Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈನಿಂದ ರಾಂಚಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ರಕ್ತ ವಾಂತಿ ಮಾಡಿಕೊಂಡ ಪ್ರಯಾಣಿಕ, ವಿಮಾನ ತುರ್ತು ಭೂಸ್ಪರ್ಶ

ಇಂಡಿಗೋ ವಿಮಾನಯಾನ ಸಂಸ್ಥೆಯ ಮುಂಬೈ-ರಾಂಚಿ ವಿಮಾನವು ಪ್ರಯಾಣಿಕರೊಬ್ಬರ ವೈದ್ಯಕೀಯ ತುರ್ತು ಪರಿಸ್ಥಿತಿ ಇಂದಾಗಿ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಪ್ರಯಾಣಿಕರೊಬ್ಬರು ವಿಮಾನದಲ್ಲಿ ರಕ್ತ ವಾಂತಿ ಮಾಡಿಕೊಂಡಿದ್ದರು, ಕೂಡಲೇ ವಿಮಾನವನ್ನು ನಾಗ್ಪುರದಲ್ಲಿ ತುರ್ತು ಲ್ಯಾಡಿಂಗ್ ಮಾಡಿ, ಬಳಿಕ ಅವರನ್ನು ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮುಂಬೈನಿಂದ ರಾಂಚಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ರಕ್ತ ವಾಂತಿ ಮಾಡಿಕೊಂಡ ಪ್ರಯಾಣಿಕ, ವಿಮಾನ ತುರ್ತು ಭೂಸ್ಪರ್ಶ
ವಿಮಾನ
Follow us
ನಯನಾ ರಾಜೀವ್
|

Updated on:Aug 22, 2023 | 9:38 AM

ಇಂಡಿಗೋ(IndiGo) ವಿಮಾನಯಾನ ಸಂಸ್ಥೆಯ ಮುಂಬೈ-ರಾಂಚಿ ವಿಮಾನವು ಪ್ರಯಾಣಿಕರೊಬ್ಬರ ವೈದ್ಯಕೀಯ ತುರ್ತು ಪರಿಸ್ಥಿತಿ ಇಂದಾಗಿ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಪ್ರಯಾಣಿಕರೊಬ್ಬರು ವಿಮಾನದಲ್ಲಿ ರಕ್ತ ವಾಂತಿ ಮಾಡಿಕೊಂಡಿದ್ದರು, ಕೂಡಲೇ ವಿಮಾನವನ್ನು ನಾಗ್ಪುರದಲ್ಲಿ ತುರ್ತು ಲ್ಯಾಡಿಂಗ್ ಮಾಡಿ, ಬಳಿಕ ಅವರನ್ನು ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

62 ವರ್ಷದ ವ್ಯಕ್ತಿಯು ಪ್ರಯಾಣಿಕರು ಸಿಕೆಡಿ ಮತ್ತು ಕ್ಷಯರೋಗದಿಂದ ಬಳಲುತ್ತಿದ್ದರು ಮತ್ತು ವಿಮಾನದಲ್ಲಿ ರಕ್ತ ವಾಂತಿ ಮಾಡುತ್ತಿದ್ದರು. ಮುಂದಿನ ಪ್ರಕ್ರಿಯೆಗಾಗಿ ಮೃತದೇಹವನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ. ದೇವಾನಂದ್ ತಿವಾರಿ ಇಂಡಿಗೋ ಏರ್‌ಲೈನ್ಸ್ ವಿಮಾನ ಸಂಖ್ಯೆ 6E 5093 ರಲ್ಲಿ ಪ್ರಯಾಣಿಸುತ್ತಿದ್ದರು. ಅವರಿಗೆ ಕಿಡ್ನಿ ಸಮಸ್ಯೆ ಮತ್ತು ಟಿಬಿ ಇತ್ತು. ಪ್ರಯಾಣದ ಸಮಯದಲ್ಲಿ, ಅವರ ಆರೋಗ್ಯವು ಇದ್ದಕ್ಕಿದ್ದಂತೆ ಹದಗೆಟ್ಟಿತು.

ಕಳೆದ ವಾರವಷ್ಟೇ ನಾಗ್ಪುರದಲ್ಲಿ ಇಂಡಿಗೋ ಏರ್‌ಲೈನ್ಸ್ ಪೈಲಟ್ ಬೋರ್ಡಿಂಗ್ ಗೇಟ್‌ನಲ್ಲಿ ಪ್ರಜ್ಞೆ ತಪ್ಪಿ ಸಾವನ್ನಪ್ಪಿದ್ದರು. ಕಳೆದ ಗುರುವಾರ ಈ ಘಟನೆ ನಡೆದಿದೆ. ಪೈಲಟ್ ನಾಗ್ಪುರದಿಂದ ಪುಣೆಗೆ ಹೊರಡುವ ವಿಮಾನ ಏರಲು ಹೋಗುತ್ತಿದ್ದರು.

ಮತ್ತಷ್ಟು ಓದಿ: ವಿಮಾನದ ಟಾಯ್ಲೆಟ್​ನಲ್ಲಿ ಕುಸಿದು ಬಿದ್ದು ಪೈಲಟ್ ಸಾವು, ವಿಮಾನ ತುರ್ತು ಭೂಸ್ಪರ್ಶ

ಈ ಸಮಯದಲ್ಲಿ, ಅವರು ಬೋರ್ಡಿಂಗ್ ಗೇಟ್‌ನಲ್ಲಿ ಮೂರ್ಛೆ ಹೋದರು, ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. ಪೈಲಟ್‌ನನ್ನು ಕ್ಯಾಪ್ಟನ್ ಮನೋಜ್ ಸುಬ್ರಮಣ್ಯಂ (40) ಎಂದು ಗುರುತಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:37 am, Tue, 22 August 23