AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ಬಜೆಟ್ 2020ಕ್ಕೆ ಕೌಂಟ್​ಡೌನ್, ಬಜೆಟ್ ಕುರಿತ ಜನರ ನಿರೀಕ್ಷೆಗಳೇನು?

ಇನ್ನು ಹೊಸ ವರ್ಷದ ಮೊದಲ ಬಜೆಟ್ ಬಗ್ಗೆ 130 ಕೋಟಿ ಭಾರತೀಯರು ನೂರಾರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದ್ರಲ್ಲೂ ಕೃಷಿಕರು, ಯುವಕರು ಮತ್ತು ಉದ್ಯಮಿಗಳ ಚಿತ್ತ ಬಜೆಟ್ ಮೇಲೆ ನೆಟ್ಟಿದೆ. ಹಾಗಿದ್ರೆ, ಬಜೆಟ್ ಕುರಿತ ಜನರ ನಿರೀಕ್ಷೆಗಳೇನು ಅನ್ನೋದಾದ್ರೆ. ಈ ಬಾರಿಯ ಬಜೆಟ್​ ಮೋದಿ ಸರ್ಕಾರದ ಪಾಲಿಗೆ ಅತ್ಯಂತ ಸವಾಲಿನ ಬಜೆಟ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಯಾಕಂದ್ರೆ, ದೇಶದ ಆರ್ಥ ವ್ಯವಸ್ಥೆ ತೀರಾ ಕುಸಿತಕಂಡಿದ್ದು, ಹಳಿ ತಪ್ಪಿರೋ ಆರ್ಥಿಕತೆಯನ್ನ ಮೋದಿ ಸರ್ಕಾರ ಸರಿದಾರಿಗೆ ತರಲೇ ಬೇಕಿದೆ. ಇಷ್ಟೇ ಅಲ್ಲ, […]

ಮೋದಿ ಬಜೆಟ್ 2020ಕ್ಕೆ ಕೌಂಟ್​ಡೌನ್, ಬಜೆಟ್ ಕುರಿತ ಜನರ ನಿರೀಕ್ಷೆಗಳೇನು?
ಸಾಧು ಶ್ರೀನಾಥ್​
|

Updated on:Feb 01, 2020 | 10:11 AM

Share

ಇನ್ನು ಹೊಸ ವರ್ಷದ ಮೊದಲ ಬಜೆಟ್ ಬಗ್ಗೆ 130 ಕೋಟಿ ಭಾರತೀಯರು ನೂರಾರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದ್ರಲ್ಲೂ ಕೃಷಿಕರು, ಯುವಕರು ಮತ್ತು ಉದ್ಯಮಿಗಳ ಚಿತ್ತ ಬಜೆಟ್ ಮೇಲೆ ನೆಟ್ಟಿದೆ. ಹಾಗಿದ್ರೆ, ಬಜೆಟ್ ಕುರಿತ ಜನರ ನಿರೀಕ್ಷೆಗಳೇನು ಅನ್ನೋದಾದ್ರೆ.

ಈ ಬಾರಿಯ ಬಜೆಟ್​ ಮೋದಿ ಸರ್ಕಾರದ ಪಾಲಿಗೆ ಅತ್ಯಂತ ಸವಾಲಿನ ಬಜೆಟ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಯಾಕಂದ್ರೆ, ದೇಶದ ಆರ್ಥ ವ್ಯವಸ್ಥೆ ತೀರಾ ಕುಸಿತಕಂಡಿದ್ದು, ಹಳಿ ತಪ್ಪಿರೋ ಆರ್ಥಿಕತೆಯನ್ನ ಮೋದಿ ಸರ್ಕಾರ ಸರಿದಾರಿಗೆ ತರಲೇ ಬೇಕಿದೆ. ಇಷ್ಟೇ ಅಲ್ಲ, ಕೃಷಿ, ಉದ್ಯೋಗ, ಆಟೋ ಮೊಬೈಲ್ ಸೇರಿದಂತೆ ಹಲವು ಕ್ಷೇತ್ರಗಳು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದು, ಬಜೆಟ್ ಬಗ್ಗೆ 130 ಕೋಟಿ ಜನತೆ ಭಾರಿ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದಾರೆ.

