ಇಂದು ಗುಜರಾತ್ ಕರಾವಳಿ ತೀರ(Gujarat Coast)ದಲ್ಲಿ ಸರಹದ್ದು ದಾಟಿ ಭಾರತದ ಕಡೆಗೆ ಸುಮಾರು 6-7 ಮೈಲುಗಳಷ್ಟು ದೂರ ಬಂದ ಪಾಕಿಸ್ತಾನ್ ಬೋಟ್ವೊಂದನ್ನು ಭಾರತೀಯ ಕರಾವಳಿ ರಕ್ಷಕ ಪಡೆ (ICG) ವಶಕ್ಕೆ ಪಡೆದಿದೆ. ಈ ದೋಣಿಯಲ್ಲಿ ಪಾಕಿಸ್ತಾನದ 10 ಮಂದಿ ಇದ್ದರು. ವಿಚಾರಣೆಗಾಗಿ ಅವರನ್ನೆಲ್ಲ ಪೋರ್ಬಂದರ್ಗೆ ಕರೆತರಲಾಗಿದೆ ಎಂದು ರಕ್ಷಣಾ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ. ಈ ಬೋಟ್ನ ಹೆಸರು ಯಾಸೀನ್. ಶನಿವಾರ ಭಾರತೀಯ ಕರಾವಳಿ ರಕ್ಷಕ ಪಡೆ ಹಡಗು ಅಂಕಿತ್ ಗಸ್ತು ತಿರುಗುತ್ತಿತ್ತು. ಈ ವೇಳೆ ಭಾರತದ ಕಡೆಗೆ ಪ್ರವೇಶಿಸಿದ ಪಾಕಿಸ್ತಾನಿ ಯಾಸೀನ್ ಬೋಟ್ನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದೆ.
Indian Coast Guard ship ICGS Ankit has apprehended a Pakistani Boat ‘Yaseen’ with 10 crew in Indian waters in the Arabian sea during night ops y’day. The crew is being brought to Porbandar for further interrogation: Indian Coast Guard officials pic.twitter.com/vYmxFyKm4V
— ANI (@ANI) January 9, 2022
ಭಾರತದ ಭಾಗದ ನೀರನ್ನು ಪ್ರವೇಶಿಸಿದ ಪಾಕಿಸ್ತಾನದ ಯಾಸೀನ್ ಬೋಟ್ನಲ್ಲಿ ಸುಮಾರು 2 ಟನ್ ಮೀನುಗಳಿದ್ದವು, 600 ಲೀಟರ್ ಇಂಧನವಿತ್ತು.ಅವೆಲ್ಲವನ್ನೂ ಭಾರತೀಯ ರಕ್ಷಣಾ ಪಡೆ ವಶಪಡಿಸಿಕೊಂಡಿದೆ. ಇವು ಬಿಟ್ಟರೆ ಮತ್ತೇನೂ ಮಹತ್ವದ ದಾಖಲೆಗಳಾಗಲಿ, ವಸ್ತುಗಳಾಗಲಿ ಸಿಕ್ಕಿಲ್ಲ ಎಂದು ಹೇಳಲಾಗಿದೆ. 2021ರ ಸೆಪ್ಟೆಂಬರ್ 15ರಂದು ಇಂಥದ್ದೇ ಒಂದು ಘಟನೆ ನಡೆದಿತ್ತು. ಸುಮಾರು 12 ಸಿಬ್ಬಂದಿಯಿದ್ದ ಪಾಕಿಸ್ತಾನದ ಬೋಟ್ವೊಂದು ಗುಜರಾತ್ ಕರಾವಳಿಯಲ್ಲಿ ಭಾರತದ ಒಳಗೆ ಬಂದಿತ್ತು. ಇನ್ನು ಡಿಸೆಂಬರ್ 20ರಂದು ಪಾಕಿಸ್ತಾನದ ಮೀನುಗಾರಿಕಾ ಬೋಟ್ವೊಂದು ಭಾರತದ ಕರಾವಳಿ ರಕ್ಷಕ ಪಡೆಯ ಬಳಿ ಸಿಕ್ಕಿಬಿದ್ದಿತ್ತು. ಅದರಲ್ಲಿ ಸುಮಾರು 400 ಕೋಟಿ ರೂ.ಮೌಲ್ಯದ, 77 ಕೆಜಿಗಳಷ್ಟು ಪ್ರಮಾಣದ ಹೆರೋಯಿನ್ ಇತ್ತು. ಹೀಗೆ ಅಕ್ರಮವಾಗಿ ನುಸುಳುವ ಬೋಟ್ಗಳು ಮಾದಕ ದ್ರವ್ಯ ಸಾಗಣೆ ಮಾಡುತ್ತಿವೆ ಎಂದು ಹೇಳಲಾಗಿದ್ದು, ದೇಶದ ಉಗ್ರ ವಿರೋಧಿ ಪಡೆಗಳು, ಕರಾವಳಿ ರಕ್ಷಕ ಪಡೆಗಳು ಜಂಟಿಯಾಗಿಯೇ ಕಾರ್ಯಾಚರಣೆ ನಡೆಸುತ್ತಿವೆ.
ಇದನ್ನೂ ಓದಿ:‘ನೆಲ,ಜಲ, ಭಾಷೆಗೆ ಧಕ್ಕೆಯಾದಾಗ ರಾಜ್ಕುಮಾರ್ ಮೊದಲು ಮುಂದೆ ಬರುತ್ತಿದ್ದರು’; ಜಯಮಾಲಾ