ಫೇಸ್​ಬುಕ್ ಇಂಡಿಯಾದ ಒಬ್ಬ ಮುಖ್ಯಸ್ಥೆ ಮೋದಿ ಪರ ಪೋಸ್ಟ್ ಮಾಡುತ್ತಿದ್ದಾರಂತೆ: ವರದಿ

|

Updated on: Sep 01, 2020 | 6:44 PM

ಫೇಸ್​ಬುಕ್ ಭಾರತೀಯ ಅವೃತ್ತಿಯ ಕಾರ್ಯನಿರ್ವಾಹಕ ಅಧಿಕಾರಿಗಳಲ್ಲೊಬ್ಬರಾಗಿರುವ ಆಂಖಿ ದಾಸ್, ಈ ಪ್ಲಾಟ್​ಫಾರ್ಮ್​ನ ಆಂತರಿಕ ಗುಂಪಿನಲ್ಲಿ ಬಿಜೆಪಿ ಪಕ್ಷಕ್ಕೆ ಬಹಿರಂಗವಾಗಿ ಬೆಂಬಲಿಸಿದರೆಂಬ ಆರೋಪಕ್ಕೆ ಗುರಿಯಾಗಿದ್ದಾರೆ. ಅಮೇರಿಕಾದ ವಾಲ್ ಸ್ಟ್ರೀಟ್ ಜರ್ನಲ್ ಪ್ರಕಾರ ದಾಸ್, ಹಿಂದುತ್ವವನ್ನು ಪ್ರತಿಪಾದಿಸುವವರ ದ್ವೇಷದ ಭಾಷಣಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ರವಿವಾರದಂದು ಪ್ರಕಟವಾಗಿರುವ ವರದಿಯಲ್ಲಿ ಆರೋಪಿಸಲಾಗಿದೆ. 2014 ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜಿಪಿ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಾಗ, ‘ಸಾಮಾಜಿಕ ಜಾಲತಾಣ ಮೂಲಕ ನಡೆದ ಚುನಾವಣಾ ಪ್ರಚಾರಕ್ಕೆ ನಾವು ಕಿಡಿ […]

ಫೇಸ್​ಬುಕ್ ಇಂಡಿಯಾದ ಒಬ್ಬ ಮುಖ್ಯಸ್ಥೆ ಮೋದಿ ಪರ ಪೋಸ್ಟ್ ಮಾಡುತ್ತಿದ್ದಾರಂತೆ: ವರದಿ
Follow us on

ಫೇಸ್​ಬುಕ್ ಭಾರತೀಯ ಅವೃತ್ತಿಯ ಕಾರ್ಯನಿರ್ವಾಹಕ ಅಧಿಕಾರಿಗಳಲ್ಲೊಬ್ಬರಾಗಿರುವ ಆಂಖಿ ದಾಸ್, ಈ ಪ್ಲಾಟ್​ಫಾರ್ಮ್​ನ ಆಂತರಿಕ ಗುಂಪಿನಲ್ಲಿ ಬಿಜೆಪಿ ಪಕ್ಷಕ್ಕೆ ಬಹಿರಂಗವಾಗಿ ಬೆಂಬಲಿಸಿದರೆಂಬ ಆರೋಪಕ್ಕೆ ಗುರಿಯಾಗಿದ್ದಾರೆ. ಅಮೇರಿಕಾದ ವಾಲ್ ಸ್ಟ್ರೀಟ್ ಜರ್ನಲ್ ಪ್ರಕಾರ ದಾಸ್, ಹಿಂದುತ್ವವನ್ನು ಪ್ರತಿಪಾದಿಸುವವರ ದ್ವೇಷದ ಭಾಷಣಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ರವಿವಾರದಂದು ಪ್ರಕಟವಾಗಿರುವ ವರದಿಯಲ್ಲಿ ಆರೋಪಿಸಲಾಗಿದೆ.

