ಸಿಬ್ಬಂದಿ ಕೆಟ್ಟದಾಗಿ ವರ್ತಿಸಿದರು, ಪ್ಯಾರಾ ಅಥ್ಲೀಟ್ ಸುವರ್ಣ ರಾಜ್ ಆರೋಪ; ಕ್ಷಮೆಯಾಚಿಸಿದ ಇಂಡಿಗೋ

|

Updated on: Feb 03, 2024 | 7:36 PM

₹ 3 ಲಕ್ಷ ವೆಚ್ಚದ ವೈಯಕ್ತಿಕ ಗಾಲಿಕುರ್ಚಿಯನ್ನು ಏರ್‌ಲೈನ್ ಸಿಬ್ಬಂದಿ ಹಾನಿಗೊಳಿಸಿದ್ದಾರೆ ಎಂದು ಸುವರ್ಣ ರಾಜ್ ಆರೋಪಿಸಿದ್ದಾರೆ. “ನನ್ನ ಗಾಲಿಕುರ್ಚಿ ಹಾಳಾಗಿದೆ. ನನಗೆ ₹3 ಲಕ್ಷ ಖರ್ಚಾಗಿದೆ. ಇಂಡಿಗೋ ನನ್ನ ಗಾಲಿಕುರ್ಚಿಗೆ ಹಾನಿಯನ್ನು ಪಾವತಿಸಬೇಕು. ಅದನ್ನು ಅದರ ಹಳೆಯ ಸ್ಥಿತಿಗೆ ಮರುಸ್ಥಾಪಿಸಲು ನಾನು ಬಯಸುತ್ತೇನೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸಿಬ್ಬಂದಿ ಕೆಟ್ಟದಾಗಿ ವರ್ತಿಸಿದರು, ಪ್ಯಾರಾ ಅಥ್ಲೀಟ್ ಸುವರ್ಣ ರಾಜ್ ಆರೋಪ; ಕ್ಷಮೆಯಾಚಿಸಿದ ಇಂಡಿಗೋ
ಸುವರ್ಣ ರಾಜ್
Follow us on

ದೆಹಲಿ ಫೆಬ್ರುವರಿ 03: ದೆಹಲಿಯಿಂದ ಚೆನ್ನೈಗೆ ತೆರಳುತ್ತಿದ್ದ  ಇಂಡಿಗೋ (Indiago) ವಿಮಾನದಲ್ಲಿ ಸಿಬ್ಬಂದಿ ತನ್ನ ಜತೆ ಕೆಟ್ಟದಾಗಿ ವರ್ತಿಸಿದರು ಎಂದು ಭಾರತದ ಪ್ಯಾರಾ ಅಥ್ಲೀಟ್ ಸುವರ್ಣ ರಾಜ್ (Suvarna Raj) ಆರೋಪಿಸಿದ್ದಾರೆ. ವಿಮಾನದ ಬಾಗಿಲಲ್ಲಿ ನನ್ನ ವೈಯಕ್ತಿಕ ಗಾಲಿಕುರ್ಚಿ ಬೇಕು ಎಂದು ನಾನು ಅವರಿಗೆ 10 ಬಾರಿ ಹೇಳಿದ್ದೇನೆ, ಆದರೆ ನೀವು ಅವರಿಗೆ ಎಷ್ಟು ಬಾರಿ ಹೇಳಿದರೂ ಅವರು ಕೇಳುವುದಿಲ್ಲ ಎಂದಿದ್ದಾರೆ. ಇಂಡಿಗೋ ವಿಮಾನಯಾನ ಸಂಸ್ಥೆಯು ತನ್ನ ಪ್ರಯಾಣಿಕರ ಅಗತ್ಯತೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂಬ ಆರೋಪದ ನಡುವೆ ಪ್ರಸ್ತುತ ವಿಮಾನಯಾನ ಸಂಸ್ಥೆ ಶನಿವಾರ ಕ್ಷಮೆಯಾಚನೆಯ ಹೇಳಿಕೆಯನ್ನು ನೀಡಿದೆ.

