+ve News ದೇಶದ ಮೊದಲ ಕೊರೊನಾ ಲಸಿಕೆ ಪ್ರಯೋಗ ಸಕ್ಸಸ್ ಆಯ್ತು.. ಎಲ್ಲಿ?

ದೆಹಲಿ:ಕೊರೊನಾವನ್ನ ಹತ್ತಿಕ್ಕುವ ಮದ್ದನ್ನು ಕಂಡುಹಿಡಿಯಲು ಹಲವಾರು ದೇಶಗಳು ಹಗಲುರಾತ್ರಿ ಎನ್ನದೆ ಶ್ರಮಿಸುತ್ತಿವೆ. ಕೊರೊನಾ ಮಾರಿಯಿಂದ ಬೇಸತ್ತಿರುವ ಪ್ರತಿಯೊಂದು ದೇಶವು ಕೊರೊನಾ ನಿಯಂತ್ರಿಸುವ ಲಸಿಕೆಯ ತಯಾರಿಕೆಯ ಹಿಂದೆ ಬಿದ್ದಿದೆ.ಅದರಲ್ಲಿ ಭಾರತವೂ ಒಂದಾಗಿದ್ದು ಲಸಿಕೆಯ ತಯಾರಿಕೆಯ ಹಾದಿಯಲ್ಲಿ ಕೊಂಚ ಮುಂದೆ ಸಾಗಿದೆ ಎನ್ನಲಾಗಿದೆ. ಕೊರೊನಾವನ್ನ ಹತ್ತಿಕ್ಕಲು ಮಾನವನ ಮೇಲೆ ಲಸಿಕೆ ಪ್ರಯೋಗ ಮಾಡುವುದನ್ನು ಭಾರತ್ ಬಯೋಟೆಕ್‌ ಸಂಸ್ಥೆಯು ಹರಿಯಾಣದ ಪಿಜಿಐ ರೋಹ್ಟಕ್‌ನಲ್ಲಿ ಆರಂಭಿಸಿದೆ. ಲಸಿಕೆಯನ್ನು ಪಡೆದುಕೊಂಡ ಎಲ್ಲರೂ ಉತ್ತಮವಾಗಿ ಪ್ರತಿಕ್ರಿಯಿಸಿದ್ದು ಯಾವುದೇ ವ್ಯತಿರಿಕ್ತ ಪರಿಣಾಮ ಆಗಿಲ್ಲವೆಂದು ಹರಿಯಾಣ ಆರೋಗ್ಯ ಸಚಿವರಾದ […]

+ve News ದೇಶದ ಮೊದಲ ಕೊರೊನಾ ಲಸಿಕೆ ಪ್ರಯೋಗ ಸಕ್ಸಸ್ ಆಯ್ತು.. ಎಲ್ಲಿ?
ಸಾಧು ಶ್ರೀನಾಥ್​

Updated on: Jul 17, 2020 | 5:19 PM

ದೆಹಲಿ:ಕೊರೊನಾವನ್ನ ಹತ್ತಿಕ್ಕುವ ಮದ್ದನ್ನು ಕಂಡುಹಿಡಿಯಲು ಹಲವಾರು ದೇಶಗಳು ಹಗಲುರಾತ್ರಿ ಎನ್ನದೆ ಶ್ರಮಿಸುತ್ತಿವೆ. ಕೊರೊನಾ ಮಾರಿಯಿಂದ ಬೇಸತ್ತಿರುವ ಪ್ರತಿಯೊಂದು ದೇಶವು ಕೊರೊನಾ ನಿಯಂತ್ರಿಸುವ ಲಸಿಕೆಯ ತಯಾರಿಕೆಯ ಹಿಂದೆ ಬಿದ್ದಿದೆ.ಅದರಲ್ಲಿ ಭಾರತವೂ ಒಂದಾಗಿದ್ದು ಲಸಿಕೆಯ ತಯಾರಿಕೆಯ ಹಾದಿಯಲ್ಲಿ ಕೊಂಚ ಮುಂದೆ ಸಾಗಿದೆ ಎನ್ನಲಾಗಿದೆ.

ಕೊರೊನಾವನ್ನ ಹತ್ತಿಕ್ಕಲು ಮಾನವನ ಮೇಲೆ ಲಸಿಕೆ ಪ್ರಯೋಗ ಮಾಡುವುದನ್ನು ಭಾರತ್ ಬಯೋಟೆಕ್‌ ಸಂಸ್ಥೆಯು ಹರಿಯಾಣದ ಪಿಜಿಐ ರೋಹ್ಟಕ್‌ನಲ್ಲಿ ಆರಂಭಿಸಿದೆ. ಲಸಿಕೆಯನ್ನು ಪಡೆದುಕೊಂಡ ಎಲ್ಲರೂ ಉತ್ತಮವಾಗಿ ಪ್ರತಿಕ್ರಿಯಿಸಿದ್ದು ಯಾವುದೇ ವ್ಯತಿರಿಕ್ತ ಪರಿಣಾಮ ಆಗಿಲ್ಲವೆಂದು ಹರಿಯಾಣ ಆರೋಗ್ಯ ಸಚಿವರಾದ ಅನಿಲ್ ವಿಜ್ ಅವರು ಜನತೆಗೆ ತಿಳಿಸಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us