ಇಸ್ಲಮಾಬಾದ್ನಲ್ಲಿ ಎಸ್‌ಸಿಒ ಶೃಂಗಸಭೆ; ಭಾರತದ ಸಚಿವ ಜೈಶಂಕರ್ ಕೈ ಕುಲುಕಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್
ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಪಾಕಿಸ್ತಾನದ ಇಸ್ಲಮಾಬಾದ್ನಲ್ಲಿ ನಡೆಯುವ ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸಲು ತೆರಳಿದ್ದಾರೆ. ಇಂದು ರಾತ್ರಿಯ ಡಿನ್ನರ್ ಪಾರ್ಟಿ ವೇಳೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಜೈಶಂಕರ್ಗೆ ಹಸ್ತಲಾಘವ ಮಾಡಿದ್ದಾರೆ. ಶತ್ರು ರಾಷ್ಟ್ರವಾಗಿರುವ ಪಾಕಿಸ್ತಾನಕ್ಕೆ ಭಾರತದ ಸಚಿವರ ಭೇಟಿಯ ಬಗ್ಗೆ ಬಹಳ ನಿರೀಕ್ಷೆ ಮತ್ತು ಕುತೂಹಲವಿದೆ.
ಇಸ್ಲಮಾಬಾದ್: ಪಾಕಿಸ್ತಾನದ ಇಸ್ಲಮಾಬಾದ್ನಲ್ಲಿ ನಡೆಯುವ ಎಸ್‌ಸಿಒ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಇಂದು ಇಸ್ಲಾಮಾಬಾದ್‌ಗೆ ತಲುಪಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ಹಸ್ತಲಾಘವ ಮಾಡಿ ಜೈಶಂಕರ್ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ. ಇದರ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಕಳೆದ 9 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತದ ಸಚಿವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ನಾಯಕರಿಗೆ ಆಯೋಜಿಸಿದ್ದ ಔತಣಕೂಟದಲ್ಲಿ ಭಾರತದ ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಮತ್ತು ಪಾಕಿಸ್ತಾನಿ ಪ್ರಧಾನಿ ಶೆಹಬಾಜ್ ಷರೀಫ್ ಇಂದು ಅಪರೂಪದ ಹಸ್ತಲಾಘವ ಮಾಡಿ ಶುಭಾಶಯ ವಿನಿಮಯ ಮಾಡಿಕೊಂಡರು. ಶೆಹಬಾಜ್ ಷರೀಫ್ ಹಾಗೂ ಸಚಿವ ಜೈಶಂಕರ್ ಕೆಲಸಮಯ ಮಾತುಕತೆ ನಡೆಸಿದ್ದಾರೆ. ವಿಶೇಷವೆಂದರೆ ಇದು 9 ವರ್ಷಗಳಲ್ಲಿ ಭಾರತದ ವಿದೇಶಾಂಗ ಸಚಿವರ ಮೊದಲ ಪಾಕಿಸ್ತಾನ ಭೇಟಿಯಾಗಿದೆ.
ಇದನ್ನೂ ಓದಿ: SCO summit: ಇಂದು ಎಸ್‌ಸಿಒ ಶೃಂಗಸಭೆ; ಪಾಕಿಸ್ತಾನ ತಲುಪಲಿದ್ದಾರೆ ಜೈಶಂಕರ್
ಸಚಿವ ಜೈಶಂಕರ್ ಅವರ ವಿಮಾನವು ಪಾಕಿಸ್ತಾನದ ರಾಜಧಾನಿ ನಗರದ ಹೊರವಲಯದಲ್ಲಿರುವ ನೂರ್ ಖಾನ್ ವಾಯುನೆಲೆಯಲ್ಲಿ ಇಂದು ಮಧ್ಯಾಹ್ನ 3.30ರ ಸುಮಾರಿಗೆ ತಲುಪಿತು. ಅವರನ್ನು ಪಾಕಿಸ್ತಾನದ ಹಿರಿಯ ಅಧಿಕಾರಿಗಳು ಸ್ವಾಗತಿಸಿದರು. ಕಾಶ್ಮೀರ ಸಮಸ್ಯೆ ಮತ್ತು ಪಾಕಿಸ್ತಾನದಿಂದ ಹೊರಹೊಮ್ಮುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಗೆ ಸಂಬಂಧಿಸಿದಂತೆ ಎರಡು ನೆರೆಹೊರೆಯ ದೇಶಗಳ ನಡುವಿನ ಸಂಬಂಧಗಳು ಉದ್ವಿಗ್ನವಾಗಿರುವಾಗಲೇ ಸುಮಾರು 9 ವರ್ಷಗಳ ಬಳಿಕ ಭಾರತದ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಪ್ರಯಾಣಿಸಿರುವುದರಿಂದ ಈ ಭೇಟಿ ವಿಶೇಷವಾಗಿದೆ.
