ದೆಹಲಿ: ಭಾರತೀಯ ನೌಕಾಪಡೆ 2,500 ನಾವಿಕರ ನೇಮಕಾತಿಗೆ ನೋಂದಣಿ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ . ಅರ್ಜಿ ನಮೂನೆಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್ಸೈಟ್ನಲ್ಲಿ joinindiannavya.gov.in ಲಭ್ಯವಿರುತ್ತದೆ. ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ ಮೇ 5.
ಈ ನೇಮಕಾತಿಯಲ್ಲಿ ಖಾಲಿ ಇರುವ 2,500 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಅವಿವಾಹಿತ ಪುರುಷರಿಂದ ಆನ್ಲೈನ್ ಮೂಲಕ ಪ್ರಸ್ತುತ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ‘ಆರ್ಟಿಫಿಸರ್ ಅಪ್ರೆಂಟಿಸ್ (ಎಎ) ಮತ್ತು ಸೀನಿಯರ್ ಸೆಕೆಂಡರಿ ನೇಮಕಾತಿ (ಎಸ್ಎಸ್ಆರ್)ಗೆ ನಾವಿಕನಾಗಿ ಕ್ರಮವಾಗಿ 500 ಮತ್ತು 2,000 ಖಾಲಿ ಹುದ್ದೆಗಳಿಗೆ ಭಾರತ ಸರ್ಕಾರವು ನಿಗದಿಪಡಿಸಿದ ರಾಷ್ಟ್ರೀಯತೆಯ ಷರತ್ತುಗಳನ್ನು ಪೂರೈಸುವ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಭಾರತೀಯ ನೌಕಾಪಡೆ ಹೇಳಿದೆ.
ಆರ್ಟಿಫಿಸರ್ ಅಪ್ರೆಂಟಿಸ್ ಉಗಿ ಚಾಲಿತ ಯಂತ್ರೋಪಕರಣಗಳು, ಡೀಸೆಲ್ ಮತ್ತು ಅನಿಲ ಟರ್ಬೈನ್ಗಳು ಮಾರ್ಗದರ್ಶಿ ಕ್ಷಿಪಣಿಗಳು ಮತ್ತು ಇತರ ಸ್ವಯಂಚಾಲಿತವಾಗಿ ನಿಯಂತ್ರಿತ ಆಯುಧಗಳು, ಸಂವೇದಕಗಳು, ವೈಮಾನಿಕ ಉಪಕರಣಗಳು, ಕಂಪ್ಯೂಟರ್ಗಳು ಮತ್ತು ಹೆಚ್ಚು ಸುಧಾರಿತ ರೇಡಿಯೋ ಮತ್ತು ವಿದ್ಯುತ್ ಶಕ್ತಿ ವ್ಯವಸ್ಥೆಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಐಎನ್ಎಸ್ ಚಿಲ್ಕಾದಲ್ಲಿ 9 ವಾರ ಪ್ರಾಥಮಿಕ ತರಬೇತಿ ಮತ್ತು ನಿಯೋಜಿತ ನೌಕಾ ತರಬೇತಿ ಕೇಂದ್ರಗಳಲ್ಲಿ ವೃತ್ತಿಪರ ತರಬೇತಿ ನೀಡಲಾಗುವುದು.
ಎಸ್ಎಸ್ಆರ್ನ ಕೆಲಸವು, ರಾಡರ್ಗಳು- ಸೋನಾರ್ಗಳು ಅಥವಾ ಸಂವಹನ ಅಥವಾ ಕ್ಷಿಪಣಿಗಳು, ಬಂದೂಕುಗಳು, ರಾಕೆಟ್ಗಳಂತಹ ಶಸ್ತ್ರಾಸ್ತ್ರಗಳ ಗುಂಡಿನಂತಹ ವಿವಿಧ ಸಾಧನಗಳ ಕಾರ್ಯಾಚರಣೆ ಆಗಿರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಐಎನ್ಎಸ್ ಚಿಲ್ಕಾದಲ್ಲಿ 22 ವಾರ ಪ್ರಾಥಮಿಕ ತರಬೇತಿ ಮತ್ತು ನಿಯೋಜಿತ ನೌಕಾ ತರಬೇತಿ ಕೇಂದ್ರಗಳಲ್ಲಿ ವೃತ್ತಿಪರ ತರಬೇತಿ ನೀಡಲಾಗುವುದು.
ಗಣಿತ, ಭಾತಶಾಸ್ತ್ರ ಮತ್ತು ರಸಾಯನ ಶಾಸ್ತ್ರ, ಜೀವಶಾಸ್ತ್ರ, ಕಂಪ್ಯೂಟರ್ ವಿಜ್ಞಾನ ಇತರೆ ಯಾವುದೇ ವಿಷಯಗಳೊಂದಿಗೆ ಒಟ್ಟುಶೇ.60ರಷ್ಟು ಹೆಚ್ಚಿನ ಅಂಕಗಳೊಂದಿಗೆ 10+2 ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯ ವಯಸ್ಸು 17 ರಿಂದ 20ರ ನಡುವೆ ಇರಬೇಕು.
ಇದನ್ನೂ ಓದಿ: Explainer | ನೌಕಾಪಡೆ ದಿನ Indian Navy Day 2020 ಕರಾಚಿ ಬಂದರು ಮೇಲೆ ಭಾರತೀಯ ಯೋಧರ ಪಾರಮ್ಯದ ನೆನಪು