ಭಾರತದ ರೂಪಾಂತರಿ ಕೊರೊನಾ ಚಿಂತೆಗೀಡುಮಾಡುವ ತಳಿ ಎಂದ ವಿಶ್ವ ಆರೋಗ್ಯ ಸಂಸ್ಥೆ

Variant of Concern: ಇಷ್ಟು ದಿನ ಭಾರತದಲ್ಲಿ ಎರಡನೇ ಅಲೆಗೆ B.1.617 ಕಾರಣವಿರಬಹುದು ಎಂಬ ಅನುಮಾನ ಇತ್ತಾದರೂ ಅದನ್ನು ಹೊಸ ಮಾದರಿಯೆಂದು ಗಮನಿಸಲಾಗುತ್ತಿತ್ತು. ಇದೀಗ ಸದ್ಯದ ಬೆಳವಣಿಗೆಗಳನ್ನು ಅವಲೋಕಿಸಿದ ನಂತರ ಬ್ರಿಟನ್, ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾ ರೂಪಾಂತರಿ ವೈರಾಣುಗಳ ಸಾಲಿಗೆ ಭಾರತೀಯ ಮಾದರಿಯನ್ನೂ ಸೇರಿಸಲಾಗಿದೆ.

ಭಾರತದ ರೂಪಾಂತರಿ ಕೊರೊನಾ ಚಿಂತೆಗೀಡುಮಾಡುವ ತಳಿ ಎಂದ ವಿಶ್ವ ಆರೋಗ್ಯ ಸಂಸ್ಥೆ
ಸೌಜನ್ಯ : ಅಂತರ್ಜಾಲ
Follow us
Skanda
|

Updated on: May 11, 2021 | 7:58 AM

ದೆಹಲಿ: ಭಾರತವೀಗ ಕೊರೊನಾ ಎರಡನೇ ಅಲೆಯ ದುರ್ದೆಸೆಯಿಂದಾಗಿ ವಿಷಮ ಪರಿಸ್ಥಿತಿಯನ್ನು ಅನುಭವಿಸುತ್ತಿದೆ. ಈಗ ಹರಡುತ್ತಿರುವ ವೈರಾಣು ಮೊದಲು ಇದ್ದಿದ್ದಕ್ಕಿಂತಲೂ ಹೆಚ್ಚು ವೇಗವಾಗಿ ಹಬ್ಬುತ್ತಿದ್ದು, ಅಪಾಯಕಾರಿಯಾಗಿಯೂ ವರ್ತಿಸುತ್ತಿದೆ. ಈ ರೂಪಾಂತರಿ ಕೊರೊನಾ ವೈರಾಣುವಿನ ಗುಣಲಕ್ಷಣಗಳನ್ನು ಗಮನಿಸಿದ ವಿಶ್ವ ಆರೋಗ್ಯ ಸಂಸ್ಥೆ ಭಾರತದಲ್ಲಿ ರೂಪಾಂತರಗೊಂಡಿರುವ ಕೊವಿಡ್​ 19 ಮಾದರಿಯು ಚಿಂತೆಗೀಡುಮಾಡುವ ತಳಿಯಾಗಿದೆ ಎಂದು ಸೋಮವಾರ (ಮೇ 10) ತನ್ನ ಅಭಿಪ್ರಾಯ ತಿಳಿಸಿದೆ.

