ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಫೋನ್ ನಂಬರ್ ಇದ್ದ ಪಾರಿವಾಳದ ಉಂಗುರ ಪತ್ತೆ; ಗಡಿಯಲ್ಲಿ ಹೈ ಅಲರ್ಟ್

ಜಮ್ಮು ಮತ್ತು ಕಾಶ್ಮೀರದ ಅರ್ನಿಯಾ ಸೆಕ್ಟರ್‌ನ ಮೋಲು ಚಕ್ ಪ್ರದೇಶದಲ್ಲಿ ಪಾಕಿಸ್ತಾನಿ ಮೊಬೈಲ್ ಸಂಖ್ಯೆಗಳನ್ನು ಹೊಂದಿರುವ ಉಂಗುರಗಳನ್ನು ಧರಿಸಿದ 2 ಅನುಮಾನಾಸ್ಪದ ಪಾರಿವಾಳಗಳು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಮೋಲು ಚಕ್‌ನ ಸ್ಥಳೀಯರೊಬ್ಬರು ತಮ್ಮ ಟೆರೇಸ್‌ನಲ್ಲಿ 2 ಅಪರಿಚಿತ ಪಾರಿವಾಳಗಳನ್ನು ನೋಡಿ ತಕ್ಷಣವೇ ಸಂಬಂಧಪಟ್ಟ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡಿದರು. ತನಿಖೆಯ ಸಮಯದಲ್ಲಿ, ಪಾರಿವಾಳದ ಕಾಲಿನಲ್ಲಿ ಉಂಗುರ ಕಂಡುಬಂದಿದೆ. ಅವುಗಳಲ್ಲಿ 2 ಪಾಕಿಸ್ತಾನಿ ಮೊಬೈಲ್ ಸಂಖ್ಯೆಗಳಿದ್ದವು.

ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಫೋನ್ ನಂಬರ್ ಇದ್ದ ಪಾರಿವಾಳದ ಉಂಗುರ ಪತ್ತೆ; ಗಡಿಯಲ್ಲಿ ಹೈ ಅಲರ್ಟ್
ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಫೋನ್ ನಂಬರ್ ಇದ್ದ ಪಾರಿವಾಳದ ಉಂಗುರ ಪತ್ತೆ
Image Credit source: TV9

Updated on: Sep 03, 2026 | 7:51 PM

ಶ್ರೀನಗರ, ಸೆಪ್ಟೆಂಬರ್ 3: ಜಮ್ಮು ಮತ್ತು ಕಾಶ್ಮೀರದ ಅರ್ನಿಯಾ ಸೆಕ್ಟರ್‌ನ ಮೋಲು ಚಕ್ ಪ್ರದೇಶದಲ್ಲಿ ಪಾಕಿಸ್ತಾನಿ ಮೊಬೈಲ್ ಸಂಖ್ಯೆಗಳನ್ನು ಹೊಂದಿರುವ ಉಂಗುರಗಳನ್ನು ಧರಿಸಿದ 2 ಅನುಮಾನಾಸ್ಪದ ಪಾರಿವಾಳಗಳು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳನ್ನು ಎಚ್ಚರಿಸಲಾಗಿದೆ. ಮೋಲು ಚಕ್‌ನ ಸ್ಥಳೀಯ ನಿವಾಸಿಯೊಬ್ಬರು ತಮ್ಮ ಟೆರೇಸ್ ಮೇಲೆ ಈ ರೀತಿಯ ಉಂಗುರ ಧರಿಸಿದ್ದ 2 ಪಾರಿವಾಳಗಳನ್ನು ಗಮನಿಸಿದರು. ಆ ಸ್ಥಳೀಯ ನಿವಾಸಿ ತಕ್ಷಣ ಸಂಬಂಧಿತ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡಿದರು.

ಪಾಕಿಸ್ತಾನದ ಫೋನ್ ನಂಬರ್ 0327-5613257 ಮತ್ತು 0325-4226312 ಇದ್ದ ಪಾರಿವಾಳದ ಕಾಲಿನ ಉಂಗುರ ಅನುಮಾನ ಮೂಡಿಸಿದೆ. ಈ ಎರಡೂ ಸಂಖ್ಯೆಗಳು ಜಾಝ್ ಅಥವಾ ಮೊಬಿಲಿಂಕ್ ನೆಟ್‌ವರ್ಕ್‌ಗೆ ಸಂಪರ್ಕ ಹೊಂದಿವೆ ಎನ್ನಲಾಗಿದೆ. ಪಾಕಿಸ್ತಾನದ ಗಡಿಯಾಚೆಗಿನ ಸಂವಹನಕ್ಕಾಗಿ ಪಕ್ಷಿಗಳನ್ನು ಬಳಸಲಾಗುತ್ತಿದೆಯೇ? ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಲಡಾಖ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಪೀಠ ಸ್ಥಾಪನೆಗೆ ಕೇಂದ್ರ ಸರ್ಕಾರ ನಿರ್ಧಾರ; ಅಮಿತ್ ಶಾ ಘೋಷಣೆ

ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದಲ್ಲಿ ಹಲವಾರು ಒಳನುಸುಳುವಿಕೆ ಪ್ರಯತ್ನಗಳನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ. ಕಥುವಾ, ಬಸಂತ್‌ಗಢ ಮತ್ತು ಬಿಲ್ಲಾವರ್‌ನಲ್ಲಿ ನಡೆದ ಹಿಂದಿನ ದಾಳಿಗಳು ಈ ಗಡಿ ಮಾರ್ಗದ ಮೂಲಕ ಭಯೋತ್ಪಾದಕರು ಒಳನುಸುಳುತ್ತಿದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು. ಜಮ್ಮು-ಪಠಾಣ್‌ಕೋಟ್ ರಾಷ್ಟ್ರೀಯ ಹೆದ್ದಾರಿಗೆ ಹತ್ತಿರದಲ್ಲಿರುವುದರಿಂದ ಈ ಪ್ರದೇಶವು ಬಹಳ ಸೂಕ್ಷ್ಮವಾಗಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್‌ನಲ್ಲಿ ಗಡಿಯಾಚೆಯಿಂದ ಅನುಮಾನಾಸ್ಪದ ಪಾರಿವಾಳಗಳು ಕಂಡುಬಂದ ಮೊದಲ ಘಟನೆ ಇದಲ್ಲ.

ಇದಕ್ಕೂ ಮೊದಲು, ಬಿಎಸ್‌ಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪಾಕಿಸ್ತಾನಿ ಅಂಚೆಚೀಟಿಗಳು, ಕೋಡೆಡ್ ಸಂದೇಶಗಳು ಮತ್ತು ವೈರ್ ತರಹದ ಆಂಟೆನಾಗಳನ್ನು ಹೊಂದಿರುವ ಪಾರಿವಾಳಗಳನ್ನು ವಶಪಡಿಸಿಕೊಂಡಿದ್ದಾರೆ. 2020ರಲ್ಲಿ, ಹಿರಾನಗರದ ಮಾನ್ಯರಿ ಗ್ರಾಮದಲ್ಲಿ ಪಾಕಿಸ್ತಾನಿ ಸಂಖ್ಯೆಯ ಉಂಗುರವನ್ನು ಹೊಂದಿರುವ ಪಾರಿವಾಳವನ್ನು ವಶಪಡಿಸಿಕೊಳ್ಳಲಾಗಿತ್ತು. 2016 ಮತ್ತು 2018ರಲ್ಲಿ, ಆರ್‌ಎಸ್ ಪುರ ಮತ್ತು ಅಖ್ನೂರ್ ವಲಯಗಳಲ್ಲಿ ಇದೇ ರೀತಿಯ ಪ್ರಕರಣಗಳಲ್ಲಿ ಪಕ್ಷಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಇದನ್ನೂ ಓದಿ: ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಹಿಂದೂ ದೇವಾಲಯದ ಧ್ವಂಸಕ್ಕೆ ಭಾರತ ಆಕ್ರೋಶ

ಈ ಪಕ್ಷಿಗಳನ್ನು ಬೇಹುಗಾರಿಕೆ, ಮಾದಕವಸ್ತು ಕಳ್ಳಸಾಗಣೆ ಅಥವಾ ಗಡಿ ಪಡೆಯ ಪ್ರತಿಕ್ರಿಯೆ ವಿಧಾನಗಳನ್ನು ಪರೀಕ್ಷಿಸಲು ಬಳಸಲಾಗುತ್ತಿದೆಯೇ ಎಂದು ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಹಿರಿಯ ಅಧಿಕಾರಿಯೊಬ್ಬರು, “ಪಕ್ಷಿಯನ್ನು ಬಂಧಿಸಲಾಗಿದೆ. ಎಲ್ಲಾ ಏಜೆನ್ಸಿಗಳಿಗೆ ಮಾಹಿತಿ ನೀಡಲಾಗಿದೆ. ನಾವು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದೇವೆ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us