ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ದೆಹಲಿ ಚಲೋ ಸತ್ಯಾಗ್ರಹ ಈಗ ವಿಶ್ವದ ಹಲವು ದೇಶಗಳಲ್ಲಿ ಚರ್ಚೆಯ ವಿಷಯವಾಗಿದೆ.
ಶಾಂತಿಯುತ ಪ್ರತಿಭಟನೆ ನಡೆಸುವ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ನನ್ನ ಬೆಂಬಲ ಸದಾ ಇರುತ್ತದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೇ ಘೋಷಿಸಿದ ನಂತರ ಭಾರತ ಸರ್ಕಾರ ಹಲವು ದೇಶಗಳಲ್ಲಿರುವ ದೂತಾವಾಸಗಳ ಟ್ವಿಟರ್ ಅಕೌಂಟ್ಗಳ ಮೂಲಕ ‘ಮಿತ್ ಬಸ್ಟರ್’ (ಯಾವುದು ಸತ್ಯ) ಪೋಸ್ಟರ್ಗಳನ್ನು ಪೋಸ್ಟ್ ಮಾಡುತ್ತಿದೆ.
ಟ್ರುಡೇ ಹೇಳಿಕೆ ಪ್ರಕಟವಾದ ಕೆಲವೇ ಗಂಟೆಗಳ ನಂತರ ಕೆನಡಾದ ಭಾರತೀಯ ದೂತವಾಸ ಕಚೇರಿ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಈ ಕಾಯ್ದೆಗಳ ಅತಿಮುಖ್ಯ ಅಂಶಗಳು ಮತ್ತು ಅವುಗಳ ಬಗ್ಗೆ ಜನಜನಿತವಾಗಿರುವ ತಪ್ಪು ಕಲ್ಪನೆಗಳ ಬಗ್ಗೆ ಗಮನ ಸೆಳೆಯುವ ಪೋಸ್ಟರ್ಗಳನ್ನು ಟ್ವೀಟ್ ಮಾಡಿತು.
ಈ ಕಾಯ್ದೆಗಳು ಜಾರಿಯಾದ ನಂತರ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಸರ್ಕಾರ ಹಿಂಪಡೆಯುವುದಿಲ್ಲ. ಬೆಂಬಲ ಬೆಲೆ ವ್ಯವಸ್ಥೆ ಯಥಾಸ್ಥಿತಿಯಲ್ಲಿ ಮುಂದುವರಿಯುತ್ತದೆ ಎಂದು ಭಾರತ ಸರ್ಕಾರದ ಟ್ವಿಟರ್ ಖಾತೆ @MyGovIndia ಸ್ಪಷ್ಟಪಡಿಸಿತು.
ಪಂಜಾಬ್ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಬೆಂಬಲ ಬೆಲೆ ವಿಚಾರವೇ ಪ್ರಧಾನವಾಗಿ ಚರ್ಚೆಗೆ ಬರುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.
ಫ್ರಾನ್ಸ್ ಮತ್ತು ಚೀನಾಗಳ ಭಾರತೀಯ ದೂತವಾಸ ಕಚೇರಿಗಳೂ ಇಂಥ ‘ಮಿತ್ ಬಸ್ಟರ್’ ಪೋಸ್ಟರ್ಗಳನ್ನು ಟ್ವೀಟ್ ಮಾಡಿ, ಆ ದೇಶಗಳ ಜನರಲ್ಲಿ ಕೃಷಿ ಕಾಯ್ದೆಗಳ ಬಗ್ಗೆ ಸರಿಯಾದ ಚಿತ್ರಣ ನೀಡಲು ಯತ್ನಿಸಿದವು.
#MythBusters: Busting the myths about the new Agricultural Reforms!
Mandis will NOT end, the market system will continue as before. #AatmaNirbharKrishi #MSPHaiAurRahega pic.twitter.com/1a9FnibtYb— MyGovIndia (@mygovindia) December 1, 2020
#MythBusters: Busting the myths about the new Agricultural Reforms! @MEAIndia @IndianDiplomacy @JawedAshraf5 pic.twitter.com/4y4NHH8deA
— India in France (@Indian_Embassy) December 1, 2020
#MythBusters https://t.co/x8CO54GW6j
— India in China (@EOIBeijing) December 2, 2020
ಯಾವ ಕಾಯ್ದೆಗಳು? ಏನು ವಿವಾದ?
ಕೃಷಿ ಕ್ಷೇತ್ರವನ್ನು ಸುಧಾರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಕರ್ಯ) ಕಾಯ್ದೆ’, (Farmer’s Produce Trade and Commerce (Promotion and Facilitation) Bill), ‘ಬೆಲೆ ಒಪ್ಪಂದ ಮತ್ತು ಕೃಷಿ ಸೇವಾ ಕಾಯ್ದೆ’ (The Farmer (Empowerment and Protection) Agreement of Price Assurance and Farm Services Bill), ‘ಅತ್ಯಗತ್ಯ ವಸ್ತುಗಳ (ತಿದ್ದುಪಡಿ) ಕಾಯ್ದೆ’ (The Essential Commodities (Amendment) Bill) ರೈತರ ಹಿತವನ್ನು ಬಲಿಕೊಡುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ಈ ಕಾಯ್ದೆಗಳನ್ನು ಹಿಂಪಡೆಯಬೇಕು, ಅಗತ್ಯ ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಹಿರಿಯ ನಾಯಕರು ಈ ಕಾಯ್ದೆಗಳನ್ನು ಸಮರ್ಥಿಸಿಕೊಂಡಿದ್ದಾರೆ.
ರೈತರ ಉಗ್ರ ಹೋರಾಟ ನಡುವೆ ಕೃಷಿ ಕಾಯ್ದೆಯನ್ನು ಸಮರ್ಥಿಸಿಕೊಂಡ ಪ್ರಧಾನಿ ಮೋದಿ
ಇನ್ನಷ್ಟು…
ಪಂಜಾಬ್ ರೈತರಿಂದ ದೆಹಲಿ ಚಲೊ: ಇಲ್ಲಿವೆ ಕುಗ್ಗದ-ಜಗ್ಗದ ರೈತನ ದಾರುಣ ಚಿತ್ರಣಗಳು
ನಾನು ದೆಹಲಿಗೂ ಹೋಗಬಲ್ಲೆ: ಕಂಗನಾ ಲೇವಡಿಗೆ 73ರ ಹರೆಯದ ಹೋರಾಟಗಾರ್ತಿಯ ತಿರುಗೇಟು
ದೆಹಲಿಯಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿ: ಕುಮಾರಸ್ವಾಮಿ ಸರಣಿ ಟ್ವೀಟ್