ಇಸ್ರೇಲಿನ ಹೈಟೆಕ್ ‘ಲೇಸರ್ ಬಾಂಬ್ ಡ್ರೋನ್‌’ ಖರೀದಿಗೆ ಮುಂದಾದ ಭಾರತ

ನವದೆಹಲಿ: ಭಾರತ ಮತ್ತು ಚೀನಾ ನಡುವೆ ಲಡಾಖ್ ಮತ್ತು ಗಾಲ್ವಾನ್‌ನಲ್ಲಿ ಗಡಿ ವಿವಾದ ನಡೆಯುತ್ತಿರುವಾಗಲೇ, ಭಾರತ “ಪ್ರೊಜೆಕ್ಟ್‌ ಚೀತಾ”ಗೆ ಚಾಲನೆ ನೀಡಿದೆ. ಹೌದು ಭಾರತೀಯ ಸೇನೆ ಈಗ ಪ್ರೊಜೆಕ್ಟ್ ಚೀತಾಗೆ ಚಾಲನೆ ನೀಡಲು ಮುಂದಾಗಿದೆ. ಇದರಡಿ ಭಾರತ ಈಗ ಅತ್ಯಾಧುನಿಕ ಯುದ್ಧೋಪಕರಣಗಳನ್ನು ಖರೀದಿಸಲಿದೆ. ಅದರಲ್ಲೂ ಭಾರತೀಯ ಸೇನೆಯ ಕಣ್ಣು ಈಗ ಇಸ್ರೇಲಿನ ಲೇಸರ್ ಬಾಂಬ್ ಪ್ರಯೋಗಿಸುವ ಮಾನವ ರಹಿತ ಡ್ರೋನ್‌ ಮೇಲೆ ಬಿದ್ದಿದೆ. ಈ ಸಂಬಂಧ ರಕ್ಷಣಾ ಕಾರ್ಯದರ್ಶಿಗೆ ಪ್ರಸ್ತಾವನೆ ಸಲ್ಲಿಸಿದೆ. ಇಸ್ರೇಲಿನ ಈ ಹೆರೋನ್ ಲೇಸರ್ […]

ಇಸ್ರೇಲಿನ ಹೈಟೆಕ್ ‘ಲೇಸರ್ ಬಾಂಬ್ ಡ್ರೋನ್‌’ ಖರೀದಿಗೆ ಮುಂದಾದ ಭಾರತ
Guru

Updated on: Aug 09, 2020 | 9:39 PM

ನವದೆಹಲಿ: ಭಾರತ ಮತ್ತು ಚೀನಾ ನಡುವೆ ಲಡಾಖ್ ಮತ್ತು ಗಾಲ್ವಾನ್‌ನಲ್ಲಿ ಗಡಿ ವಿವಾದ ನಡೆಯುತ್ತಿರುವಾಗಲೇ, ಭಾರತ “ಪ್ರೊಜೆಕ್ಟ್‌ ಚೀತಾ”ಗೆ ಚಾಲನೆ ನೀಡಿದೆ.

ಹೌದು ಭಾರತೀಯ ಸೇನೆ ಈಗ ಪ್ರೊಜೆಕ್ಟ್ ಚೀತಾಗೆ ಚಾಲನೆ ನೀಡಲು ಮುಂದಾಗಿದೆ. ಇದರಡಿ ಭಾರತ ಈಗ ಅತ್ಯಾಧುನಿಕ ಯುದ್ಧೋಪಕರಣಗಳನ್ನು ಖರೀದಿಸಲಿದೆ. ಅದರಲ್ಲೂ ಭಾರತೀಯ ಸೇನೆಯ ಕಣ್ಣು ಈಗ ಇಸ್ರೇಲಿನ ಲೇಸರ್ ಬಾಂಬ್ ಪ್ರಯೋಗಿಸುವ ಮಾನವ ರಹಿತ ಡ್ರೋನ್‌ ಮೇಲೆ ಬಿದ್ದಿದೆ. ಈ ಸಂಬಂಧ ರಕ್ಷಣಾ ಕಾರ್ಯದರ್ಶಿಗೆ ಪ್ರಸ್ತಾವನೆ ಸಲ್ಲಿಸಿದೆ.

ಇಸ್ರೇಲಿನ ಈ ಹೆರೋನ್ ಲೇಸರ್ ಡ್ರೋಣ್ ವಿಶ್ವದಲ್ಲಿಯೇ ಅತ್ಯಂತ ಶಕ್ತಿಶಾಲಿ ಮತ್ತು ನೆಲದಿಂದ ನೆಲಕ್ಕೆ, ಆಕಾಶದಿಂದ ಆಕಾಶದಲ್ಲಿ ಮತ್ತು ಆಕಾಶದಿಂದ ನೆಲಕ್ಕೆ ಅತ್ಯಂತ ನಿಖರವಾಗಿ ಹಾಗೂ ವೇಗದಲ್ಲಿ ಶತೃಗಳನ್ನು ಗುರಿಯಾಗಿಸೋದ್ರಲ್ಲಿ ಭಾರೀ ನಿಸ್ಸಿಮ. ಹೀಗಾಗಿ ಭಾರತೀಯ ಸೇನೆ ಇಂಥ 90 ಹೆರೋನ್ ಡ್ರೋನ್‌ಗಳನ್ನು ಖರೀದಿಸಲು ಮುಂದಾಗಿದೆ.

ಈ ಅತ್ಯಾಧುನಿಕ ಶಸ್ತ್ರಸಜ್ಜಿತ ಹೆರೋನ್ ಡ್ರೋನ್‌ಗಾಗಿ ರಕ್ಷಣಾ ಇಲಾಖೆಗೆ ಸೇನೆ 3,500 ಕೋಟಿ ರೂ.ಗಳ ಬಜೆಟ್ ಸಲ್ಲಿಸಿದೆ. ಈ ಪ್ರಸ್ತಾವನೆ ಈಗ ಕೇಂದ್ರ ರಕ್ಷಣಾ ಇಲಾಖೆ ಕಾರ್ಯದರ್ಶಿ ಅಜಯ್‌ಕುಮಾರ್ ಅವರಿಗೆ ಬಂದಿದ್ದು, ಅವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

Guru
Loading...
Unable to load recommendations.
Follow Us