2014 ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜಿಪಿ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಾಗ, ‘ಸಾಮಾಜಿಕ ಜಾಲತಾಣ ಮೂಲಕ ನಡೆದ ಚುನಾವಣಾ ಪ್ರಚಾರಕ್ಕೆ ನಾವು ಕಿಡಿ ಹೊತ್ತಿಸಿದೆವು, ಉಳಿದದ್ದೆಲ್ಲ ಈಗ ಇತಿಹಾಸ’ ಎಂದು ಬರೆದಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

2012 ರಲ್ಲಿ ಗುಜರಾತ್ ವಿಧಾನ ಸಭೆ ಚುನಾವಣೆ ನಡೆಯುತ್ತಿದ್ದಾಗಲೂ ದಾಸ್, ಮೋದಿಯವರನ್ನು ಬೆಂಬಲಿಸಿ ಪೋಸ್ಟ್​ಗಳನ್ನು ಮಾಡಿದ್ದರಂತೆ. ಅಲ್ಲೂ ಬಿಜೆಪಿ ಜಯಭೇರಿ ಬಾರಿಸಿದಾಗ, ‘ಗುಜರಾತ್ ಚುನಾವಣೆಯಲ್ಲಿ ನಮ್ಮ ಯಶಸ್ಸು,’ ಎಂದು ಅವರು ಬರೆದುಕೊಂಡಿದ್ದರಂತೆ.

ಮೋದಿ ಅವರನ್ನು ಬೆಂಲಿಸಿ ದಾಸ್ ಅವರು ಮಾಡಿದ ಪೋಸ್ಟ್​ಗಳು ಫೇಸ್​ಬುಕ್ ತತ್ವಸಿದ್ಧಾಂತಗಳಿಗೆ ಮತ್ತು ನಿಲುವುಗಳಿಗೆ ವ್ಯತಿರಿಕ್ತವಾಗಿದೆ. ಚುನಾವಣೆಯ ಸಂದರ್ಭದಲ್ಲಿ ತಟಸ್ಥವಾಗಿರುವುದು ಈ ಪ್ಲಾಟ್​ಫಾರ್ಮ್​ನ ನಿಲುವಾಗಿದೆ. ಅದನ್ನು ದಾಸ್ ಉಲ್ಲಂಘಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ತಮ್ಮ ಒಂದು ಪೋಸ್ಟ್​ನಲ್ಲಿ ದಾಸ್, ಮೋದಿಯವರನ್ನು ‘ಭಾರತದ ಜಾರ್ಜ್ ಡಬ್ಲ್ಯೂ ಬುಷ್’ ಎಂದು ಬಣ್ಣಿಸಿದ್ದಾರೆ. ಇನ್ನೊಂದರಲ್ಲಿ ಅವರು ಭಾರತೀಯ ಮುಸ್ಲಿಮರನ್ನು, ‘ಅವನತಿ ಹೊಂದುತ್ತಿರುವ ಸಂತತಿ’ ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ, ಆಂಖಿ ದಾಸ್ ಸೇರಿದಂತೆ ಫೇಸ್​ಬುಕ್ ಇಂಡಿಯಾದ ಉನ್ನತಾಧಿಕಾರಿಗಳು ಭಾರತದಲ್ಲಿ ಸೃಷ್ಟಿಯಾಗುವ ಕಂಟೆಂಟನ್ನು ಹೇಗೆ ನಿಯಂತ್ರಿಸಲಾಗುತ್ತಿದೆ ಎಂಬ ವಿವರಣೆ ನೀಡಲು ಬುಧವಾರದಂದು, ಮಾಹಿತಿ ತಂತ್ರಜ್ಞಾನದ ಸಂಸದೀಯ ಸಮಿತಿ ಎದುರು ಹಾಜರಾಗಲಿದ್ದಾರೆ. ಕಾಂಗ್ರೆಸ್ ಸಂಸದ ಶಶಿ ತರೂರ್ ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ.