Video: ಮೆಕ್ಕೆಜೋಳದ ಕಾಳು ಬಿಡಿಸಲು ಈ ರೈತರು ಮಾಡಿದ ಐಡಿಯಾ ನೋಡಿ
ದೆಹಲಿ: ಪ್ರಧಾನಿ ಮೋದಿ ಘೋಷಿಸಿದ ಆತ್ಮನಿರ್ಭರ ಭಾರತ ಎಂಬ ಘೋಷವಾಕ್ಯ ದೇಶಾದ್ಯಂತ ಹಬ್ಬಿದೆ. ರೈತಾಪಿ ವರ್ಗದಿಂದ ಹಿಡಿದು ಉದ್ಯಮಿಗಳವರೆಗೆ ಎಲ್ಲರೂ ಈ ನಿಟ್ಟಿನಲ್ಲಿ ಶ್ರಮಿಸಲು ಮುಂದಾಗಿದ್ದಾರೆ. ಅಂದ ಹಾಗೆ, ಆತ್ಮನಿರ್ಭರರಾಗಲು ನೀವು ಹೊಸದಾದ ಆವಿಷ್ಕಾರ, ಮಹತ್ತರವಾದ ಅನ್ವೇಷಣೆ ಅಥವಾ ಸುದೀರ್ಘ ಸಂಶೋಧನೆ ನಡೆಸುವ ಅಗತ್ಯವಿಲ್ಲ. ಇರುವುದರಲ್ಲೇ ಏನಾದರೂ ವಿಭಿನ್ನವಾಗಿ ಸಾಧಿಸುವುದು ಸಹ ಆತ್ಮನಿರ್ಭರತೆಗೆ ಪುಷ್ಟಿ ನೀಡುತ್ತದೆ. ಅಂತೆಯೇ, ಈ ರೈತರು ತಾವು ಬೆಳೆಸಿದ ಮೆಕ್ಕೆಜೋಳದ ಕಾಳುಗಳನ್ನ ತಮ್ಮ ಕೈಯಿಂದ ಒಂದೊಂದೇ ಬಿಡಿಸುವ ಬದಲು ಈ ವಿನೂತನ ಐಡಿಯಾಗೆ […]
ದೆಹಲಿ: ಪ್ರಧಾನಿ ಮೋದಿ ಘೋಷಿಸಿದ ಆತ್ಮನಿರ್ಭರ ಭಾರತ ಎಂಬ ಘೋಷವಾಕ್ಯ ದೇಶಾದ್ಯಂತ ಹಬ್ಬಿದೆ. ರೈತಾಪಿ ವರ್ಗದಿಂದ ಹಿಡಿದು ಉದ್ಯಮಿಗಳವರೆಗೆ ಎಲ್ಲರೂ ಈ ನಿಟ್ಟಿನಲ್ಲಿ ಶ್ರಮಿಸಲು ಮುಂದಾಗಿದ್ದಾರೆ.
ಅಂದ ಹಾಗೆ, ಆತ್ಮನಿರ್ಭರರಾಗಲು ನೀವು ಹೊಸದಾದ ಆವಿಷ್ಕಾರ, ಮಹತ್ತರವಾದ ಅನ್ವೇಷಣೆ ಅಥವಾ ಸುದೀರ್ಘ ಸಂಶೋಧನೆ ನಡೆಸುವ ಅಗತ್ಯವಿಲ್ಲ. ಇರುವುದರಲ್ಲೇ ಏನಾದರೂ ವಿಭಿನ್ನವಾಗಿ ಸಾಧಿಸುವುದು ಸಹ ಆತ್ಮನಿರ್ಭರತೆಗೆ ಪುಷ್ಟಿ ನೀಡುತ್ತದೆ.
ಅಂತೆಯೇ, ಈ ರೈತರು ತಾವು ಬೆಳೆಸಿದ ಮೆಕ್ಕೆಜೋಳದ ಕಾಳುಗಳನ್ನ ತಮ್ಮ ಕೈಯಿಂದ ಒಂದೊಂದೇ ಬಿಡಿಸುವ ಬದಲು ಈ ವಿನೂತನ ಐಡಿಯಾಗೆ ಮುಂದಾಗಿದ್ದಾರೆ. ತಮ್ಮ ಬಳಿಯಿರುವ ಬೈಕ್ನ ಹಿಂದಿನ ಚಕ್ರದ ಸಹಾಯದಿಂದ ಮೆಕ್ಕೆಜೋಳದ ಕಾಳುಗಳನ್ನ ಬಿಡಿಸುತ್ತಿದ್ದಾರೆ. ಇದರಿಂದ ಹತ್ತಾರು ಗಂಟೆಗಳ ಕಾಲಾವಧಿ ತೆಗೆದುಕೊಳ್ಳುತ್ತಿದ್ದ ಕಾರ್ಯ ಇದೀಗ ನಿಮಿಷಮಾತ್ರದಲ್ಲಿ ಖತಂ!
ಅಂದ ಹಾಗೆ, ಈ ವಿಡಿಯೋವನ್ನ ದೇಶದ ಪ್ರತಿಷ್ಠಿತ ವಾಹನ ತಯಾರಿಕಾ ಸಂಸ್ಥೆ ಮಹಿಂದ್ರಾದ ಮುಖ್ಯಸ್ಥ ಆನಂದ್ ಮಹಿಂದ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
I constantly receive clips showing how creatively our farming communities turn bikes & tractor into multi-tasking machines. Here’s one application I never would have dreamed of. Maybe @continentaltire should have a special brand named ‘Corntinental?’ pic.twitter.com/rMj6rowA3L
— anand mahindra (@anandmahindra) August 27, 2020
Published On - 7:26 pm, Tue, 1 September 20