ಹಾಗಿದ್ರೆ, ಇಂದಿನ ಬಜೆಟ್ ಬಗ್ಗೆ ದೇಶದ ಜನರ ನಿರೀಕ್ಷೆಗಳೇನು? ಕೃಷಿಕರು, ಯುವಕರು, ಉದ್ಯಮಿಗಳು, ವ್ಯಾಪಾರಸ್ಥರು ಸೇರಿ ಜನಸಾಮಾನ್ಯರ ನಿರೀಕ್ಷೆಯ ಪಟ್ಟಿ ಹೇಗಿದೆ ಅನ್ನೋದನ್ನ ನಿಮ್ಗೆ ತೋರಿಸ್ತೀವಿ ನೋಡಿ.

ತೆರಿಗೆ ನಿರೀಕ್ಷೆ: ಸದ್ಯ ₹2.5 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. ₹2.5 ಲಕ್ಷದಿಂದ 5 ಲಕ್ಷದವರೆಗೆ ಶೇಕಡಾ 5ರಷ್ಟು ತೆರಿಗೆ ಇದೆ. ₹5 ಲಕ್ಷದಿಂದ10 ಲಕ್ಷದವರೆಗೆ ಶೇಕಡಾ 20 ರಷ್ಟು ತೆರಿಗೆ ಇದೆ. 10 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ಶೇಕಡಾ 30ರಷ್ಟು ತೆರಿಗೆ ವಿಧಿಸಲಾಗ್ತಿದೆ. ಇನ್ನು 50 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ಶೇಕಡಾ 10 ರಿಂದ ಶೇಕಡಾ 37 ಸರ್​ಚಾರ್ಜ್ ವಿಧಿಸಲಾಗ್ತಿದೆ. ಈ ಬಾರಿಯ ಬಜೆಟ್​ನಲ್ಲಿ ವೈಯಕ್ತಿಕ ಆದಾಯ ತೆರಿಗೆ ಮಿತಿ ಏರಿಕೆ ಮಾಡೋ ಸಾಧ್ಯತೆ ಇದೆ. ಸ್ಟ್ಯಾಂಡರ್ಡ್ ಡಿಡೆಕ್ಷನ್ 40 ಸಾವಿರದಿಂದ 75 ಸಾವಿರಕ್ಕೆ ಏರಿಕೆಯಾಗೊ ಸಾಧ್ಯತೆ ಇದೆ.

ಜನ ಸಾಮಾನ್ಯರ ನಿರೀಕ್ಷೆಗಳೇನು? ಗೃಹ ಸಾಲ ಮತ್ತು ಶೈಕ್ಷಣಿಕ ಸಾಲ ಪಡೆಯುವವರಿಗೆ ರಿಲೀಫ್ ಸಿಗೋ ನಿರೀಕ್ಷೆ ಇದೆ. ಸಾಲ ಪಡೆಯುವವರಿಗೆ ಬಡ್ಡಿ ತೆರಿಗೆ ವಿನಾಯಿತಿ ಮಿತಿ ಜಾಸ್ತಿ ಮಾಡೋದು. ಜಿಡಿಪಿ ಕುಸಿತ ಹಿನ್ನೆಲೆ ಆರ್ಥಿಕ ಚೇತರಿಕೆಗೆ ಕ್ರಮ ತೆಗೆದುಕೊಳ್ಳಬಹುದು. ಬಜೆಟ್​ನಲ್ಲಿ ಚಿನ್ನದ ಬೆಲೆ ಇಳಿಕೆ ಸಂಬಂಧ ಜನರಲ್ಲಿ ನಿರೀಕ್ಷೆ ಇದೆ. ವಿಮಾನ ಪ್ರಯಾಣ ದರ, ರೈಲ್ವೆ ಪ್ರಯಾಣದ ದರ ಇಳಿಕೆಯಾಗೊ ನಿರೀಕ್ಷೆ ಇದೆ. ಜತೆಗೆ ದಿನನಿತ್ಯ ವಸ್ತುಗಳ ಖರೀದಿ ಬೆಲೆ ಏರಿಕೆಯನ್ನೂ ತಡೆಯಬೇಕಾಗಿದೆ. ಇನ್ನು ನಿರುದ್ಯೋಗ ಸಮಸ್ಯೆ ಮೋದಿ ಸರ್ಕಾರ ಎದುರಿಸ್ತೋರೊ ದೊಡ್ಡ ಸವಾಲಾಗಿದ್ದು, ಹೀಗಾಗಿ ಉದ್ಯೋಗ ಸೃಷ್ಟಿಗೆ ಬಜೆಟ್​ನಲ್ಲಿ ಕ್ರಮ ಕೈಗೊಳ್ಳೋ ನಿರೀಕ್ಷೆ ಇದೆ.

