ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 2023ರ ಜೂನ್‌ನಲ್ಲಿ ಚಂದ್ರಯಾನ-3 ಉಡಾವಣೆ ಮಾಡಲು ಯೋಜನೆ ರೂಪಿಸಿದೆ. ಅಬಾರ್ಟ್ ಮಿಷನ್ ಯಶಸ್ವಿಯಾಗಿ ನಡೆಸಿದ ಬಳಿಕ 2024 ರ ಕೊನೆಯ ವೇಳೆಗೆ ಭಾರತೀಯ ಗಗನಯಾತ್ರಿಗಳನ್ನು ಕಕ್ಷೆಗೆ ಹಾರಿಸಲು ಇಸ್ರೋ ಯೋಜಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಚಂದ್ರಯಾನ-3 ಸಿದ್ಧವಾಗಿದೆ, ಇದು ಚಂದ್ರಯಾನ-2 ಪ್ರತಿರೂಪವಂತೂ ಅಲ್ಲವೇ ಅಲ್ಲ, ಇದರಲ್ಲಿ ಸಾಕಷ್ಟು ಬದಲಾವಣೆಗಳಿವೆ, ಇದರ ಎಂಜಿನಿಯರಿಂಗ್ ಗಮನಾರ್ಹವಾಗಿ ವಿಭಿನ್ನವಾಗಿದೆ. ಕಳೆದ ಬಾರಿಯಂತೆ ಯಾವುದೇ ಸಮಸ್ಯೆಯಾಗದಂತೆ ನಾವು ಅದನ್ನು ಹೆಚ್ಚು ಸದೃಢಗೊಳಿಸಿದ್ದೇವೆ ಎಂದು ಎಸ್. ಸೋಮನಾಥ್ ಹೇಳಿದ್ದಾರೆ.
2019ರಲ್ಲಿ ಕೈಗೊಳ್ಳಲಾಗಿದ್ದ ಚಂದ್ರಯಾನ -2 ಕಾರ್ಯಾಚರಣೆಯಲ್ಲಿ ರೋವರ್ ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಕೊನೇ ಕ್ಷಣದಲ್ಲಿ ವಿಫಲವಾಗಿತ್ತು. ಚಂದ್ರಯಾನ 3 ಇದೀಗ ಸಜ್ಜಾಗಿದೆ. ಇದು ಭವಿಷ್ಯದ ಅಂತರ-ಗ್ರಹ ಪರಿಶೋಧನೆಗಳಿಗೆ ನಿರ್ಣಾಯಕವಾಗಿದೆ.
ಮುಂದಿನ ವರ್ಷದ ಆರಂಭದಲ್ಲಿ ದೇಶದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನ ಗಗನ ಯಾನಕ್ಕಾಗಿ ಅಬಾರ್ಟ್ ಮಿಷನ್ ನ ಮೊದಲ ಪರೀಕ್ಷಾರ್ಥ ಹಾರಾಟ ಮಾಡಲಾಗುತ್ತಿದೆ.
ಮುಂದಿನ ವರ್ಷ ಜೂನ್ ನಲ್ಲಿ ಮಾರ್ಕ್ -3 (ಎಲ್ ವಿಎಂ3) ಉಡಾವಣಾ ವಾಹಕದ ಮೂಲಕ ಚಂದ್ರಯಾನ-3 ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದು ಚಂದ್ರಯಾನ-2 ಪ್ರತಿರೂಪವಲ್ಲ, ರೋವರ್ ಇದೆ. ಎಂಜಿನಿಯರಿಂಗ್ ಗಮನಾರ್ಹವಾಗಿ ವಿಭಿನ್ನವಾಗಿದೆ. ಕಳೆದ ಬಾರಿಯಂತೆ ಸಮಸ್ಯೆಯಾಗದಂತೆ ಇನ್ನಷ್ಟು ಗಟ್ಟಿಗೊಳಿಸಿದ್ದೇವೆ ಎಂದು ಸೋಮನಾಥ್ ಹೇಳಿದರು. ಚಂದ್ರಯಾನ-2 ರ ಲ್ಯಾಂಡರ್ ಮತ್ತು ರೋವರ್ ಅಪಘಾತಕ್ಕೀಡಾಗಿದ್ದರೂ, ಆರ್ಬಿಟರ್ ಇನ್ನೂ ಚಂದ್ರನ ಮೇಲ್ಮೈ ಮೇಲೆಯೇ ಇದೆ ಮತ್ತು ಇಸ್ರೋ ಇದನ್ನು ಚಂದ್ರಯಾನ -3 ರೊಂದಿಗೆ ಬಳಸಲು ಯೋಜಿಸಿದೆ.
ಪ್ರಯಾಣಿಸಬೇಕಾದ ಎತ್ತರವನ್ನು ಲೆಕ್ಕಾಚಾರ ಮಾಡಲು, ಅಪಾಯ-ಮುಕ್ತ ಸ್ಥಳಗಳನ್ನು ಗುರುತಿಸಲು ಮತ್ತು ಉತ್ತಮ ಸಾಫ್ಟ್‌ವೇರ್ ಹೊಂದಲು ರೋವರ್ ಕೂ ವಿಭಿನ್ನ ವಿಧಾನಗಳನ್ನು ಹೊಂದಿರುತ್ತದೆ ಎಂದು ಇಸ್ರೋ ಮುಖ್ಯಸ್ಥರು ತಿಳಿಸಿದರು.
ಅನೇಕ ಬದಲಾವಣೆ ನಡೆದಿದೆ, ಇಂಪೆಕ್ಟ್ ಲೆಗ್ಗಳು ಬಲವಾಗಿರುತ್ತವೆ. ಇದು ಉತ್ತಮವಾದ ಉಪಕರಣವನ್ನು ಹೊಂದಿರುತ್ತದೆ. ಏನಾದರೂ ವಿಫಲವಾದಲ್ಲಿ, ಬೇರೆ ಯಾವುದನ್ನಾದರೂ ತೆಗೆದುಕೊಳ್ಳುತ್ತದೆ ಎಂದು ಅವರು ತಿಳಿಸಿದರು.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:14 am, Mon, 24 October 22