AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coronavirus Cases in India: 3 ಲಕ್ಷ ದಾಟಿದ ಸಾವಿನ ಸಂಖ್ಯೆ, ಹೊಸ ಕೊವಿಡ್ ಪ್ರಕರಣಗಳ ಸಂಖ್ಯೆ 2,22,315ಕ್ಕೆ ಇಳಿಕೆ

Covid 19 India: ಕಳೆದ 24 ಗಂಟೆಗಳ ಅವಧಿಯಲ್ಲಿ 222,315 ಪಾಸಿಟಿವ್ ಪ್ರಕರಣಗಳು ಪತ್ತೆಯಾದ ನಂತರ ದೇಶದಲ್ಲಿ ಕೊವಿಡ್ ರೋಗಿಗಳ ಸಂಖ್ಯೆ 26,752,447 ಕ್ಕೆ ಏರಿದೆ. 23,728,011ಮಂದಿ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳು 2,720,716 ರಷ್ಟಿದ್ದು, ಹಿಂದಿನ ದಿನಕ್ಕಿಂತ ಇದು 84,683 ರಷ್ಟು ಕಡಿಮೆಯಾಗಿದೆ.

Coronavirus Cases in India: 3 ಲಕ್ಷ ದಾಟಿದ ಸಾವಿನ ಸಂಖ್ಯೆ, ಹೊಸ ಕೊವಿಡ್ ಪ್ರಕರಣಗಳ ಸಂಖ್ಯೆ 2,22,315ಕ್ಕೆ ಇಳಿಕೆ
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ
|

Updated on:May 24, 2021 | 10:48 AM

Share

ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 4,454 ಜನರು ಕೊವಿಡ್ -19 ಗೆ ಬಲಿಯಾದ ನಂತರ ಕೊರೊನಾವೈರಸ್ ಕಾಯಿಲೆಯಿಂದ ಸಾವಿಗೀಡಾದವರ ಸಂಖ್ಯೆ 303,720 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ಈ ಮೂಲಕ ಅಮೆರಿಕ ಮತ್ತು ಬ್ರೆಜಿಲ್ ನಂತರದ ಕೊವಿಡ್- 19 ನಿಂದ 3,00,000 ಕ್ಕೂ ಹೆಚ್ಚು ಸಾವು ದಾಖಲಿಸಿದ ಮೂರನೇ ರಾಷ್ಟ್ರವಾಗಿದೆ ಭಾರತ. ಕಳೆದ ಕೆಲವು ದಿನಗಳಲ್ಲಿ, ಭಾರತದ ದೈನಂದಿನ ಕೊವಿಡ್ -19 ಸಾವಿನ ಸಂಖ್ಯೆ 4000 ರಷ್ಟನ್ನು ತಲುಪಿದೆ ಮತ್ತು ಹೆಚ್ಚಿನ ದಿನಗಳಲ್ಲಿ ಅದನ್ನು ದಾಟಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಮೇ 19 ರಂದು 4,529 ಸಾವು ವರದಿ ಆಗಿದೆ. ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ವಿಶ್ವದಲ್ಲಿ ಅತಿ ಹೆಚ್ಚು ಏಕದಿನ ಸಾವಿನ ಸಂಖ್ಯೆಯಾಗಿದೆ ಇದು.

ಕಳೆದ 24 ಗಂಟೆಗಳಲ್ಲಿ ಸಂಭವಿಸಿದ 4,454 ಸಾವು ಪ್ರಕರಣಗಳ ಪೈಕಿ ಮಹಾರಾಷ್ಟ್ರದಲ್ಲಿ 1,320, ಕರ್ನಾಟಕದಲ್ಲಿ 624, ತಮಿಳುನಾಡು – 422, ಉತ್ತರಪ್ರದೇಶ- 231, ಪಂಜಾಬ್‌- 192, ದೆಹಲಿ-189, ಕೇರಳ- 188, ಪಶ್ಚಿಮ ಬಂಗಾಳ- 156, ಬಿಹಾರ- 107, ಮತ್ತು ಆಂಧ್ರಪ್ರದೇಶದಲ್ಲಿ 104 ಸಾವು ಪ್ರಕರಣಗಳು ವರದಿ ಆಗಿವೆ