ರೈತರ ನಿರೀಕ್ಷೆಗಳೇನು? ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಬಜೆಟ್​​ನಲ್ಲಿ ಕ್ರಮ ಕೈಗೊಳ್ಳೋ ನಿರೀಕ್ಷೆ ಇದೆ. ರೈತರು ಬೆಳೆದ ಬೆಳೆಗೆ ಉತ್ತಮ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಇನ್ನು ಬಜೆಟ್​ನಲ್ಲಿ ಕೃಷಿ ವಲಯಕ್ಕೆ ಎರಡು ಹೊಸ ಯೋಜನೆಗಳನ್ನ ಘೋಷಿಸುವ ನಿರೀಕ್ಷೆ ಇದೆ. ಕೃಷಿ ಉತ್ಪಾದನಾ ಸಂಘಟನೆ ಸೃಷ್ಟಿಸಿ ಯೋಜನೆ ಘೋಷಣೆ ಸಾಧ್ಯತೆ ಇದೆ. 500 ರಿಂದ 600 ಕೋಟಿ ವೆಚ್ಚದಲ್ಲಿ ಬೆಳೆ ವೈವಿಧ್ಯತೆ ಯೋಜನೆ ಘೋಷಿಸುವ ಸಾಧ್ಯತೆಯೂ ಇದೆ. ಇನ್ನು ಫೆಬ್ರವರಿ 8 ರಂದು ದೆಹಲಿ ವಿಧಾನಸಭೆಗೆ ಚುನಾವಣೆ ಮತ್ತು ಸೆಪ್ಟೆಂಬರ್​ನಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಎರಡೂ ರಾಜ್ಯಗಳ ಜನತೆ ಬಜೆಟ್​ನಲ್ಲಿ ವಿಶೇಷ ಪ್ಯಾಕೇಜ್​ನ ನಿರೀಕ್ಷೆಯಲ್ಲಿದ್ದಾರೆ.

ದೆಹಲಿ ಮತ್ತು ಬಿಹಾರ ಚುನಾವಣೆ: ದೆಹಲಿಯ ಮೆಟ್ರೋ ರೈಲು, ಹೆದ್ದಾರಿ ನಿರ್ಮಾಣಕ್ಕೆ ಅನುದಾನ ನೀಡೋ ಸಾಧ್ಯತೆ ಇದೆ. ದೆಹಲಿಯಲ್ಲಿ ಸ್ಲಂಗಳು, ಅನಧಿಕೃತ ಕಾಲೋನಿಗಳಿವೆ. ಅಲ್ಲಿ ಪಕ್ಕಾ ಮನೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಣ ನೀಡಬಹುದು. ದೆಹಲಿಯ ವಾಯುಮಾಲಿನ್ಯದ ನಿಯಂತ್ರಣಕ್ಕೆ ಯೋಜನೆ ಘೋಷಣೆ ನಿರೀಕ್ಷೆ ಇದೆ. ಬಿಹಾರ ರಾಜ್ಯ ವಿಶೇಷ ಆರ್ಥಿಕ ಪ್ಯಾಕೇಜ್​ ಬೇಡಿಕೆಯಿಟ್ಟಿದ್ದು, ಮೋದಿ ಸರ್ಕಾರ ಇಂದು ಸ್ಪಂದಿಸುವ ನಿರೀಕ್ಷೆ ಇದೆ. ಒಟ್ನಲ್ಲಿ, ಮೋದಿ ಬಜೆಟ್​ ಬಗ್ಗೆ ದೇಶದ ಜನರಲ್ಲಿ ನೂರಾರು ನಿರೀಕ್ಷೆಗಳಿದ್ದು, ಯಾವುದನ್ನೆಲ್ಲಾ ಈಡೇರಿಸ್ತಾರೊ ಕಾದು ನೋಡಬೇಕಿದೆ.

Published On - 9:25 am, Sat, 1 February 20