ಸಂಯುಕ್ತ ರಾಷ್ಟ್ರಗಳ ಆರೋಗ್ಯ ಒಕ್ಕೂಟವೂ ಈ ಬಗ್ಗೆ ಅಭಿಪ್ರಾಯ ನೀಡಿದ್ದು, ಭಾರತದಲ್ಲಿ ಮೊದಲ ಬಾರಿಗೆ ಕಳೆದ ಅಕ್ಟೋಬರ್ ವೇಳೆಯಲ್ಲಿ ಕಂಡುಬಂದ B.1.617 ರೂಪಾಂತರಿ ಮಾದರಿಯು ಕೊವಿಡ್ 19 ಮೂಲ ವೈರಾಣುವಿಗಿಂತ ಪರಿಣಾಮಕಾರಿಯಾಗಿದ್ದು, ವೇಗವಾಗಿ ಹಬ್ಬುತ್ತಿದೆ. ಅಲ್ಲದೇ, ಸದರಿ ರೂಪಾಂತರಿ ಕೊರೊನಾ ಲಸಿಕೆಗೆ ಪ್ರತಿರೋಧ ಒಡ್ಡುವ ಗುಣಗಳನ್ನು ಬೆಳೆಸಿಕೊಂಡಿರುವ ಸಾಧ್ಯತೆಯೂ ಇದೆ ಎಂಬ ಆತಂಕ ವ್ಯಕ್ತಪಡಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಕೊವಿಡ್ 19 ನಿರ್ವಹಣಾ ವಿಭಾಗದ ಮುಖ್ಯಸ್ಥರಾಗಿರುವ ಮರಿಯಾ ವ್ಯಾನ್ ಕೇರ್ಕೋವೇ ಸಹ ಭಾರತೀಯ ರೂಪಾಂತರಿ ಬಗ್ಗೆ ಮಾತನಾಡಿ, ಈ ಬಗ್ಗೆ ಲಭ್ಯವಿರುವ ಕೆಲ ಮಾಹಿತಿಗಳನ್ನು ಗಮನಿಸಿದರೆ ಭಾರತದಲ್ಲಿ B.1.617 ಅತ್ಯಂತ ವೇಗವಾಗಿ ಹಬ್ಬುತ್ತಿದೆ ಎನ್ನುವುದು ಕಂಡುಬರುತ್ತದೆ. ಸದ್ಯ ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಾಣುವಿನ ವಿವಿಧ ಮಾದರಿಗಳನ್ನು ವಿಂಗಡಿಸಿ ನೋಡಲಾಗುತ್ತಿದ್ದು, ಭಾರತೀಯ ರೂಪಾಂತರಿ ಮಾದರಿಯನ್ನು ಚಿಂತೆಗೀಡುಮಾಡುವ ತಳಿಯೆಂದು ಪರಿಗಣಿಸಿದ್ದೇವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದಿದ್ದಾರೆ.

ವಿಶ್ವ ಮಟ್ಟದಲ್ಲಿ ಭಾರತವು ಅತ್ಯಂತ ಕೆಟ್ಟ ಪರಿಸ್ಥಿತಿಗೆ ಸಾಕ್ಷಿಯಾಗುತ್ತಿದೆ. ಸೋಮವಾರ (ಮೇ 10) ಸುಮಾರು 3 ಲಕ್ಷದ 70 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 3,700 ಸೋಂಕಿತರು ಮೃತಪಟ್ಟಿದ್ದಾರೆ. ಎರಡನೇ ಅಲೆ ಭಾರತದಲ್ಲಿ ಬೀರುತ್ತಿರುವ ಪರಿಣಾಮ ಅತ್ಯಂತ ಗಂಭೀರವಾಗುತ್ತಿದ್ದು, ತಜ್ಞರ ಪ್ರಕಾರ ದಾಖಲೆಗಳಲ್ಲಿ ಇರುವ ಅಂಕಿ ಅಮಶಗಳಿಗಿಂತಲೂ ಹೆಚ್ಚು ಸಾವು ನೋವು ದೇಶದಲ್ಲಿ ಆಗುತ್ತಿದೆ ಎಂಬ ಅನುಮಾನವಿದೆ.

ಇಷ್ಟು ದಿನ ಭಾರತದಲ್ಲಿ ಎರಡನೇ ಅಲೆಗೆ B.1.617 ಕಾರಣವಿರಬಹುದು ಎಂಬ ಅನುಮಾನ ಇತ್ತಾದರೂ ಅದನ್ನು ಹೊಸ ಮಾದರಿಯೆಂದು ಗಮನಿಸಲಾಗುತ್ತಿತ್ತು. ಇದೀಗ ಸದ್ಯದ ಬೆಳವಣಿಗೆಗಳನ್ನು ಅವಲೋಕಿಸಿದ ನಂತರ ಬ್ರಿಟನ್, ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾ ರೂಪಾಂತರಿ ವೈರಾಣುಗಳ ಸಾಲಿಗೆ ಭಾರತೀಯ ಮಾದರಿಯನ್ನೂ ಸೇರಿಸಲಾಗಿದ್ದು, ಚಿಂತೆಗೀಡುಮಾಡುವ ಮಾದರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಕರೆದಿದೆ.

(Indian variant of Covid 19 B.1.617 is Variant of Concern says WHO)

ಇದನ್ನೂ ಓದಿ: ಕೊರೊನಾದಿಂದ ಪಾರಾಗಲು 2 ಮಾಸ್ಕ್ ಧರಿಸುವುದು ಪರಿಣಾಮಕಾರಿ; ಆದರೆ ಧರಿಸುವ ಕ್ರಮ ಯಾವುದು? ಇಲ್ಲಿದೆ ಮಾಹಿತಿ..

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