ದೇಶದಲ್ಲಿ ಈವರೆಗೆ ಒಟ್ಟು 3,03,720 ಸಾವುಗಳು ವರದಿಯಾಗಿವೆ .ಈ ಪೈಕಿ ಮಹಾರಾಷ್ಟ್ರದಿಂದ 88,620, ಕರ್ನಾಟಕದಿಂದ 25,282, ದೆಹಲಿಯಿಂದ 23,202, ತಮಿಳುನಾಡಿನಿಂದ 20,468, ಉತ್ತರಪ್ರದೇಶದಿಂದ 19,209, ಪಶ್ಚಿಮ ಬಂಗಾಳದಿಂದ 14,364, ಪಂಜಾಬ್‌ನಿಂದ 13,281 ಮತ್ತು ಛತ್ತೀಸಗಡದಿಂದ 12,586 ಸಾವು ವರದಿ ಆಗಿದೆ

ಕಳೆದ 24 ಗಂಟೆಗಳ ಅವಧಿಯಲ್ಲಿ 222,315 ಪಾಸಿಟಿವ್ ಪ್ರಕರಣಗಳು ಪತ್ತೆಯಾದ ನಂತರ ದೇಶದಲ್ಲಿ ಕೊವಿಡ್ ರೋಗಿಗಳ ಸಂಖ್ಯೆ 26,752,447 ಕ್ಕೆ ಏರಿದೆ. 23,728,011ಮಂದಿ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳು 2,720,716 ರಷ್ಟಿದ್ದು, ಹಿಂದಿನ ದಿನಕ್ಕಿಂತ ಇದು 84,683 ರಷ್ಟು ಕಡಿಮೆಯಾಗಿದೆ.

ಕೊವಿಡ್ ಲಸಿಕೆ ಬಗ್ಗೆ ಹೇಳುವುದಾದರೆ ಹಿಂದಿನ ದಿನ 9,42,722  ಡೋಸ್‌ಗಳನ್ನು ನೀಡಲಾಗಿದ್ದು ಈವರೆಗೆ 196,051,962 ಡೋಸ್‌ಗಳು ವಿತರಣೆ ಆಗಿದೆ.

ಕಳೆದ 24 ಗಂಟೆಗಳಲ್ಲಿ 1,928,127 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದುವರೆಗೆ ನಡೆಸಿದ ಒಟ್ಟು ಪರೀಕ್ಷೆಗಳ ಸಂಖ್ಯೆ 330 ದಶಲಕ್ಷವನ್ನು ಮೀರಿ 330,536,064 ಕ್ಕೆ ತಲುಪಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ. ಮೇ 18 ರ ನಂತರ ಇದು ಮೊದಲ ಬಾರಿಗೆ ಒಂದು ದಿನದಲ್ಲಿ ಎರಡು ದಶಲಕ್ಷಕ್ಕಿಂತ ಕಡಿಮೆ ಪರೀಕ್ಷೆಗಳನ್ನು ನಡೆಸಲಾಯಿತು; ಮೇ 18 ರಂದು 1,869,223 ಪರೀಕ್ಷೆಗಳನ್ನು ನಡೆಸಲಾಗಿದೆ.

ಕೊರೊನಾವೈರಸ್ ಹರಡುವಿಕೆ ನಿಯಂತ್ರಿಸಲು ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು) ತಿಂಗಳ ಅಂತ್ಯದವರೆಗೆ ನಿರ್ಬಂಧಗಳನ್ನು ವಿಸ್ತರಿಸಿದೆ. ಭಾನುವಾರ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮೇ 31 ರವರೆಗೆ ನಡೆಯುತ್ತಿರುವ ಲಾಕ್ ಡೌನ್ ಅನ್ನು ವಿಸ್ತರಿಸುವುದಾಗಿ ಘೋಷಿಸಿದರು.. ಮಹಾರಾಷ್ಟ್ರದ ಮುಂಬೈ ಜೂನ್ ವರೆಗೆ ಮಿನಿ-ಲಾಕ್ ಡೌನ್ ನಲ್ಲಿರಲಿದೆ.

ಇದನ್ನೂ ಓದಿ: ಮೃತ ಶಿಕ್ಷಕರನ್ನು ಕೊವಿಡ್ ವಾರಿಯರ್ಸ್ ಎಂದು ಪರಿಗಣಿಸಿ; ಟ್ವಿಟರ್​ನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯ

ಭಿಕ್ಷುಕರಿಗೆ ಕೊವಿಡ್​ ಕೇರ್​ ಸೆಂಟರ್; ಕೊರೊನಾ ಕಾಲದಲ್ಲಿ ಮಾನವೀಯತೆ ಮೆರೆದ ಉಡುಪಿಯ ಅನ್ಸಾರ್ ಅಹಮದ್

Published On - 10:41 am, Mon, 24 May 21