#WATCH | Islamabad: Pakistan PM Shehbaz Sharif welcomes EAM Dr S Jaishankar and other SCO Council Heads of Government, to a dinner hosted by him.
EAM is in Pakistan to participate in the 23rd Meeting of SCO Council of Heads of Government.
(Video Source: PTV) pic.twitter.com/BHtUhuLm9e
— ANI (@ANI) October 15, 2024
ಪಾಕಿಸ್ತಾನಕ್ಕೆ ಭೇಟಿ ನೀಡಿದ ಕೊನೆಯ ಭಾರತೀಯ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್. 2015ರ ಡಿಸೆಂಬರ್ 8-9ರಲ್ಲಿ ನಡೆದ ಅಫ್ಘಾನಿಸ್ತಾನದ ‘ಹಾರ್ಟ್ ಆಫ್ ಏಷ್ಯಾ’ ಸಮ್ಮೇಳನದಲ್ಲಿ ಭಾಗವಹಿಸಲು ಆಗ ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಇಸ್ಲಾಮಾಬಾದ್‌ಗೆ ಪ್ರಯಾಣ ಬೆಳೆಸಿದ್ದರು.
Landed in Islamabad to take part in SCO Council of Heads of Government Meeting. pic.twitter.com/PQ4IFPZtlp
— Dr. S. Jaishankar (@DrSJaishankar) October 15, 2024
ಪಾಕಿಸ್ತಾನವು ಇಂದು (ಅಕ್ಟೋಬರ್ 15) ಮತ್ತು ನಾಳೆ SCO ಕೌನ್ಸಿಲ್ ಆಫ್ ಹೆಡ್ಸ್ ಆಫ್ ಗವರ್ನಮೆಂಟ್ (CHG) ಸಭೆಯನ್ನು ಆಯೋಜಿಸಿದೆ. 2001ರಲ್ಲಿ ಸ್ಥಾಪನೆಯಾದ SCO, ಈ ಪ್ರದೇಶದಲ್ಲಿ ರಾಜಕೀಯ, ಆರ್ಥಿಕ ಮತ್ತು ಭದ್ರತಾ ಸಹಕಾರವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: ಭಾರತ ವಿಶ್ವದ 5G ಪವರ್ಹೌಸ್ ಆಗಿ ಹೊರಹೊಮ್ಮಿದೆ; ಐಎಂಸಿಯಲ್ಲಿ ಪ್ರಧಾನಿ ಮೋದಿ
SCO ಪಾಕಿಸ್ತಾನ, ಚೀನಾ, ಭಾರತ, ರಷ್ಯಾ, ಇರಾನ್, ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ಬೆಲಾರಸ್ ಅನ್ನು ಒಳಗೊಂಡಿದೆ. ಇನ್ನೂ 16 ದೇಶಗಳು ವೀಕ್ಷಕರಾಗಿರಲಿವೆ. ಆಗಸ್ಟ್‌ನಲ್ಲಿ ಎಸ್‌ಸಿಒ ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಾಕಿಸ್ತಾನ ಆಹ್ವಾನಿಸಿತ್ತು. ಅವರ ಬದಲಾಗಿ ಜೈಶಂಕರ್ ಪಾಕ್ಗೆ ಭೇಟಿ ನೀಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