ತ್ರಿಶೂಲ್ ಪರ್ವತದ ಬಳಿ ಹಿಮಪಾತದಲ್ಲಿ ಸಿಲುಕಿ ನಾಪತ್ತೆಯಾದ ಐವರು ನೌಕಾಪಡೆ ಸಿಬ್ಬಂದಿ; ರಕ್ಷಣಾ ಕಾರ್ಯಾಚರಣೆ
ಈ ಬಗ್ಗೆ ಭಾರತೀಯ ನೌಕಾಪಡೆ ಪ್ರಕಟಣೆ ಹೊರಡಿಸಿದೆ. 20 ನೌಕಾಪಡೆ ಸಿಬ್ಬಂದಿಯನ್ನೊಳಗೊಂಡ ಪರ್ವತಾರೋಹಿಗಳ ತಂಡ, ಸೆಪ್ಟೆಂಬರ್ 3ರಂದು ಮುಂಬೈನಿಂದ ದಂಡಯಾತ್ರೆ ಶುರು ಮಾಡಿತ್ತು ಎಂದಿದೆ.
ಡೆಹ್ರಾಡೂನ್: ಭಾರತ ನೌಕಾಪಡೆಯ ಪರ್ವತಾರೋಹಿಗಳ ತಂಡವೊಂದು ಉತ್ತರಾಖಂಡ್ನ ತ್ರಿಶೂಲ್ ಪರ್ವತದ ತುತ್ತತುದಿಯಲ್ಲಿ, ಹಿಮಪಾತ (Avalanche)ದಲ್ಲಿ ಸಿಲುಕಿದೆ. ಒಟ್ಟು 10 ಮಂದಿ ನೌಕಾಪಡೆ ಸಿಬ್ಬಂದಿ ಹಿಮಪಾತದಲ್ಲಿ ಸಿಲುಕಿ ಅಪಾಯಕ್ಕೀಡಾಗಿದ್ದರು. ಅವರಲ್ಲಿ ಈಗ ಐವರನ್ನು ರಕ್ಷಿಸಲಾಗಿದೆ. ಉಳಿದ ಐವರಿಗಾಗಿ ಹುಡುಕಾಟ ಮುಂದುವರಿದಿದೆ. ಕಾಣೆಯಾಗಿರುವ ಐವರು ನೌಕಾದಳದ ಸಿಬ್ಬಂದಿಯನ್ನು ಹುಡುಕಿ, ರಕ್ಷಣೆ ಮಾಡಲು ಎಸ್ಡಿಆರ್ಎಫ್ ಮತ್ತು ಮೂರೂ ಸಶಸ್ತ್ರಪಡೆಗಳ ಸೈನಿಕರನ್ನು ನಿಯೋಜಿಸಲಾಗಿದೆ.
ಈ ಬಗ್ಗೆ ಭಾರತೀಯ ನೌಕಾಪಡೆ ಪ್ರಕಟಣೆ ಹೊರಡಿಸಿದೆ. 20 ನೌಕಾಪಡೆ ಸಿಬ್ಬಂದಿಯನ್ನೊಳಗೊಂಡ ಪರ್ವತಾರೋಹಿಗಳ ತಂಡ, ಸೆಪ್ಟೆಂಬರ್ 3ರಂದು ಮುಂಬೈನಿಂದ ದಂಡಯಾತ್ರೆ ಶುರು ಮಾಡಿತ್ತು. ಇಂದು 10 ಜನರ ತಂಡ ಬೆಳಗ್ಗೆಯಿಂದಲೇ ತ್ರಿಶೂಲ್ ಪರ್ವತ ಹತ್ತಲು ಪ್ರಾರಂಭಿಸಿತ್ತು. ಆದರೆ ಪರ್ವತ ಏರಲು ಶುರುಮಾಡಿದ ಕೆಲವೇ ಕ್ಷಣದಲ್ಲಿ ಹಿಮಪಾತ ಆಗಿದೆ. ಆ ಪ್ರವಾಹದಲ್ಲಿ ನೌಕಾಪಡೆ ಸಿಬ್ಬಂದಿ ಸಿಲುಕಿದ್ದಾರೆ ಎಂದು ತಿಳಿಸಿದೆ. ಹಾಗೇ, 10 ಮಂದಿಯಲ್ಲಿ ಐವರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಉಳಿದ ಐವರಿಗಾಗಿ ಹುಡುಕಾಟ ಮುಂದುವರಿದಿದೆ ಎಂದು ನೇವಿ ದೃಢಪಡಿಸಿದೆ.
ಸ್ಥಳಕ್ಕೆ ಈಗ ಭಾರತೀಯ ವಾಯುಸೇನೆಯ ಹೆಲಿಕ್ಯಾಪ್ಟರ್ ತೆರಳಿದೆ. ಭಾರತೀಯ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯ ಯೋಧರು ಹೋಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇವರ ಜತೆಗೆ ಉತ್ತರಾಖಂಡ್ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಕೂಡ ಕೈಜೋಡಿಸಿದೆ ಎಂದು ನೇವಿ ಹೇಳಿದೆ.
#IndianNavy mountaineering expedition to Mt Trishul, Uttarakhand caught in an avalanche near the summit today. All out efforts for Search and Rescue (SAR) being progressed by the ground team and helicopters from #IndianArmy, #IndianAirForce & State Disaster Response Force (1/2).
— SpokespersonNavy (@indiannavy) October 1, 2021
The 20 member expedition was flagged off from Mumbai on 03 Sep 21. Ten climbers had started their climb to the summit this morning, but were caught in an avalanche short of the summit. While 5 of the 10 are safe SAR for remaining 5 is in progress (2/2).
— SpokespersonNavy (@indiannavy) October 1, 2021
ಇದನ್ನೂ ಓದಿ: ವೃದ್ಧಾಶ್ರಮಗಳಿಗೆ ಒದಗಿಸುವ ಅನುದಾನ 25 ಲಕ್ಷದಿಂದ 40 ಲಕ್ಷಕ್ಕೆ ಹೆಚ್ಚಳ: ಸಿಎಂ ಬೊಮ್ಮಾಯಿ ಘೋಷಣೆ
ಭಾರತದ ಕೊವಿಶೀಲ್ಡ್ ಕೊರೊನಾ ಲಸಿಕೆಗೆ ಮಾನ್ಯತೆ ನೀಡಿದ ಆಸ್ಟ್ರೇಲಿಯಾ ಸರ್ಕಾರ