳೇ ಮಾರ್ಕ್ಸ್ ಪಡೆದ ಖುಷಿಯಲ್ಲಿದ್ದ ಭಾರತಿಗೆ ಇದೀಗ ಇಂದೋರ್ ನಗರ ಪಾಲಿಕೆಯು ಮತ್ತೊಂದು ಭರ್ಜರಿ ಗಿಫ್ಟ್ ಕೊಟ್ಟಿದೆ. ಸ್ವಂತ ಮನೆಯಿಲ್ಲದೆ ಫುಟ್ಪಾತ್ ಮೇಲೆ ಬದುಕು ನಡೆಸುತ್ತಿದ್ದ ಬಡ ಕುಟುಂಬಕ್ಕೆ ಒಂದು ಅಪಾರ್ಟ್ಮೆಂಟ್ನ ಉಡುಗೊರೆಯಾಗಿ ನೀಡಿದೆ. ಇದಲ್ಲದೆ ಆಕೆಯ ಮುಂದಿನ ಶಿಕ್ಷಣಕ್ಕೆ ತಗಲುವ ಎಲ್ಲಾ ಖರ್ಚನ್ನು ತಾವೇ ನೋಡಿಕೊಳ್ಳೋದಾಗಿ ಭರವಸೆ ಸಹ ನೀಡಿದ್ದಾರೆ.
Published On - 4:59 pm, Thu, 9 July 20