Bomb Threat: ಬ್ಯಾಗ್​ನಲ್ಲಿ ಬಾಂಬ್ ಇದೆ ಎಂದ ಇಂಡಿಗೋ ಪ್ರಯಾಣಿಕ; ಆಮೇಲೇನಾಯ್ತು?

| Updated By: ಸುಷ್ಮಾ ಚಕ್ರೆ

Updated on: Jul 22, 2022 | 8:15 AM

ವ್ಯಕ್ತಿ ಬಾಂಬ್ ಬೆದರಿಕೆ ಹಾಕಿದ ನಂತರ, ಪಾಟ್ನಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಇಂಡಿಗೋ 6E-2126 ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.

Bomb Threat: ಬ್ಯಾಗ್​ನಲ್ಲಿ ಬಾಂಬ್ ಇದೆ ಎಂದ ಇಂಡಿಗೋ ಪ್ರಯಾಣಿಕ; ಆಮೇಲೇನಾಯ್ತು?
ಹುಸಿ ಬಾಂಬ್ ಬೆದರಿಕೆ ಹಾಕಿದ ವ್ಯಕ್ತಿಯ ಬಂಧನ
Image Credit source: NDTV
Follow us on

ಪಾಟ್ನಾ: ದೆಹಲಿಗೆ ತೆರಳುತ್ತಿದ್ದ ಇಂಡಿಗೋ (Indigo) ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ತನ್ನ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಹೇಳಿಕೊಂಡಿದ್ದ. ಇದರಿಂದ ವಿಮಾನ ಸಿಬ್ಬಂದಿ ಮತ್ತು ಪ್ರಯಾಣಿಕರಲ್ಲಿ ಭಾರೀ ಆತಂಕ ಶುರುವಾಗಿತ್ತು. ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ವಿಮಾನವನ್ನು ಪಾಟ್ನಾದಲ್ಲಿ ಲ್ಯಾಂಡ್ ಮಾಡಲಾಗಿದೆ. ಬಳಿಕ, ಬಾಂಬ್ ಬೆದರಿಕೆ (Bomb Threat)  ಹಾಕಿದ ಆ ವ್ಯಕ್ತಿಯನ್ನು ಬಂಧಿಸಲಾಗಿದೆ.

ವ್ಯಕ್ತಿ ಬಾಂಬ್ ಬೆದರಿಕೆ ಹಾಕಿದ ನಂತರ, ಪಾಟ್ನಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಇಂಡಿಗೋ 6E-2126 ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ತಕ್ಷಣ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಾಂಬ್ ಸ್ಕ್ವಾಡ್ ಮತ್ತು ಪೊಲೀಸ್ ಸಿಬ್ಬಂದಿ ವಿಮಾನವನ್ನು ಪರಿಶೀಲಿಸಿ, ಆ ವಿಮಾನದಲ್ಲಿ ಯಾವುದೇ ಬಾಂಬ್ ಇಲ್ಲ ಎಂದು ಘೋಷಿಸಿದರು. ಬಾಂಬ್ ಇದೆ ಎಂದಿದ್ದ ವ್ಯಕ್ತಿಯ ಬ್ಯಾಗ್ ಅನ್ನು ಸಹ ಪರಿಶೀಲಿಸಲಾಗಿದ್ದು, ಅಲ್ಲಿಯೂ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಹುಸಿ ಬಾಂಬ್ ಬೆದರಿಕೆ ಹಾಕಿದ ಆರೋಪದಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.

ಇದನ್ನೂ ಓದಿ: Breaking News: ಆರ್​ಎಸ್​ಎಸ್​ ಕಚೇರಿ ಮೇಲೆ ಬಾಂಬ್ ದಾಳಿ; ಕಿಟಕಿ ಗಾಜುಗಳು ಪುಡಿಪುಡಿ

ಬಾಂಬ್ ಬೆದರಿಕೆ ಹಾಕಿದ್ದ ಪ್ರಯಾಣಿಕನನ್ನು ರಿಷಿ ಚಂದ್ ಸಿಂಗ್ ಎಂದು ಗುರುತಿಸಲಾಗಿದೆ. ಆತ ತನ್ನ ಬ್ಯಾಗ್​ನಲ್ಲಿ ಬಾಂಬ್ ಇದೆ ಎಂದು ಹೇಳಿದ್ದ. ನಂತರ ಬಾಂಬ್ ನಿಷ್ಕ್ರಿಯ ದಳವನ್ನು ಸ್ಥಳಕ್ಕೆ ಧಾವಿಸಿತು. ಆದರೆ, ಬಾಂಬ್ ಇದೆ ಎಂಬ ಸುದ್ದಿ ಕೇಳಿ ವಿಮಾನದಲ್ಲಿದ್ದ ಪ್ರಯಾಣಿಕರು ಬಹಳ ಹೆದರಿದ್ದಾರೆ ಎಂದು ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.

ಪಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಈ ಬಗ್ಗೆ ಮಾಹಿತಿ ನೀಡಿದ್ದು, ವಿಮಾನವನ್ನು ಸ್ಥಗಿತಗೊಳಿಸಲಾಗಿದ್ದು, ವಿಮಾನದೊಳಗೆ ಶೋಧ ನಡೆಸಲಾಗಿದೆ ಆದರೆ ಯಾವುದೇ ಬಾಂಬ್ ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ನಿನ್ನೆ ಆ ವಿಮಾನವನ್ನು ರದ್ದುಗೊಳಿಸಲಾಗಿದೆ. ಇಂದು ಬೆಳಿಗ್ಗೆ ಆ ವಿಮಾನ ಮತ್ತೆ ಪಾಟ್ನಾದಿಂದ ದೆಹಲಿಗೆ ಹೊರಡಲಿದೆ.

Published On - 8:11 am, Fri, 22 July 22