Isro Chief: ಚಂದ್ರಯಾನ್ 2 ರಾಕೆಟ್ ಲಾಂಚರ್ ಪ್ರಾಜೆಕ್ಟ್ ನಿರ್ವಹಿಸಿದ್ದ ಎಸ್ ಸೋಮನಾಥ್ ಇಸ್ರೊದ ಹೊಸ ಮುಖ್ಯಸ್ಥ

ಪ್ರಸ್ತುತ ಇಸ್ರೋ ಅಧ್ಯಕ್ಷರಾಗಿರುವ ಕೆ.ಶಿವನ್ ಅವರ ಸ್ಥಾನಕ್ಕೆ ಸೋಮನಾಥ್ ಬರಲಿದ್ದಾರೆ. ಅವರು ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ಜನವರಿ 22, 2018ರಿಂದ ಕಾರ್ಯನಿರ್ವಹಿಸುತ್ತಿದ್ದರು.

Isro Chief: ಚಂದ್ರಯಾನ್ 2 ರಾಕೆಟ್ ಲಾಂಚರ್ ಪ್ರಾಜೆಕ್ಟ್ ನಿರ್ವಹಿಸಿದ್ದ ಎಸ್ ಸೋಮನಾಥ್ ಇಸ್ರೊದ ಹೊಸ ಮುಖ್ಯಸ್ಥ
ಇಸ್ರೋ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಾಹ್ಯಾಕಾಶ ವಿಜ್ಞಾನಿ ಎಸ್.ಸೋಮನಾಥ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 12, 2022 | 9:33 PM

ದೆಹಲಿ: ಹಿರಿಯ ರಾಕೆಟ್ ವಿಜ್ಞಾನಿ ಎಸ್.ಸೋಮನಾಥ್ ಅವರನ್ನು ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (Indian Space & Research Organisation – Isro) ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಜಿಎಸ್​ಎಲ್​ವಿ ಮಾರ್ಕ್ 3 (GSLV Mk-III) ಲಾಂಚರ್ ರೂಪಿಸುವಲ್ಲಿ ಸೋಮನಾಥ್ ಮುಖ್ಯಪಾತ್ರ ವಹಿಸಿದ್ದರು. ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಪಿಎಸ್​ಎಲ್​ವಿ (Polar Satellite Launch Vehicle – PSLV) ಉಡಾವಣಾ ವಾಹನ ರೂಪಿಸುವ ತಂಡದಲ್ಲಿ ಟೀಂ ಲೀಡರ್ ಆಗಿ ಕಾರ್ಯನಿರ್ವಹಿಸಿದ್ದರು.

ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ಮೂರು ವರ್ಷ ಕೆಲಸ ಮಾಡಿದ್ದರು. ಬಾಹ್ಯಾಕಾಶ ಆಯೋಗದಲ್ಲಿ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿದ್ದರು. ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ಜನವರಿ 22, 2018ರಿಂದ ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಇಸ್ರೋ ಅಧ್ಯಕ್ಷರಾಗಿರುವ ಕೆ.ಶಿವನ್ ಅವರ ಸ್ಥಾನಕ್ಕೆ ಸೋಮನಾಥ್ ಬರಲಿದ್ದಾರೆ.

ಹೈ ಥ್ರಸ್ಟ್ ಸೆಮಿ ಕ್ರಯೊಜೆನಿಕ್ ಎಂಜಿನ್ ಅಭಿವೃದ್ಧಿ ಚಟುವಟಿಕೆ ನಿರ್ವಹಿಸಿದ ತಂಡದಲ್ಲಿ ಸೋಮನಾಥ್ ಶ್ರಮಿಸಿದ್ದರು. ಈ ಯಂತ್ರಗಳನ್ನು ಸುರಕ್ಷಿತ ವಾತಾವರಣದಲ್ಲಿ ಪರಿಶೀಲಿಸಲು ಬೇಕಿರುವ ವ್ಯವಸ್ಥೆಯನ್ನೂ ಅವರು ರೂಪಿಸಿದ್ದರು. ಇಸ್ರೋದ ಮಹತ್ವಾಕಾಂಕ್ಷಿ ಪ್ರಯತ್ನವಾಗಿದ್ದ ಚಂದ್ರಾಯಣ-2 ಬಾಹ್ಯಾಕಾಶ ನೌಕೆಯ ಲ್ಯಾಂಡರ್​ಗೆ ಬಳಸಿದ್ದ ಎಂಜಿನ್​ಗಳ ಅಭಿವೃದ್ಧಿ ಮತ್ತು ಜಿಸ್ಯಾಟ್-9ರಲ್ಲಿ ಬಳಕೆಯಾದ ಎಲೆಕ್ಟ್ರಿಕ್ ಪ್ರೊಪಲ್ಷನ್ ವ್ಯವಸ್ಥೆಯನ್ನು ರೂಪಿಸಿದ ಶ್ರೇಯವೂ ಸೋಮನಾಥ್ ಅವರಿಗೆ ಸೇರುತ್ತದೆ.

ಉಡಾವಣಾ ವಾಹನಗಳ ಆಕೃತಿ ರೂಪಿಸುವುದು, ಚಲನೆಯ ಲೆಕ್ಕಾಚಾರಗಳು, ಯಾಂತ್ರಿಕತೆ ಮತ್ತು ಉಡಾವಣಾ ವಾಹನಗಳ ಸಂಯೋಜನೆಯಲ್ಲಿ ಸೋಮನಾಥ್ ಅವರ ಪರಿಶ್ರಮ ಸಾಕಷ್ಟಿದೆ. ಪಿಎಸ್​ಎಲ್​ವಿ ಉಪಗ್ರಹ ಉಡಾವಣಾ ವಾಹನದ ವಿನ್ಯಾಸಕ್ಕೆ ಅಗತ್ಯವಿದ್ದ ಹಲವು ಮೆಕ್ಯಾನಿಕಲ್ ಸಂಯೋಜನೆಗಳನ್ನು ಸೋಮನಾಥ್ ಅಚ್ಚುಕಟ್ಟಾಗಿ ರೂಪಿಸಿದರು. ಈ ಬೆಳವಣಿಗೆಯ ನಂತರ ಪಿಎಸ್​ಎಲ್​ವಿ ವಿಶ್ವದ ನೆಚ್ಚಿನ ಉಪಗ್ರಹ ಉಡಾವಣಾ ವಾಹನ ಎನಿಸಿತು.

ಕೇರಳದ ಕೊಲ್ಲಂನಲ್ಲಿರುವ ಟಿಕೆಂಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿರುವ ಸೋಮನಾಥ್, ಬೆಂಗಳೂರಿನ ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್ ಸೈನ್ಸ್​ನಲ್ಲಿ ಏರೊಸ್ಪೇಸ್ ಎಂಜಿನಿಯರಿಂಗ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ 1985ರಲ್ಲಿ ಸೇರಿದರು.

ಇದನ್ನೂ ಓದಿ: ನೋಕ್ಕು ಕೂಲಿಗಾಗಿ ಇಸ್ರೊ ಟ್ರಕ್ ತಡೆದರು: ಕೇರಳಕ್ಕೆ ಕಳಂಕ ತರುತ್ತಿರುವ ನೊಕ್ಕು ಕೂಲಿ ಬಗ್ಗೆ ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆ ಇದನ್ನೂ ಓದಿ: ಇಸ್ರೋ ಸಾಧಕಿ ರೂಪಾಗೆ ಟಿವಿ9 ಪ್ರಶಸ್ತಿ ಪ್ರಧಾನ; ವಿಡಿಯೋ ನೋಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್