ಈ ಬಗ್ಗೆ ಅಧಿಕೃತ ಹೇಳಿಕೆಯಲ್ಲಿ, ಎಲ್ಲರನ್ನೂ ಒಳಗೊಳ್ಳುವ ವಿಮಾನಯಾನ ಸಂಸ್ಥೆಯಾಗಲು ನಾವು ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ ಮತ್ತು ಈ ವಿಷಯವನ್ನು ತ್ವರಿತವಾಗಿ ಪರಿಹರಿಸಲು ಸಿದ್ಧರಾಗಿದ್ದೇವೆ. ಸುವರ್ಣ ರಾಜ್ ಅವರೊಂದಿಗೆ ಸಂಪರ್ಕದಲ್ಲಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದ್ದೇವೆ. ಗ್ರಾಹಕರ ಅನುಭವದ ಉನ್ನತ ಗುಣಮಟ್ಟವನ್ನು ಎತ್ತಿಹಿಡಿಯಲು ಬದ್ಧ. ಸುವರ್ಣ ರಾಜ್‌ಗೆ ಉಂಟಾದ ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ ಎಂದು ಇಂಡಿಗೋ ಹೇಳಿದೆ.

₹ 3 ಲಕ್ಷ ವೆಚ್ಚದ ವೈಯಕ್ತಿಕ ಗಾಲಿಕುರ್ಚಿಯನ್ನು ಏರ್‌ಲೈನ್ ಸಿಬ್ಬಂದಿ ಹಾನಿಗೊಳಿಸಿದ್ದಾರೆ ಎಂದು ರಾಜ್ ಆರೋಪಿಸಿದ್ದಾರೆ. “ನನ್ನ ಗಾಲಿಕುರ್ಚಿ ಹಾಳಾಗಿದೆ. ನನಗೆ ₹3 ಲಕ್ಷ ಖರ್ಚಾಗಿದೆ. ಇಂಡಿಗೋ ನನ್ನ ಗಾಲಿಕುರ್ಚಿಗೆ ಹಾನಿಯನ್ನು ಪಾವತಿಸಬೇಕು. ಅದನ್ನು ಅದರ ಹಳೆಯ ಸ್ಥಿತಿಗೆ ಮರುಸ್ಥಾಪಿಸಲು ನಾನು ಬಯಸುತ್ತೇನೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.


ತನ್ನ ಅಸಾಮರ್ಥ್ಯದ ಹೊರತಾಗಿಯೂ ಗಾಲಿಕುರ್ಚಿಯಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಮಹಿಳೆಯನ್ನು ಕೆಟ್ಟದಾಗಿ ನಡೆಸಿಕೊಂಡ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಸುವರ್ಣ ರಾಜ್, ” ಹಿಂದಿನ ದಿನ, ಭದ್ರತಾ ಸಿಬ್ಬಂದಿಯೊಬ್ಬರು ಗಾಲಿಕುರ್ಚಿಯಲ್ಲಿದ್ದ ನನ್ನ ಸ್ನೇಹಿತೆಯನ್ನು ತಪಾಸಣೆಗಾಗಿ ಕುರ್ಚಿಯಿಂದ ಏಳುವಂತೆ ಕೇಳಿದರು. ಅವಳನ್ನು ಒಮ್ಮೆ ಅಲ್ಲ ಮೂರು ಬಾರಿ ನಿಲ್ಲುವಂತೆ ಕೇಳಲಾಯಿತು. ನನ್ನ ಸ್ನೇಹಿತೆ ಸಾಧ್ಯವಿಲ್ಲ ಎಂದು ಹೇಳಿದಳು. ಆದರೆ ಸಿಬ್ಬಂದಿ ‘ನೀವು ಎದ್ದು ನಿಲ್ಲಬಹುದು’ ಎಂದು ಹೇಳುತ್ತಲೇ ಇದ್ದರು. ಜನರ ಸೂಕ್ಷ್ಮತೆ ಎಲ್ಲಿ ಹೋಯಿತು? ಎಂದು ಕೇಳಿದ್ದಾರೆ.

ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಅಂಗವಿಕಲ ಮಹಿಳೆಯನ್ನು ‘ಎದ್ದು ನಿಲ್ಲುವಂತೆ’ ಕೇಳಿದ ಘಟನೆ ನಡೆದಿತ್ತು.  ತನ್ನ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದ ಅರುಷಿ ಸಿಂಗ್, ಭದ್ರತಾ ಕ್ಲಿಯರೆನ್ಸ್ ಸಮಯದಲ್ಲಿ ಮೂರು ಬಾರಿ ಎದ್ದು ನಿಲ್ಲುವಂತೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿ ಕೇಳಿದ್ದಾರೆ ಎಂದು ಹೇಳಿದರು.

“ನಿನ್ನೆ ಸಂಜೆ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಭದ್ರತಾ ಕ್ಲಿಯರೆನ್ಸ್ ಸಮಯದಲ್ಲಿ, ಅಧಿಕಾರಿ ನನ್ನನ್ನು (ಗಾಲಿಕುರ್ಚಿಯಿದ್ದರೂ) ಒಮ್ಮೆ ಅಲ್ಲ ಮೂರು ಬಾರಿ ಎದ್ದು ನಿಲ್ಲುವಂತೆ ಹೇಳಿದರು” ಎಂದು ಅವರು ಫೆಬ್ರವರಿ 1 ರಂದು ಎಕ್ಸ್ ನಲ್ಲಿ ಬರೆದಿದ್ದಾರೆ.

“ಮೊದಲು ಅವಳು ನನ್ನನ್ನು ಎದ್ದು ಕಿಯೋಕ್ಸ್​​​ಗೆ ಎರಡು ಹೆಜ್ಜೆ ನಡೆಯಲು ಹೇಳಿದಳು. ನನಗೆ ಅಂಗವೈಕಲ್ಯವಿರುವುದರಿಂದ ನನಗೆ ಸಾಧ್ಯವಿಲ್ಲ ಎಂದು ಅವಳಿಗೆ ಹೇಳಿದೆ. ಒಳಗೆ ಅವಳು ಮತ್ತೆ ನನ್ನನ್ನು ನಿಲ್ಲುವಂತೆ ಕೇಳಿದಳು. ನಾನು ಸಾಧ್ಯವಿಲ್ಲ ಎಂದು ಹೇಳಿದೆ. ಅವಳು ಎರಡೇ ಎರಡು ನಿಮಿಷ ಎದ್ದು ನಿಲ್ಲಿ ಎಂದು ಹೇಳಿದಳು. ನಾನು ಹುಟ್ಟಿನಿಂದಲೇ ಅಂಗವೈಕಲ್ಯ ಹೊಂದಿದ್ದೇನೆ ಎಂದು ಮತ್ತೊಮ್ಮೆ ವಿವರಿಸಿದೆ” ಎಂದು ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಇಂಡಿಗೋ ಪೈಲಟ್ ಮೇಲೆ ಪ್ರಯಾಣಿಕನಿಂದ ಹಲ್ಲೆ; ಅಶಿಸ್ತಿನ ವರ್ತನೆ ಸಹಿಸುವುದಿಲ್ಲ ಎಂದ ಜ್ಯೋತಿರಾದಿತ್ಯ ಸಿಂಧಿಯಾ

ಇಂಡಿಗೋ ತನ್ನ ಸೇವೆಗಳಿಗಾಗಿ ಈ ಹಿಂದೆ ಹಲವಾರು ಬಾರಿ ಪ್ರಯಾಣಿಕರಿಂದ ಟೀಕೆಗೊಳಗಾಗಿದೆ. ಪ್ರಯಾಣಿಕನೊಬ್ಬರು ತನ್ನ ಸ್ಯಾಂಡ್‌ವಿಚ್‌ನಲ್ಲಿ ಜೀವಂತ ಹುಳುವನ್ನು ಕಂಡುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದರು ಮತ್ತೊಂದು ಘಟನೆಯಲ್ಲಿ, ವಿಮಾನಯಾನ ಸಂಸ್ಥೆಯು ಟೇಕ್ ಆಫ್‌ನಲ್ಲಿ ವಿಳಂಬ ಮಾಡಿದ್ದಕ್ಕೆ ಟೀಕೆಗೊಳಗಾಯಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:34 pm, Sat, 3 February 24